ಪಣಜಿ:ಫೆಬ್ರವರಿ 1ರಿಂದ ಗೋವಾದಲ್ಲಿನ ಕ್ಯಾಸಿನೊಗಳಿಗೆ ಸ್ಥಳೀಯರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ತಿಳಿಸಿದ್ದಾರೆ.
ಕ್ಯಾಸಿನೊ ಉದ್ಯಮದ ಕಾಯ್ದೆಗಳನ್ನು ಮರು ಪರಿಶೀಲಿಸಲು ಮತ್ತು ಉದ್ಯಮವನ್ನು ನಿಯಂತ್ರಿಸಲು ರಾಜ್ಯ ಮಾರಾಟ ತೆರಿಗೆ ಆಯುಕ್ತರನ್ನು ನೇಮಿಸಲಾಗುವುದು ಎಂದು ಹೇಳಿದರು.
ಗೇಮಿಂಗ್​ ಕಮೀಷನ್​ನ್ನು ಆರಂಭಿಸಿ ಅದಕ್ಕೆ ತೆರಿಗೆ ಆಯುಕ್ತರನ್ನು ನೇಮಿಸಲಾಗುವುದು. ಮತ್ತು ಫೆಬ್ರವರಿ 1ರಿಂದ ಸ್ಥಳೀಯರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಪ್ರವಾಸಿಗರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಈ ಕ್ರಮವನ್ನು ಸ್ಥಳೀಯರ ಒತ್ತಾಯದ ಮೇರೆಗೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಗೇಮಿಂಗ್​ ಕಮೀಷನ್​ ಜಾರಿಗೆ ಬಂದ ಮೇಲೆ ಅದಕ್ಕೆ ಕ್ಯಾಸಿನೊ ಉದ್ದಿಮೆಯ ನೀತಿ ಬದಲಾವಣೆಗೆ ಅಧಿಕಾರ ನೀಡಲಾಗುತ್ತದೆ ಮತ್ತು ಅದೇ ಆಯೋಗವು ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸುತ್ತದೆ ಎಂದು ಸಾವಂತ್ ಹೇಳಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 8 =
Remember me
