ಕಲ್ಯಾಣ (ಮಹಾರಾಷ್ಟ್ರ):ದುಷ್ಟಶಕ್ತಿಯನ್ನು ಓಡಿಸುವುದಾಗಿ ಹೇಳಿ ತಾಯಿ ಮತ್ತು ಮಗನ ಪ್ರಾಣ ತೆಗೆದ ಸ್ವಯಂಘೋಷಿತ ದೇವಮಾನವ ಸುರೇಂದ್ರ ಪಾಟೀಲ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಕಲ್ಯಾಣದಲ್ಲಿ ಖಡಕ್ಪಾಡಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 76 ವರ್ಷದ ವೃದ್ಧೆ ಹಾಗೂ 50 ವರ್ಷದ ಮಗನನ್ನು ಹೊಡೆದು ಸಾಯಿಸಿರುವ ಆರೋಪ ಈತನ ಮೇಲಿದೆ. ಈತನ ಜತೆಗೆ ಇನ್ನೂ ನಾಲ್ಕು ಮಂದಿ ದುಷ್ಟಶಕ್ತಿ ಓಡಿಸುವುದಾಗಿ ಹಲ್ಲೆ ಮಾಡಿದ್ದಾರೆ!
ಚಂದುಬಾಯಿ ತಾರೆ ಮತ್ತು ಪಂಡರಿನಾಥ್‌ ತಾರೆ ಅವರು ಮೃತಪಟ್ಟವರು. ‘ದೇವಮಾನವ’ ಸುರೇಂದ್ರ ಪಾಟೀಲ್‌ ಮಾತ್ರವಲ್ಲದೇ ಮೃತಪಟ್ಟಿರುವ ಪಂಡರಿನಾಥ್‌ ಅವರ 17 ವರ್ಷದ ಮಗ, ಸೋದರಳಿಯ ವಿನಾಯಕ್ ತಾರೆ, ಸೋದರ ಸೊಸೆ ಕವಿತಾ ತಾರೆ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಕಲ್ಯಾಣ್ ಅಟಾಲಿ ಗ್ರಾಮದವರು.
ಇದನ್ನೂ ಓದಿ:ಫೋನ್‌ ಇಲ್ಲದ ಜೀವನ ನನಗೆ ಬೇಡಮ್ಮಾ… ಸಾಯುವುದೇ ಮೇಲು…
ಪಂಡರೀನಾಥ್‌ ಅವರ ಸೊಸೆಯ ನಡವಳಿಕೆಯಲ್ಲಿ ಬದಲಾವಣೆ ಆಗತೊಡಗಿತ್ತು. ಇದ್ಯಾವುದೋ ದುಷ್ಟಶಕ್ತಿಯ ಕಾಟ ಎಂದು ಅವರು ಅಂದುಕೊಂಡಿದ್ದರು. ಈ ಬಗ್ಗೆ ಅವರು ಸ್ನೇಹಿತರೊಬ್ಬರ ಜತೆ ಚರ್ಚಿಸಿದಾಗ ಅವರು ‘ದೇವಮಾನವ’ ಸುರೇಂದ್ರ ಪಾಟೀಲ್‌ ಪರಿಚಯ ಮಾಡಿಸಿದರು.
ಈ ಹಿನ್ನೆಲೆಯಲ್ಲಿ ಪಂಡರೀನಾಥ ಮತ್ತು ಅವರ ಪತ್ನಿ ವಾರಕ್ಕೊಮ್ಮೆ ತಮ್ಮ ಸೊಸೆ ಕವಿತಾ ಅವರನ್ನು ಸುರೇಂದ್ರನ ಮನೆಗೆ ಕರೆದೊಯ್ಯುತ್ತಿದ್ದರು. ಸೊಸೆಯ ಮೇಲೆ ಸುರೇಂದ್ರ ಮಂತ್ರದ ಚಿಕಿತ್ಸೆ ನೀಡತೊಡಗಿದ. ಆದರೆ ಏನು ಮಾಡಿದರೂ ಸೊಸೆಯ ನಡವಳಿಕೆ ಸರಿಯಾಗಿಲ್ಲ ಎಂದು ಅತ್ತೆ-ಮಾವ ಹೇಳಿದಾಗ ಸುರೇಂದ್ರ ತಾನು ನಿಮ್ಮ ಮನೆಗೆ ಭೇಟಿ ನೀಡಬೇಕು, ಆಗ ಮಾತ್ರ ನಿಜವಾದ ಕಾರಣ ತಿಳಿಯುತ್ತದೆ ಎಂದ.
ಅದರಂತೆ ಮನೆಗೆ ಆತನನ್ನು ಕರೆದುಕೊಂಡು ಹೋದರು. ಆಗ ಸೊಸೆಯ ನಡವಳಿಕೆ ಸರಿಯಾಗಬೇಕಾದರೆ ಪಂಡರೀನಾಥ ಮತ್ತು ಆತನ ತಾಯಿಯ ಮೇಲೆ ಇರುವ ದುಷ್ಟಶಕ್ತಿಯನ್ನು ಹೊಡೆದೋಡಿಸಬೇಕು ಎಂದು ಈತ ಹೇಳಿದ. ಅದಕ್ಕೆ ಅವರು ಒಪ್ಪಿದಾಗ, ಒಂದೇ ಸಮನೆ ಹೊಡೆಯಲು ಶುರುಮಾಡಿದ.
ಕುಟುಂಬಸ್ಥರೂ ಕೋಲುಗಳನ್ನು ತಂದು ಹೊಡೆಯಲು ಶುರುಮಾಡಿದರು. ಅರಿಶಿಣವನ್ನು ಎಸೆದರು. ಮತ್ತೆ ಹೊಡೆದರು. ಹೀಗೆ ಸುಮಾರು ನಾಲ್ಕೈದು ಗಂಟೆ ಮಾಡಿದರು. ಹೀಗೆ ಆಗುತ್ತಿದ್ದಂತೆಯೇ ತಾಯಿ-ಮಗ ಎಚ್ಚರತಪ್ಪಿದರು. ಎಲ್ಲರೂ ಅವರ ಮೈಮೇಲಿದ್ದ ದುಷ್ಟಶಕ್ತಿ ಹೋಯಿತು ಎಂದು ಭಾವಿಸಿದರು. ಆದರೆ ಎರಡು ಗಂಟೆಗಳಾದರೂ ಎಚ್ಚರಗೊಳ್ಳದಿದ್ದಾಗ ಸಂದೇಹಗೊಂಡು ನೋಡಿದಾಗ ಇಬ್ಬರ ಉಸಿರೂ ನಿಂತಿದ್ದು ತಿಳಿಯಿತು!
ಘಟನೆಗೆ ಸಂಬಂಧಿಸಿದಂತೆ ಎಲ್ಲರನ್ನೂ ಬಂಧಿಸಲಾಗಿದೆ.
ಆನ್‌ಲೈನ್‌ಕ್ಲಾಸ್‌ನಿಂದ ದಶಕದ ನಂತರ ಕುಟುಂಬ ಸೇರಿದ ಬಾಲಕನ ರೋಚಕ ಕಥನ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × four =
Remember me
