ನವದೆಹಲಿ:ಭಾರತದ ಮೊಟ್ಟ ಮೊದಲ ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ನಲ್ಲಿ ಯಾವುದೇ ತರಾತುರಿ ಮಾಡಲಾಗುತ್ತಿಲ್ಲ. ಬದಲಾಗಿ ಅಂತಾರಾಷ್ಟ್ರಿಯವಾಗಿ ಸ್ವೀಕಾರಾರ್ಹವಾಗಿರುವ ಮಾನದಂಡಗಳ ಅನುಸಾರವಾಗಿಯೇ ನಡೆದುಕೊಳ್ಳಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಸ್ಪಷ್ಟನೆ ನೀಡಿದೆ.
ಆಗಸ್ಟ್​ 15ರಂದು ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡುವ ವೇಳೆ ಘೋಷಣೆ ಮಾಡಲು ಅನುಕೂಲವಾಗುವಂತೆ ಆತುರಾತುರವಾಗಿ ಒಂದೇ ತಿಂಗಳಲ್ಲಿ ಕ್ಲಿನಿಕಲ್​ ಟ್ರಯಲ್​ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಜತೆಗೆ, ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞರು ಕೂಡ ಅನುಮಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ;ಸ್ವದೇಶಿ ಕರೊನಾ ಲಸಿಕೆಗೆ ಅಪಸ್ವರಗಳೆದ್ದಿರೋದೇಕೆ? ಆಗಸ್ಟ್​ 15ಕ್ಕೆ ಲಸಿಕೆ ಸಜ್ಜು ಎನ್ನುವುದು ಅವಾಸ್ತವಿಕವೇ?

ಇದಕ್ಕೆಲ್ಲ ಉತ್ತರ ನೀಡಿರುವ ಪುಣೆಯ ಐಸಿಎಂಆರ್​ನ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ ಸ್ಪಷ್ಟನೆ ನೀಡಿದೆ. ಭಾರತ್​ ಬಯೋಟೆಕ್​ ಇಂಟರ್​ ನ್ಯಾಷನಲ್​ ಸಂಸ್ಥೆ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಕಂಪನಿ ಕಂಡುಹಿಡಿದಿರುವ ಕೊವಾಕ್ಸಿನ್​ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲುದು ಎಂಬ ಭರವಸೆ ಮೂಡಿಸಿದೆ. ಈ ಕಾರಣಕ್ಕಾಗಿ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಲಾಗಿದೆ ಎಂದು ಐಸಿಎಂಆರ್​ ಹೇಳಿದೆ.
ಜಗತ್ತಿನ ವಿವಿಧ ದೇಶಗಳಲ್ಲಿ ಅಭಿವೃದ್ಧಿ ಹಂತದಲ್ಲಿರುವ ಎಲ್ಲ ಲಸಿಕೆಗಳನ್ನು ವೇಗವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅಂತೆಯೇ ದೇಶಿಯ ಲಸಿಕೆಗೂ ಇದೇ ಮಾನದಂಡಗಳು ಅನ್ವಯವಾಗಲಿವೆ ಎಂದು ತಿಳಿಸಿದೆ.
ಇದನ್ನೂ ಓದಿ;ಬೆಳಗಾವಿ ರೋಗಿಗಳು ಪಡೆಯಲಿದ್ದಾರೆ ದೇಶದ ಮೊಟ್ಟ ಮೊದಲ ಕರೊನಾ ಲಸಿಕೆ; ಕ್ಲಿನಿಕಲ್​ ಟ್ರಯಲ್​ಗೆ 12 ಸಂಸ್ಥೆಗಳ ಆಯ್ಕೆ
ಪ್ರಿ ಕ್ಲಿನಿಕಲ್​ ಹಂತದ ವಿಸ್ತೃತ ಮಾಹಿತಿಯನ್ನು ಪರಿಗಣಿಸಿ ಭಾರತೀಯ ಔಷಧ ಮಹಾನಿಯಂತ್ರಕರು ಒಂದು ಮತ್ತು ಎರಡನೇ ಹಂತದ ಕ್ಲಿನಿಕಲ್​ ಟ್ರಯಲ್​ಗೆ ಅನುಮತಿ ನಿಡಿದ್ದಾರೆ. ಅದರಂತೆ ಕ್ಲಿನಿಕಲ್​ ಟ್ರಯಲ್​ ಹಂತದಲ್ಲಿ ಐಸಿಎಂಆರ್​ ಸಹಕಾರ ನೀಡುತ್ತಿದೆ. ಇದಕ್ಕಾಗಿ ಬೆಳಗಾವಿ ಸೇರಿ ದೇಶದ 12 ವೈದ್ಯಕೀಯ ಸಂಸ್ಥೆಗಳನ್ನು ಗುರುತಿಸಲಾಗಿದೆ.
ಸಂಬಳ ಕೋಡೋಕೆ ಕಾಸಿಲ್ಲ ಎನ್ನುವ ಸರ್ಕಾರಕ್ಕೆ ಇದ್ಯಾಕೆ ಬೇಕು..? ಸಾಮಾನ್ಯರ ಆಕ್ರೋಶಕ್ಕೂ ಕಾರಣವಿಲ್ಲದಿಲ್ಲ…!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seven − 1 =
Remember me
