ಮುಂಬೈ:ಮಹಾರಾಷ್ಟ್ರದ ಸೊಲ್ಲಾಪುರದ ಸರ್ಕಾರಿ ಶಾಲೆಯೊಂದರ ಶಿಕ್ಷಕ ರಂಜಿತ್ ಸಿಂಗ್ ಡಿಸಾಲೆ ಅವರು ಗ್ಲೋಬಲ್​ ಟೀಚರ್​ ಪ್ರಶಸ್ತಿಗೆ ಭಾಜೀನರಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ಸಂಗತಿ. ಜಾಗತಿಕ ಮಟ್ಟದಲ್ಲಿ ಪ್ರಶಸ್ತಿ ಪಡೆದ ಬೆನ್ನಲ್ಲೇ ಇನ್ನೊಂದು ಅವಕಾಶ ರಂಜಿತ್​ ಅವರಿಗೆ ಒದಗಿಬಂದಿದೆ. ರಂಜಿತ್​ ಅವರನ್ನು ವಿಧಾನ ಪರಿಷತ್​ ಸದಸ್ಯರನ್ನಾಗಿ ಮಾಡಲು ಬಿಜೆಪಿ ಮುಂದಾಗಿದೆ.
ಇದನ್ನೂ ಓದಿ:‘ಗಂಡಿನ ಬದಲು ಹೆಣ್ಣಾಗಿದೆ, ತಿಂಗ್ಳಿಗೆ 30 ಸಾವಿರ ಕೊಡಿ’; ವಿಚಿತ್ರ ಬೇಡಿಕೆ ಇಟ್ಟ ಅಳಿಯನಿಗೆ ಅತ್ತೆ ಮಾವನಿಂದ ಪಾಠ
ರಂಜಿತ್ ಸಿಂಗ್​ ಅವರನ್ನು ನಾಮನಿರ್ದೇಶಿತ ಎಂಎಲ್​ಸಿ ಮಾಡಲು ನಾವು ಕೇಳಿಕೊಳ್ಳುತ್ತೇವೆ. ಈ ವಿಚಾರವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್​ ಪಾಟೀಲ್​ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್​ ಅವರೊಂದಿಗೆ ಮಾತನಾಡುತ್ತೇವೆ. ನಂತರ ರಾಜ್ಯಪಾಲರಿಗೆ ಪತ್ರ ಬರೆಯಲಾಗುವುದು ಎಂದು ಬಿಜೆಪಿ ನಾಯಕ ದಾರೇಕರ್​ ತಿಳಿಸಿದ್ದಾರೆ. ಶನಿವಾರದಂದು ರಂಜಿತ್​ ಅವರ ಮನೆಗೆ ಭೇಟಿ ನೀಡಿ ಅವರನ್ನು ಸನ್ಮಾನಿಸಿದ ಅವರು ಈ ಮಾತನ್ನು ಹೇಳಿದ್ದಾರೆ. ರಂಜಿತ್​ ಅವರನ್ನು ಪ್ರಶಂಸಿಸುವಂತೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡುವುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ:ಹೊಸ ಸಂಸತ್​ ಭವನದ ಭೂಮಿ ಪೂಜೆಗೆ ಮುಹೂರ್ತ ಫಿಕ್ಸ್​; ಮುಂದಿನ ವರ್ಷದ ಸ್ವಾತಂತ್ರ್ಯೋವಕ್ಕೆ ಸಿದ್ಧ
ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಕ್ಯೂಆರ್​ ಕೋಡ್​ ಪಠ್ಯಪುಸ್ತಕಗಳಲ್ಲಿ ರಂಜಿತ್​ ಮಾಡಿರುವ ಸಾಧನೆ ಗುರುತಿಸಿ ಅವರಿಗೆ ಗ್ಲೋಬಲ್​ ಟೀಚರ್​ ಅವಾರ್ಡ್​ ನೀಡಲಾಗಿದೆ. ಪ್ರಶಸ್ತಿಯಾಗಿ 1 ಮಿಲಿಯನ್ ಅಮೆರಿಕನ್ ಡಾಲರ್ ನೀಡಲಾಗಿದೆ. ಈ ಹಣದಲ್ಲಿ ಅರ್ಧ ಭಾಗವನ್ನು ಫೈನಲ್ ನಲ್ಲಿದ್ದ ಇತರ 9 ಶಿಕ್ಷಕರಿಗೆ ಹಂಚುವ ಮೂಲಕ 31 ವರ್ಷದ ರಂಜಿತ್ ಸಿಂಗ್ ಡಿಸಾಲೆ ಉದಾರತೆ ಮೆರೆದಿದ್ದಾರೆ. (ಪಿಟಿಐ)
https://www.vijayavani.net/bride-leaves-from-marriage-hall/
ಐದು ವರ್ಷದ ಮಗನ ಎದುರೇ ಹೋಯಿತು ಅಮ್ಮ, ಅಕ್ಕನ ಪ್ರಾಣ! ಕೊಲೆ ಮಾಡಿದ್ದು ಯಾರು ಎಂದು ಗೊತ್ತಾದರೆ ಬೆಚ್ಚಿ ಬೀಳುತ್ತೀರಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × four =
Remember me
