ನವದೆಹಲಿ:ಕುಸ್ತಿಪಟು ವಿನೇಶ್ ಫೋಗೇಟ್ ಅವರು ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾಗವಹಿಸಲು ಮೋಸ ಮಾಡಿದ್ದರು ಎಂದು ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಆರೋಪಿಸಿದ್ದಾರೆ. ಅದಕ್ಕಾಗಿ ದೇವರು ಆಕೆಯನ್ನು ಶಿಕ್ಷಿಸಿದ್ದಾನೆ. ಪದಕ ಗೆಲ್ಲಲು ಸಾಧ್ಯವಾಗದೆ ಫೋಗೆಟ್​ ನಿರಾಸೆ ಎದುರಿಸಿದರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಡೈಮಂಡ್ ಲೀಗ್‌: ಫೈನಲ್‌ ಪ್ರವೇಶಿಸಿದ ಭಾರತದ ಚಿನ್ನ ಹುಡುಗ ನೀರಜ್ ಚೋಪ್ರಾ!
ಸ್ಪರ್ಧಿಯೊಬ್ಬರು ಒಂದೇ ದಿನದಲ್ಲಿ ಎರಡೆರಡು ತೂಕದ ವಿಭಾಗಗಳಲ್ಲಿ ಟ್ರಯಲ್ಸ್ ನೀಡಲು ಸಾಧ್ಯವೇ ಎಂಬುದು ನನ್ನ ಪ್ರಶ್ನೆಯಾಗಿದೆ. ತೂಕದ ನಂತರ ಟ್ರಯಲ್ಸ್​ಗಳನ್ನು ಒಬ್ಬರಿಗಾಗಿ ಐದು ಗಂಟೆಗಳ ಕಾಲ ನಿಲ್ಲಿಸಬಹುದೇ. ಇವೆಲ್ಲವೂ ವಿನೇಶ್ ಮಾಡಿರುವ ಮೋಸ ವಾಗ್ದಾಳಿ ನಡೆಸಿದ್ದಾರೆ.ನೀವು ನ್ಯಾಯಯುತವಾಗಿ ಕುಸ್ತಿ ಗೆಲ್ಲಿಲ್ಲ. ವಾಮ ಮಾರ್ಗದ ಮೂಲಕ ಅಲ್ಲಿಗೆ ಹೋಗಿದ್ದೀರಿ. ಅದಕ್ಕಾಗಿ ದೇವರು ನಿಮ್ಮನ್ನು ಶಿಕ್ಷಿಸಿದ್ದಾನೆ ಎಂದು ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷರು ಹೇಳಿದರು.
ಹರಿಯಾಣ ವಿಧಾನಸಭಾ ಚುನಾವಣೆಗೆ ಜುಲಾನಾದಿಂದ ವಿನೇಶ್ ಫೋಗೇಟ್ ಅವರನ್ನು ಕಾಂಗ್ರೆಸ್​ ಅಭ್ಯರ್ಥಿಯಾಗಿ ಹೆಸರಿಸಿದ ಒಂದು ದಿನದ ಬಳಿಕ ಅವರು ವಿನೇಶ್ ಟೀಕೆ ಮಾಡಿದ್ದಾರೆ.
ವಿನೇಶ್‌ಗೆ ಒಲಿಂಪಿಕ್ಸ್‌ಗೆ ಹೋಗಲು ಅರ್ಹತೆಯೇ ಹೊಂದಿರಲಿಲ್ಲ. ಅವರು ಒಲಿಂಪಿಕ್ಸ್‌ನಲ್ಲಿ ಇನ್ನೊಬ್ಬ ಆಟಗಾರನ ಸ್ಪರ್ಧೆಯ ಅವಕಾಶ ಕಸಿದುಕೊಂಡಿದ್ದಾರೆ. ಟ್ರಯಲ್ಸ್‌ನಲ್ಲಿ ತನ್ನನ್ನು ಸೋಲಿಸಿದ ಹುಡುಗಿಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಗೊಂದಲ ಸೃಷ್ಟಿಸಿ ಒಲಿಂಪಿಕ್ಸ್‌ಗೆ ಹೋದಳು, ಅದಕ್ಕೆ ತಕ್ಕ ಶಾಸ್ತಿಯಾಗಿದೆ ಆ ಅಗೌರವಕ್ಕೆ ಅರ್ಹರಾದರು ಎಂದು ಬ್ರಿಜ್ ಭೂಷಣ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಬಜರಂಗ್ ಪುನಿಯಾ ಅವರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಟ್ರಯಲ್ಸ್ ಪೂರ್ಣಗೊಳಿಸದೆ ಏಪ್ಯನ್​ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಹರಿಯಾಣ ಭಾರತದ ಕಿರೀಟವಾಗಿದೆ. ಮತ್ತು ಅವರು ಸುಮಾರು 2.5 ವರ್ಷಗಳ ಕಾಲ ಕುಸ್ತಿ ಚಟುವಟಿಕೆಗಳನ್ನು ನಿಲ್ಲಿಸಿದರು. ಬಜರಂಗ್ ಟ್ರಯಲ್ಸ್ ಇಲ್ಲದೆ ಏಷ್ಯನ್ ಗೇಮ್ಸ್‌ಗೆ ಹೋಗಿದ್ದು ನಿಜವಲ್ಲವೇ? ನಾನು ಕುಸ್ತಿಯಲ್ಲಿ ಪರಿಣಿತರನ್ನು ಕೇಳಲು ಬಯಸುತ್ತೇನೆ,” ಭೂಷಣ್ ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಫೋಗಟ್ ಮತ್ತು ಪುನಿಯಾ ಶುಕ್ರವಾರ ಕಾಂಗ್ರೆಸ್ ಸೇರುವ ಮೂಲಕ ತಮ್ಮ ರಾಜಕೀಯ ಪ್ರವೇಶಿಸಿದ್ದಾರೆ. ಪೋಗಟ್ ಅವರನ್ನು ಚುನಾವಣೆಗೆ ಕಣಕ್ಕಿಳಿಸಿದರೆ, ಪುನಿಯಾ ಅವರನ್ನು ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು.
ವಿನೇಶ್ ಫೋಗಟ್ ಅವರನ್ನು “ಕಾಂಗ್ರೆಸ್ ಪಿತೂರಿಯ ಮುಖ” ಎಂದು ಕರೆದ ಭೂಷಣ್, ಕಾಂಗ್ರೆಸ್ ಮುಖಂಡ ದೀಪೇಂದರ್ ಹೂಡಾ ಮತ್ತು ಹೂಡಾ ಕುಟುಂಬದವರು ತನ್ನ ವಿರುದ್ಧ ರೂಪಿಸಿದ ಸಂಚಿನ ಭಾಗವಾಗಿದ್ದರು ಎಂದು ಹೇಳಿದ್ದಾರೆ.
ಹೆಣ್ಣುಮಕ್ಕಳಿಗೆ ಅಗೌರವ ತೋರಿದ ತಪ್ಪಿತಸ್ಥರು ಬಜರಂಗ್ ಮತ್ತು ವಿನೇಶ್, ಮತ್ತು ಚಿತ್ರಕಥೆಯನ್ನು ಬರೆದವರು ಭೂಪಿಂದರ್ ಹೂಡಾ ಅದಕ್ಕೆ ಹೊಣೆಗಾರರು ಎಂದು ಹೇಳಿದರು. ಪಕ್ಷ ಕೇಳಿದರೆ ಹರಿಯಾಣದಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ಭಾಗವಹಿಸುವುದಾಗಿ ಭೂಷಣ್ ಹೇಳಿದ್ದಾರೆ. ಅಲ್ಲದೆ, ಹರಿಯಾಣದಲ್ಲಿ ಯಾವುದೇ ಬಿಜೆಪಿ ಅಭ್ಯರ್ಥಿ ವಿನೇಶ್ ಅವರನ್ನು ಸೋಲಿಸುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen + twelve =
Remember me
