ನವದಹೆಲಿ:ಸ್ವಲ್ಪ ಹೆಚ್ಚೂಕಡಿಮೆ ಆಗಿದ್ದರೂ ಈ ಕಾರು ವಿಮಾನಕ್ಕೇ ಡಿಕ್ಕಿ ಹೊಡೆದಿರುತ್ತಿತ್ತು. ಆದರೆ ಅದರಿಂದ ಕಾರು ಸ್ವಲ್ಪದರಲ್ಲೇ ಬಚಾವಾಗಿದ್ದು, ಭಾರಿ ಅಪಘಾತವೊಂದು ತಪ್ಪಿಹೋಗಿದೆ. ಇಂಥದ್ದೊಂದು ಪ್ರಕರಣ ದೆಹಲಿ ವಿಮಾನನಿಲ್ದಾಣದಲ್ಲಿ ಮಂಗಳವಾರ ನಡೆದಿದೆ.
ಇಂಡಿಗೋ ಎ320 ನಿಯೋ ವಿಮಾನ ಹಾಗೂ ಗೋ ಫಸ್ಟ್​ ಏರ್​ಲೈನ್​ಗೆ ಸೇರಿದ್ದ ಕಾರು ಈ ಅಪಘಾತದಿಂದ ಬಚಾವಾಗಿವೆ. ವಿಮಾನನಿಲ್ದಾಣದ ಟರ್ಮಿನಲ್ 2ರಲ್ಲಿ ಪಾಟ್ನಾಗೆ ತೆರಳಬೇಕಿದ್ದ ವಿಮಾನ ನಿಂತಿತ್ತು. ಆ ಜಾಗಕ್ಕೆ ವೇಗವಾಗಿ ಚಲಿಸಿದ್ದ ಗೋ ಫಸ್ಟ್ ಏರ್​​ಲೈನ್ಸ್​ಗೆ ಸೇರಿರುವ ಮಾರುತಿ ಡಿಸೈರ್ ಕಾರು, ವಿಮಾನದ ಮೂತಿ ಭಾಗದ ಗಾಲಿಗೆ ಇನ್ನೇನು ಡಿಕ್ಕಿ ಹೊಡೆದೇ ಬಿಟ್ಟಿತು ಎಂಬಷ್ಟರಲ್ಲಿ ನಿಂತಿದೆ.
ವಿಮಾನಕ್ಕೆ ಯಾವುದೇ ಹಾನಿ ಆಗಿಲ್ಲ, ಯಾರಿಗೂ ಗಾಯವಾಗಿಲ್ಲ. ವಿಮಾನ ನಿಗದಿತ ಸಮಯಕ್ಕೆ ಟೇಕಾಫ್ ಆಗಿದೆ, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್​ನ ಏವಿಯೇಷನ್ ರೆಗ್ಯುಲೇಟರ್​ ತಿಳಿಸಿದ್ದಾರೆ. ಮತ್ತೊಂದೆಡೆ ಕಾರು ಚಾಲಕ ಮದ್ಯ ಸೇವಿಸಿದ್ದನೇ ಎಂಬ ಕುರಿತು ಪರೀಕ್ಷೆ ಮಾಡಲಾಗಿದ್ದು, ಕುಡಿದಿಲ್ಲ ಎಂಬುದು ದೃಢಪಟ್ಟಿದೆ. –ಏಜೆನ್ಸೀಸ್
ಮನೆ ಮೇಲೇ ಕುಸಿದ ಗುಡ್ಡ, ಮಕ್ಕಳಿಬ್ಬರು ಮಣ್ಣಿನಡಿ ಸಿಲುಕಿ ಸಾವು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 12 =
Remember me
