ಕರೊನಾದಿಂದ ಪಾರಾಗಲು ಅನೇಕರು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳತೊಡಗಿದ್ದಾರೆ. ಈಗಾಗಲೇ ದೆಹಲಿ, ತೆಲಂಗಾಣ ಸೇರಿ ಕೆಲವು ರಾಜ್ಯಗಳಲ್ಲಿ ಪೊಲೀಸರು ಕರೊನಾ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಕಷಾಯ, ಆಯುರ್ವೇದದ ಮೊರೆ ಹೋಗಿದ್ದಾರೆ.ಹಾಗೇ ಗೋವಾದ ಡಬೋಲಿಮ್​ ಏರ್​ಪೋರ್ಟ್​ನ ಅಧಿಕಾರಿಗಳು ಹೊಸ ಐಡಿಯಾದ ಮೂಲಕ ಕರೊನಾದಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುತ್ತಿದ್ದಾರೆ.
ಈ ಏರ್​ಪೋರ್ಟ್​ನಲ್ಲಿ ಯಾವುದೇ ಕಷಾಯ ಸರಬರಾಜು ಮಾಡಲಾಗುತ್ತಿಲ್ಲ. ಬದಲಿಗೆ ಔಷಧೀಯ ಅಂಶಗಳುಳ್ಳ ಚಹಾವನ್ನು ಸಿಬ್ಬಂದಿಗೆ ನೀಡಲಾಗುತ್ತಿದೆ. ಏರ್​ಪೋರ್ಟ್​ನಲ್ಲಿರುವವರು ಕರೊನಾ ಸೋಂಕಿಗೆ ಒಳಗಾಗುವ ಸಾಧ್ಯತೆ ಅತ್ಯಂತ ಹೆಚ್ಚಾಗಿರುತ್ತದೆ. ಹಾಗಾಗಿ ತಮ್ಮ ಇಮ್ಯೂನಿಟಿ ಹೆಚ್ಚಿಸಿಕೊಳ್ಳುವುದಕ್ಕೋಸ್ಕರ ಅಧಿಕಾರಿಗಳು ಈ ದಾರಿ ಕಂಡುಕೊಂಡಿದ್ದಾರೆ.ಈ ಮೆಡಿಸಿನ್​ಯುಕ್ತ ಚಹಾ ತಯಾರಿಕೆಯನ್ನು ಭಾರತೀಯ ಏರ್​ಪೋರ್ಟ್​ ಪ್ರಾಧಿಕಾರ ಸೆಂಟ್ರಲ್​ ಇಂಡಸ್ಟ್ರಿಯಲ್​ ಸೆಕ್ಯೂರಿಟಿ ಫೋರ್ಸ್​ ಸಹಯೋಗದೊಂದಿಗೆ ಶುರು ಮಾಡಿದೆ.ಇದನ್ನೂ ಓದಿ:ಪಾಕಿಸ್ತಾನದಲ್ಲಿ ಬಿಗೊ ಬ್ಯಾನ್​; ಟಿಕ್​ಟಾಕ್​ಗೆ ಕೊನೇ ಎಚ್ಚರಿಕೆ ರವಾನೆ
ಏರ್​ಪೋರ್ಟ್​ನಲ್ಲಿ ಕೆಲಸ ಮಾಡುತ್ತಿರುವವರ ಆರೋಗ್ಯದ ದೃಷ್ಟಿಯಿಂದ, ಅವರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಈ ಪ್ರಯತ್ನಕ್ಕೆ ಕೈ ಹಾಕಲಾಗಿದೆ ಎಂದು ಡಬೋಲಿಮ್ ಏರ್​ಪೋರ್ಟ್​ನ ಅಧಿಕೃತ ಟ್ವಿಟರ್​ ಖಾತೆಯಿಂದ ಟ್ವೀಟ್​ ಮಾಡಲಾಗಿದೆ. (ಏಜೆನ್ಸೀಸ್​)
VIDEO: ಮಾಸ್ಕ್​​​​ ತೆಗೆಯದೆ ತಿಂಡಿ ತಿನ್ನುವ ಸುಲಭ ವಿಧಾನ ಹೇಳಿಕೊಟ್ಟ ಬ್ರಿಟಿಷ್​ ಮಾಡೆಲ್​…!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − two =
Remember me
