ಪಣಜಿ:ಇಂದು ದೇಶದೆಲ್ಲೆಡೆ ರಕ್ಷಾ ಬಂಧನದ ಸಂಭ್ರಮ. ಅಕ್ಕ-ತಂಗಿಯರು ತಮ್ಮ ಅಣ್ಣ-ತಮ್ಮಂದಿರ ಶ್ರೀರಕ್ಷೆ ಮತ್ತು ಒಳಿತಿಗಾಗಿ ಪವಿತ್ರವಾದ ರಾಖಿ ಕಟ್ಟುತ್ತಾರೆ. ಒಡಹುಟ್ಟಿದವರ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಹಬ್ಬವೇ ರಕ್ಷಾ ಬಂಧನ. ಇದು ಒಂದು ರೀತಿಯ ಭಾವನಾತ್ಮಕ ಹಬ್ಬ ಎಂದರೆ ತಪ್ಪಾಗಲ್ಲ.
ಇದನ್ನೂ ಓದಿ:ಮಮತಾ ಬ್ಯಾನರ್ಜಿ ರಾಜೀನಾಮೆ ಕೇಳುವವರ ಬೆರಳು ಕತ್ತರಿಸಿ: ಟಿಎಂಸಿ ಸಂಸದನ ಸೆನ್ಸೇಷನಲ್‌ ಹೇಳಿಕೆ ವೈರಲ್‌
ಇಂತಹ ಸಂಭ್ರಮದ ನಡುವೆ ದಕ್ಷಿಣ ಗೋವಾದ 43 ವರ್ಷದ ಮಹಿಳೆಯೊಬ್ಬರ ಪಾಲಿಗೆ ವಿಶೇಷ ಕ್ಷಣವಾಗಿತ್ತು. ಕಿಡ್ನಿ ಕೊಟ್ಟ ಜೀವದಾನ ಮಾಡಿದ ತಮ್ಮನಿಗೆ ರಾಖಿ ಕಟ್ಟಿ ಭಾವುಕರಾದರು. ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಅಕ್ಕನಿಗೆ 35 ವರ್ಷದ ಸಹೋದರನಿಂದ ಈ ವರ್ಷ ಏಪ್ರಿಲ್​ನಲ್ಲಿ ಕಿಡ್ನಿ ದಾನ ಮಾಡಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ಮರು ಜೋಡಣೆ ಚಿಕಿತ್ಸೆ ಮಾಡಲಾಗಿತ್ತು.
ಇಬ್ಬರ ಹೆಸರನ್ನು ಗೌಪ್ಯವಾಗಿಡಲು ಕುಟುಂಬದ ಸದಸ್ಯರು ಮನವಿ ಮಾಡಿದ್ದು ಈ ಘಟನೆಯಿಂದ ಬೇರೆಯವರಿಗೆ ಪ್ರೇರಣೆಯಾದರೆ ಸಾಕು ಎಂದಿದ್ದಾರೆ. ಆತನ ತಮ್ಮನಿಗೆ ರಾಖಿ ಕಟ್ಟುವಾಗಿ ನನ್ನ ಪತ್ನಿ ಭಾವುಕಳಾದಳು. ಬಾಲ್ಯದಿಂದಲೂ ಅವರು ಆದರ್ಶ ಅಕ್ಕ-ತಮ್ಮ ಎಂದು ಮಹಿಳೆಯ ಪತಿ ತಿಳಿಸಿದ್ದಾನೆ.
ಮಹಿಳೆಯ ಮೂತ್ರಪಿಂಡ ಕಾಯಿಲೆ ಅಂತಿಮ ಹಂತದಲ್ಲಿದ್ದು, ಇದರಿಂದ ತುರ್ತು ಕಿಡ್ನಿ ಮರುಜೋಡಣೆ ಮಾಡಬೇಕಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ವಿವಾಹಿತನಾಗಿರುವ ಸಹೋದರ ತನ್ನ ಅಕ್ಕನಿಗೆ ಕಿಡ್ನಿ ದಾನ ಮಾಡಲು ಮುಂದಾಗಿದ್ದಾನೆ. ಮೊದಲು ಅವರಿಗೆ ಮೂತ್ರಕೋಶದ ಕಲ್ಲಿಗೆ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಅಗತ್ಯ ಒಪ್ಪಿಗೆ ಪಡೆದು ಕಿಡ್ನಿ ಮರುಜೋಡಣೆ ಮಾಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ಭಾರತ ಮಧ್ಯಸ್ಥಿಕೆ ವಹಿಸುವುದಿಲ್ಲ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 3 =
Remember me
