ನವದೆಹಲಿ:ಸಾಮಾನ್ಯವಾಗಿ ಕೈಯಲ್ಲೊಂದು ಮೊಬೈಲ್​ಫೋನ್​ ಇದ್ದುಬಿಟ್ಟರೆ ಸಾಕು, ಕಂಡಕಂಡಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರೇನೂ ಕಡಿಮೆ ಇಲ್ಲ. ಅಂಥವರು ಈ ವಿಡಿಯೋ ನೋಡಲೇಬೇಕು. ಏಕೆಂದರೆ ಸೆಲ್ಫಿ ತೆಗೆದುಕೊಳ್ಳುವ ಮೊದಲು ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ಆಪತ್ತು ಖಚಿತ.
ಸೆಲ್ಫಿ ಕ್ರೇಜ್​ಗೆ ಪ್ರಪಾತಕ್ಕೆ ಬಿದ್ದ, ನೀರಲ್ಲಿ ಕೊಚ್ಚಿಹೋದ, ಅಪಘಾತಕ್ಕೆ ಒಳಗಾದ ಹಲವು ಪ್ರಕರಣಗಳಿವೆ. ಆದರೆ ಈ ಪ್ರಕರಣ ಅವೆಲ್ಲವುಗಳಿಂತ ಭಿನ್ನ. ಆಡಿನ ಮುಂದೆ ಹುಡುಗಾಟ ಮಾಡಲು ಹೋದ ಹುಡುಗಿಯೊಬ್ಬಳು ಸರಿಯಾದ ಏಟನ್ನು ತಿಂದುಬಿಟ್ಟಿದ್ದಾಳೆ. ಅಂಥದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯುವತಿಯೊಬ್ಬಳು ಹಳ್ಳಿಗಾಡಿನ ರಸ್ತೆಯಂತಿರುವ ಪ್ರದೇಶವೊಂದರಲ್ಲಿ ಕಟ್ಟಿಹಾಕಿದ್ದ ಆಡನ್ನು ಕಂಡು ಅದು ಕಾಣಿಸುವಂತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಾಳೆ. ಮೂತಿ ಮುಂದಕ್ಕೆ ಚಾಚಿ ಮುತ್ತಿಕ್ಕುವ ರೀತಿ ಪೋಸ್ ಕೊಡುತ್ತ ಆಡು ಕಾಣಿಸುವಂತೆ ಸೆಲ್ಫಿ ವಿಡಿಯೋ ಮಾಡುತ್ತಿರುತ್ತಾಳೆ. ಅಷ್ಟರಲ್ಲಿ ಹಗ್ಗದ ಸಹಿತ ಅವಳ ಹತ್ತಿರದವರೆಗೆ ಬಂದ ಆಡು ಹಿಂದಿನಿಂದ ಅವಳ ತಲೆಗೆ ಡಿಚ್ಚಿ ಹೊಡೆಯುತ್ತದೆ. ಆಡಿನ ಹೊಡೆತಕ್ಕೆ ಯುವತಿ ಬೀಳುತ್ತಿದ್ದಂತೆ ವಿಡಿಯೋ ಮೊಟಕುಗೊಳ್ಳುತ್ತದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ವೈರಲ್ ಆಗುತ್ತಿದ್ದು, ತಮಾಷೆಯೂ ಸೇರಿ ತರಹೇವಾರಿ ಕಮೆಂಟ್​ಗಳು ಕೂಡ ಬರುತ್ತಿವೆ. (ಏಜೆನ್ಸೀಸ್)
ಹುಡುಗಾಟಕ್ಕಿಳಿದ ಹುಡುಗಿಗೆ ಆಡಿನ ಕಾಟ!ವಿವರಗಳಿಗೆhttps://t.co/YaFZZbZDD9ನೋಡಿpic.twitter.com/xh60VmomWZ
— Vijayavani (@VVani4U)March 14, 2021

ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ; ಸುಳ್ಳು ಸುತ್ತೋಲೆ ಸೃಷ್ಟಿಸಿದವರ ವಿರುದ್ಧ ಕ್ರಿಮಿನಲ್ ಕೇಸ್-ಡಿಸಿಎಂ

ಮೋಜು-ಮೃತ್ಯು.. ಶುರುವಾಯ್ತಾ ಬೇಸಿಗೆ ದುರಂತ?; ಬೆಂಗಳೂರಿನಲ್ಲಿ ಟೆಕ್ಕಿಯಾಗಿದ್ದವ ಶೆಟ್ಟಿಕೆರೆಯಲ್ಲಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
