ಮುಂಬೈ:ಮುಸ್ಲಿಮರ ಬಕ್ರೀದ್​ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿವೆ. ಕೋವಿಡ್​-19 ಪಿಡುಗು ಇಲ್ಲದೇ ಹೋಗಿದ್ದರೆ ಈ ವೇಳೆಗಾಗಲೆ ಮುಸ್ಲಿಮರು ತಮಗೆ ಬೇಕಾದ ಕುರಿಗಳನ್ನು ಖರೀದಿಸಿ, ಅವುಗಳನ್ನು ಇನ್ನಷ್ಟು ಮೇಯಿಸಿ ಕೊಬ್ಬುವಂತೆ ಮಾಡಿರುತ್ತಿದ್ದರು. ಆದರೆ ಈ ಬಾರಿ ಕೋವಿಡ್​-19 ಪಿಡುಗು ಅವರ ಇಂಥ ಬಯಕೆಗಳಿಗೆ ತಣ್ಣೀರೆರೆಚಿದೆ.
ಹಾಗೆಂದು ಮುಸ್ಲಿಮರು ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಮಾರುಕಟ್ಟೆಗೆ ಹೋಗಿ, ಹುಡುಕಿ, ತಡಕಿ ಕುರಿಗಳನ್ನು ತರಲು ಸಾಧ್ಯವಾಗದಿದ್ದರೆ ಏನಂತೆ. ಆನ್​ಲೈನ್​ನಲ್ಲಿ ಆ ಸೌಲಭ್ಯ ಇದೆಯಲ್ಲ? ಅದನ್ನು ಬಳಸಿಕೊಂಡು ತಮ್ಮಿಷ್ಟದ ಕುರಿಯನ್ನು ಆಯ್ಕೆ ಮಾಡಿಕೊಂಡು ಹಣ ಸಂದಾಯ ಮಾಡಿದರೆ ಮನೆಬಾಗಿಲಿಗೆ ಕುರಿಯನ್ನು ಡೆಲಿವರಿ ಮಾಡಲಾಗುತ್ತದೆ.
ಇದನ್ನೂ ಓದಿ:ಕರೊನಾ ಪರೀಕ್ಷೆ ಬಳಿಕ ತನ್ನ ನಂಬರ್ ಬದಲು ಡಿಸಿ ನಂಬರ್ ಕೊಟ್ಟ ಭೂಪ: ಮುಂದೇನಾಯ್ತು ನೀವೇ ನೋಡಿ!
ಇಂಥ ಒಂದು ಸೌಲಭ್ಯ ಮುಂಬೈನಲ್ಲಿ ಆರಂಭವಾಗಿದೆ. ಜೋಗೇಶ್ವರಿಯಲ್ಲಿರುವ ಹಾಜಿ ಗೋಟ್​ ಫಾರ್ಮ್​ ಇಂಥ ಸೌಲಭ್ಯ ಆರಂಭಿಸಿದೆ. ತನ್ನ ವೆಬ್​ಸೈಟ್​ನಲ್ಲಿ ತನ್ನಲ್ಲಿ ಲಭ್ಯವಿರುವ ಎಲ್ಲ ಮಾದರಿಯ ಕುರಿಗಳ ಚಿತ್ರವನ್ನು ಅಲ್ಲಿ ಪ್ರದರ್ಶಿಸಿದೆ. ಅದನ್ನು ನೋಡಿ, ಯಾವ ಕುರಿ ಇಷ್ಟವಾಗುತ್ತದೋ ಆ ಕುರಿಯನ್ನು ಗುರುತಿಸಿ, ಅದರ ಬೆಲೆಯನ್ನು ಪಾವತಿಸಿದರೆ ಸಾಕು. ಮರುದಿನ ಬೆಳಗ್ಗೆಯೊಳಗೆ ಕುರಿ ಗ್ರಾಹಕರರ ಮನೆಯಲ್ಲಿ ಇರುತ್ತದೆ.
ಕರೊನಾವೈರಾಣು ಸೋಂಕಿನ ಹಿನ್ನೆಲೆಯಲ್ಲಿ ಜನರು ಗುಂಪುಗೂಡುವುದನ್ನು ತಪ್ಪಿಸಬೇಕಾಗಿದೆ. ಆದ್ದರಿಂದ, ನಾವು ಈ ಆಲೋಚನೆ ಮಾಡಿದೆವು. ಆನ್​ಲೈನ್​ನಲ್ಲೇ ಕುರಿಗಳನ್ನು ನೋಡಿ ಆರ್ಡರ್​ ಕೊಟ್ಟರೆ ಮರುದಿನದೊಳಗೆ ಕುರಿಯನ್ನು ಗ್ರಾಹಕರಿಗೆ ತಲುಪಿಸಲಾಗುತ್ತದೆ ಎಂದು ಹಾಜಿ ಗೋಟ್​ ಫಾರ್ಮ್​ನ ವಸೀಂ ಖಾನ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ 8 ವರ್ಷದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ, ನಾಲ್ವರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
