ಭೋಪಾಲ್:ಇಂಧನ ಬೆಲೆ ಏರಿಕೆ ಬಗೆಗಿನ ಸುದ್ದಿಗಾರರ ಪ್ರಶ್ನೆಗೆ ಕೋಪಗೊಂಡಿರುವ ಬಿಜೆಪಿ ನಾಯಕರೊಬ್ಬರು, “ನೀವು ಅಫ್ಘಾನಿಸ್ತಾನಕ್ಕೆ ಹೋಗಿಬಿಡಿ! ಅಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 50 ರೂಪಾಯಿ ಇದೆ” ಎಂದಿರುವ ಪ್ರಸಂಗ ನಡೆದಿದೆ. ಈ ಬಗೆಗಿನ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ಮಧ್ಯಪ್ರದೇಶದ ಕಟ್ನಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಾಮರತನ್ ಪಾಯಲ್​ ಅವರು ಈ ಮಾತು ಹೇಳಿದ್ದಾರೆ. ಸುದ್ದಿಗಾರರೊಬ್ಬರು, “ಪೆಟ್ರೋಲ್​ ಡೀಸೆಲ್​ ಬೆಲೆ ಏರಿಕೆ ಮಿತಿ ಮೀರಿದೆಯಲ್ಲಾ?” ಎಂದು ಕೇಳಿದಂತೆ, “ತಾಲಿಬಾನ್​​ ನಡೆಸುತ್ತಿರುವ ಅಫ್ಘಾನಿಸ್ತಾನಕ್ಕೆ ಹೋಗಿಬಿಡಿ. ಅಲ್ಲಿ ಪೆಟ್ರೋಲ್ ಲೀಟರ್​​ಗೆ 50 ರೂಪಾಯಿಗೆ ಸಿಗುತ್ತೆ… ಆದರೆ ಬಳಸುವವರು ಯಾರೂ ಇಲ್ಲ. ಅಲ್ಲಿ ಹಾಕಿಸಿಕೊಂಡು ಬನ್ನಿ” ಎಂದಿರುವ ಪಾಯಲ್​​, ಭಾರತದಲ್ಲಿ ಸುರಕ್ಷತೆಯಾದರೂ ಇದೆ. ಅದರ ಬಗ್ಗೆ ಯೋಚಿಸಿ ಎಂದಿದ್ದಾರೆ.
महंगाई के सवाल पर कटनी के BJP जिलाध्यक्ष ने कहा-
"अफगानिस्तान चले जाइए वहां पेट्रोल भरवाने वाला कोई भी नहीं है"#MadhyaPradesh#Afganisthan#PetrolDieselPriceHikepic.twitter.com/oYGjVhudkL
— News24 (@news24tvchannel)August 19, 2021

ಜೊತೆಗೆ, “ಕರೊನಾ ಮೂರನೇ ಅಲೆ ನಮ್ಮನ್ನು ಅಪ್ಪಳಿಸುವ ಪರಿಸ್ಥಿತಿ ಇದೆ… ನೀವು ಪತ್ರಕರ್ತರಾಗಿ ಪೆಟ್ರೋಲ್​ ಬೆಲೆಯ ಬಗ್ಗೆ ಮಾತನಾಡುತ್ತಿದ್ದೀರಾ..” ಎಂದು ಪಾಯಲ್​​ ಕುಟುಕಿದ್ದಾರೆ. ಈ ಬಗ್ಗೆ ಹಲವಾರು ನೆಟ್ಟಿಗರು ಮೀಮ್​ಗಳೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಮರತನ್ ಪಾಯಲ್ ಮತ್ತು ಅವರನ್ನು ಸುತ್ತುವರಿದಿದ್ದ ಬೆಂಬಲಿಗರು ಕರೊನಾ ಮುನ್ನೆಚ್ಚರಿಕೆ ಕ್ರಮವಾದ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲದಿರುವುದು, ಮಾಸ್ಕ್​ ಹಾಕಿಲ್ಲದಿರುವುದು ವಿಡಿಯೋದಲ್ಲಿ ಗೋಚರಿಸುತ್ತದೆ. ಇದು ಭಾರೀ ವಿಪರ್ಯಾಸ ಎಂದು ಮತ್ತೆ ಕೆಲವರು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 1 =
Remember me
