ಜೈಪುರ:ರೇಷನ್​ ಕಾರ್ಡ್​ನ್ನು ಕುಟುಂಬಸ್ಥರ ಹೆಸರಿನಲ್ಲಿ ಮಾಡಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಒಂದು ಊರಿನಲ್ಲಿ ಊರಿನ ದೇವರಾದ ಹನುಮ ದೇವ ಮತ್ತು ಮುರಳಿ ಮನೋಹರನ ಹೆಸರಲ್ಲೂ ರೇಷನ್​ ಕಾರ್ಡ್​ ಮಾಡಿಸಲಾಗಿದೆ. ಅದಷ್ಟೇ ಅಲ್ಲದೆ ಪ್ರತಿ ತಿಂಗಳು ಆ ಕಾರ್ಡ್​ಗಳಿಗೆ ಬರುವ ಸೀಮೆಎಣ್ಣೆಯನ್ನೂ ತೆಗೆದುಕೊಳ್ಳಲಾಗುತ್ತಿದೆಯಂತೆ.
ಇಂತದ್ದೊಂದು ವಿಚಿತ್ರ ಘಟನೆ ರಾಜಸ್ಥಾನದ ಭರತ್​ಪುರ ಜಿಲ್ಲೆಯ ರುಡಾವಲ್ ಪಂಚಾಯಿತಿಯಲ್ಲಿ ನಡೆಯುತ್ತಿದೆ. ಹನುಮ ದೇವರ ಹೆಸರಿನಲ್ಲಿ ಎಪಿಎಲ್​ ಕಾರ್ಡ್​ ಮಾಡಿಸಲಾಗಿದೆ. ಹನುಮನ ವಯಸ್ಸನ್ನು 81 ವರ್ಷ ಎಂದು ಬರೆಸಲಾಗಿದ್ದು, ತಂದೆಯ ಹೆಸರನ್ನು ಕೇಸರಿ ಎಂದು ಬರೆಸಲಾಗಿದೆ. ಅದರ ಜತೆ ಒಂದಿಷ್ಟು ಹೆಸರನ್ನು ಕುಟುಂಬಸ್ಥರು ಎಂದು ನಮೂದಿಸಲಾಗಿದೆ.
ಮುರುಳಿ ಮನೋಹರ್​ ಜೀ ಹೆಸರಿನ ಎಪಿಲ್​ ಕಾರ್ಡ್​ನಲ್ಲಿ 121 ವರ್ಷ ವಯಸ್ಸನ್ನು ನಮೂದಿಸಲಾಗಿದೆ. ಈ ಎರಡೂ ಕಾರ್ಡ್​ಗಳಲ್ಲಿ ಹನುಮ ದೇವರು ಮತ್ತು ಮುರುಳಿ ಮನೋಹರ ದೇವರ ಫೋಟೋವನ್ನೂ ಲಗತ್ತಿಸಲಾಗಿದೆ.ಈ ನಕಲಿ ಕಾರ್ಡ್​ಗಳ ಸುದ್ದಿ ಹರಿದಾಡುತ್ತಿದ್ದಂತೆಯೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ರುಡಾವಲ್​ನ ಈ ಕಾರ್ಡ್​ಗಳ ಬಗ್ಗೆ ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಬಿಡುಗಡೆಯಾದ ದಿನವೇ ಲೀಕ್​ ಆದ ರಾಬರ್ಟ್​! 3,200ಕ್ಕೂ ಹೆಚ್ಚು ಲಿಂಕ್​ ಪತ್ತೆ!

ಗಂಡನನ್ನು ಕುರ್ಚಿಗೆ ಕಟ್ಟಿ, ಸೆಕ್ಸ್​ ಮಾಡಿ ಕೊಲೆ ಮಾಡಿದ ಐದನೇ ಹೆಂಡತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
