ಭೋಪಾಲ್​:ಬಕ್ರೀದ್​ ಹಬ್ಬಕ್ಕೆಂದು ತರಲಾಗಿದ್ದ ಆಡಿನ ಮರಿಯ ಮಾಲೀಕತ್ವದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ಪ್ರಕರಣ ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಘಟನೆ ಮಧ್ಯಪ್ರದೇಶದ ರೆವಾ ಜಿಲ್ಲೆಯಲ್ಲಿ ನಡೆದಿದೆ.
ಸಂಜಯ್​ ಖಾನ್​ ಹಾಗೂ ಶಾರುಖ್​ ಖಾನ್​ ಎಂಬ ಇಬ್ಬರು ವ್ಯಕ್ತಿಗಳು ಮೇಕೆಯ ಮಾಲೀಕತ್ವದ ವಿಚಾರವಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಇವರಿಬ್ಬರ ಸಮಸ್ಯೆಯಿಂದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಹತೇಂದ್ರನಾಥ್​ ಶರ್ಮಾ ಕಳೆದ ಆರು ತಿಂಗಳಿನಿಂದ ತಾನು ಬೆಳೆಸಿದ ಆಡು ಕಳೆದ ಆರು ತಿಂಗಳಿನಿಂದ ಕಾಣೆಯಾಗಿತ್ತು ಎಂದು ಸಂಜಯ್​ ಖಾನ್​ ಹೇಳಿದ್ದಾರೆ. ಇತ್ತ ಶಾರುಖ್​ ಖಾನ್​ ಬಕ್ರೀದ್ ಹಬ್ಬಕ್ಕೆ ಬಲಿ ಕೊಲಡಲೆಂದು ತಾನು 15 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದಾಗಿ ತಿಳಿಸಿದ್ಧಾರೆ.
ಇದನ್ನೂ ಓದಿ:VIDEO| ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಕ್ರಮ: ರಾಮಲಿಂಗಾರೆಡ್ಡಿ
ಇಬ್ಬರಿಗೂ ಆಡಿನ ಫೋಟೋವನ್ನು ಠಾಣೆಗೆ ಸಲ್ಲಿಸುವಂತೆ ಹೇಳಿದ್ದೆವು. ಅದರಂತೆ ಮಾರನೇ ದಿನ ಶಾರುಖ್​ ಹಾಗೂ ಸಂಜಯ್​ ಇಬ್ಬರು ಆಡಿನ ಫೋಟೋವನ್ನು ಸಲ್ಲಿಸಿದ್ದು, ಎರಡು ಚಿತ್ರಗಳು ಒಂದೇ ರೀತಿ ಇದ್ದಿದ್ದರಿಂದ ಪ್ರಕರಣ ಮತ್ತಷ್ಟು ಜಟಿಲವಾಯಿತು.
ಆಡನ್ನು ಠಾಣೆಯಲ್ಲಿ ಇರಿಸಿಕೊಂಡಿದ್ದ ಕಾರಣ ದೈನಂದಿನ ಕೆಲಸಗಳಿಗೆ ಹಾಗೂ ದಿನಂಪ್ರತಿ ಆಹಾರಕ್ಕೆ ತೊಂದರೆಯಾಗುತ್ತಿತ್ತು. ವ್ಯಾಜ್ಯವನ್ನು ಪರಿಹರಿಸುವಂತೆ ಸ್ಥಳೀಯ ಕಾರ್ಪೋರೇಟರ್​ ಒಬ್ಬರಿಗೆ ವಹಿಸಲಾಯಿತು. ಅದರಂತೆ ಶಾರುಖ್​ ಹಾಗೂ ಸಂಜಯ್​ ಇಬ್ಬರನ್ನು ಸಹ ಠಾಣೆಗೆ ಕರೆಸಿ ಮಾತನಾಡಿಸಲಾಯಿತು.
ರಾಜಿ ಸಂಧಾನದ ಪ್ರಕಾರ ಆಡನ್ನು ಸಂಜಯ್​ ಇಟ್ಟುಕೊಳ್ಳಬೇಕಾಗಿದ್ದು, ಅದಕ್ಕೆ ಯಾವುದೇ ಹಾನಿ ಮಾಡದಂತೆ ಇಬ್ಬರಿಂದಲೂ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಆಡಿನ ವ್ಯವಹಾರಕ್ಕೆ ಪತ್ರ ಇಲ್ಲದಿರುವುದರಿಂದ ಸಮಸ್ಯೆ ಬಗೆಹರಿಸಲು ಕಷ್ಟವಾಯಿತು ಎಂದು ಪೊಲೀಸ್​ ಅಧಿಕಾರಿ ಹತೇಂದ್ರನಾಥ್​ ಶರ್ಮಾ ತಿಳಿಸಿದ್ದಾರೆ.
ಪಾರ್ಕಿಂಗ್​ ಸಿಬ್ಬಂದಿಯಂತೆ ಪೋಸ್​ ನೀಡಿ ಐಷಾರಾಮಿ ಕಾರುಗಳನ್ನು ಕದ್ದ ಖದೀಮ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
