ನವದೆಹಲಿ: ಜಾಗತಿಕ ಮಟ್ಟದಲ್ಲಿ COVID19 ಕರೊನಾ ಸೋಂಕು ತ್ವರಿತವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆ 20,000ದ ಗಡಿ ದಾಟಿದೆ. ಇದೇ ವೇಳೆ, ಈ ಸೋಂಕು ಆರಂಭವಾದ ಚೀನಾವನ್ನೂ ಸ್ಪೇನ್​ ದೇಶ ಮರಣ ಪ್ರಮಾಣದಲ್ಲಿ ಹಿಂದಿಕ್ಕಿದೆ. ಭಾರತದಲ್ಲಿ ಸಾವಿನ ಸಂಖ್ಯೆ 10 ತಲುಪಿದೆ.ಕಳೆದ ಮೂರು ತಿಂಗಳ ಅವಧಿಯಲ್ಲಿ ಈ ಸೋಂಕು ಹರಡಿದ ಪ್ರಮಾಣ ಜಗತ್ತನ್ನೇ ತಲ್ಲಣಗೊಳಿಸಿದೆ. ಜಗತ್ತಿನಾದ್ಯಂತ ಈ ಸೋಂಕು ಈಗ 4 ಲಕ್ಷಕ್ಕೂ ಹೆಚ್ಚು ಜನರಿಗೆ ತಗುಲಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಎಲ್ಲ ರಾಷ್ಟ್ರಗಳೂ ತೆಗೆದುಕೊಳ್ಳುತ್ತಿವೆ. ಚೀನಾದ ವುಹಾನ್​ ನಲ್ಲಿ ಆರಂಭವಾದ ಈ ಸೋಂಕು ಈಗ ಜಗತ್ತಿನ ಮೂಲೆ ಮೂಲೆಗೂ ವ್ಯಾಪಿಸಿದೆ. ವೈದ್ಯಕೀಯ ಆಯಾಮಕ್ಕೆ ಹೊರತುಪಡಿಸಿಯೂ ಈ ಸೋಂಕು ಜಗತ್ತಿನ ಅರ್ಥ ವ್ಯವಸ್ಥೆ ಮೇಲೆ ಇದು ಭಾರಿ ನೆಗೆಟಿವ್ ಪರಿಣಾಮ ಬೀರಿದೆ.ಎಲ್ಲ ರಾಷ್ಟ್ರಗಳಲ್ಲೂ ಆಂತರಿಕವಾಗಿ ಮತ್ತು ಬಾಹ್ಯವಾಗಿ ಪ್ರಯಾಣ ನಿರ್ಬಂಧಗಳನ್ನು ಅನೇಕ ರಾಷ್ಟ್ರಗಳಲ್ಲಿ ಹೇರಲಾಗಿದೆ. ಲಂಡನ್​, ಮಿಲಾನ್​, ನ್ಯೂಯಾರ್ಕ್, ಮೆಲ್ಬೊರ್ನ್​ ಅಷ್ಟೇ ಏಕೆ ದೆಹಲಿ, ಮುಂಬೈ, ಬೆಂಗಳೂರು ಮತ್ತು ಇತರೆ ನಗರಗಳಲ್ಲೂ ಸ್ಥಳೀಯ ಸರ್ಕಾರಗಳು ಕಠಿಣ ಕ್ರಮಗಳನ್ನು ತೆಗೆದುಕೊಂಡಿವೆ. ಭಾರತದಲ್ಲಿ ಸದ್ಯ ಸೋಂಕು ಪೀಡಿತರ ಸಂಖ್ಯೆ 600ರ ಆಸುಪಾಸಿನಲ್ಲಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. (ಏಜೆನ್ಸೀಸ್)
ಗರಿಷ್ಠ ಸಂಖ್ಯೆಯ ಸಾವು-ನೋವು ಯಾವ್ಯಾವ ದೇಶಗಳಲ್ಲಿದೇಶ              ಸೋಂಕುಪೀಡಿತರು        ಒಟ್ಟುಸಾವು         ನಿನ್ನೆಯ ಸಾವಿನ ಸಂಖ್ಯೆಇಟಲಿ               69,176               6,820ಸ್ಪೇನ್​              47,610                3,434               +443ಚೀನಾ              81,218                3,281                   +4ಇರಾನ್​             27,017                2,077               +143ಫ್ರಾನ್ಸ್              22,304                1,100ಅಮೆರಿಕ             54,963                   784                 +4ಯುಕೆ                  8,077                  422ನೆದರ್ಲೆಂಡ್ಸ್​           5,560                  276ಬೆಲ್ಜಿಯಂ              4,937                  178                +56ಜರ್ಮನಿ              34,009                 172                +13

ಚೀನೀ ಸರ್ಕಾರದ ವಿರುದ್ಧ 20 ಲಕ್ಷ ಕೋಟಿ ಡಾಲರ್ ಮೌಲ್ಯದ ದಾವೆ ಹೂಡಿದ್ದೇಕೆ ಅಮೆರಿಕದ ಅಡ್ವೊಕಸಿ ಗ್ರೂಪ್ ?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 2 =
Remember me
