ನವದೆಹಲಿ:ಮಾರಕ ಕರೊನಾಗೆ ದೇಶಿಯ ಔಷಧ ಸಜ್ಜಾಗಿದೆ. ಮುಂಬೈನಲ್ಲಿ ಮುಖ್ಯ ಕಚೇರಿ ಹೊಂದಿರುವ ಗ್ಲೆನ್​ ಮಾರ್ಕ್​ ಕಂಪನಿ ಈ ಔಷಧ ತಯಾರಿಸಿದೆ. ಕೋವಿಡ್​ ರೋಗಿಗಳ ಮೇಲೆ ಪ್ರಯೋಗಿಸಲು ಕೇಂದ್ರ ಸರ್ಕಾರ ಅನುಮತಿಯನ್ನೂ ನೀಡಿದೆ.
ಗ್ಲೆನ್​ ಮಾರ್ಕ್​ ಫಾರ್ಮಾಸುಟಿಕಲ್ಸ್​​ ಕಂಪನಿ ಫೆಬಿಫ್ಲೂ ಹೆಸರಿನಲ್ಲಿ ಔಷಧ ತಯಾರಿಸಿದ್ದು, ಕೊರೊನಾದಿಂದ ಲಘು ಹಾಗೂ ಸಾಧಾರಣ ಸೋಂಕಿಗೆ ಒಳಗಾದವರಿಗೆ ಇದನ್ನು ನೀಡಬಹುದು ಎಂದು ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಪರವಾನಗಿ ನೀಡಿದ್ದಾರೆ.
ಇದನ್ನೂ ಓದಿ;ಜ್ವರ, ಕೆಮ್ಮು ಮಾತ್ರವಲ್ಲ, ಇವು ಕೂಡ ಕರೊನಾ ಲಕ್ಷಣಗಳು…! ಪರೀಕ್ಷಿಸಿಕೊಳ್ಳಿ…
ಫೆಬಿಫ್ಲೂ ಭಾರತದ ಮೊದಲ ಬಾಯಿಯ ಮೂಲಕ ತೆಗೆದುಕೊಳ್ಳುವ ಕರೊನಾ ನಿವಾರಕ ಔಷಧ ಎಂಬ ಹೆಗ್ಗಳಿಕೆ ಪಡೆದಂತಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ದೇಶದಲ್ಲಿ ಕರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ಈ ಔಷಧ ಬಳಕೆಗೆ ಅನುಮತಿ ಸಿಕ್ಕಿರುವುದು ಭಾರಿ ಪ್ರಯೋಜನವಾದಂತಾಗಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗ್ಲೆನ್​ ಸಲ್ಡಾನ್ಹಾ ಹೇಳಿದ್ದಾರೆ.
ಈ ಔಷಧ ಮಾತ್ರವಲ್ಲದೇ. ಇನ್ನೂ ಹಲವು ಭಾರತೀಯ ಕಂಪನಿಗಳು ಕರೊನಾ ಲಸಿಕೆ ಕಂಡು ಹಿಡಿಯುವಲ್ಲಿ ತೊಡಗಿವೆ. ಇನ್ನು ಕೆಲ ತಿಂಗಳಲ್ಲಿ ಮಾನವರ ಮೇಲೆ ಪ್ರಯೋಗಕ್ಕೆ ಸಜ್ಜಾಗಲಿವೆ.
ಇದನ್ನೂ ಓದಿ;ಕರೊನಾದಿಂದ ಕಾಪಾಡುತ್ತಿರುವ ಔಷಧಗಳಿವು; ಬೆಲೆ ಕೇಳಿದರೆ ತಲೆ ತಿರುಗುತ್ತೆ…!
ಫವಿಪಿರಾವಿರ್​ ಜಪಾನ್​ನಲ್ಲಿ ಶೀತಜ್ವರ ತಡೆಯಲು ಬಳಕೆಯಾಗುವ ವೈರಸ್​ ನಿಯಂತ್ರಕ ಔಷಧವಾಗಿದೆ. ಇದನ್ನು ಅವಿಗಾನ್​ ಅಥವಾ ಅಬಿಗಾನ್​ ಎಂದು ಕರೆಯಲಾಗುತ್ತದೆ. ಇದನ್ನೇ ಆಧರಿಸಿ ಫೆಭಿಫ್ಲೂ ತಯಾರಿಸಲಾಗಿದೆ.
ಕರೊನಾದ ಸಾವಿನ ಕುಣಿಕೆಯಿಂದ ಪಾರು ಮಾಡುತ್ತಿದೆ ಈ ಔಷಧ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 2 =
Remember me
