ನವದೆಹಲಿ:ಟ್ವಿಟರ್, ಫೇಸ್​ಬುಕ್​, ವಾಟ್ಸ್​ಆ್ಯಪ್​ ಸೇರಿ ಹಲವು ಸೋಷಿಯಲ್ ಮೀಡಿಯಾ ಹಾಗೂ ಮೆಸೇಜಿಂಗ್ ಆ್ಯಪ್​ಗಳ ಭವಿಷ್ಯ ಭಾರತದ ಮಟ್ಟಿಗೆ ಸದ್ಯ ಆತಂಕದಲ್ಲಿದ್ದು, ಇವು ನಿಷೇಧಗೊಳ್ಳಲಿದೆಯೇ ಎಂಬ ಕುತೂಹಲ ಎರಡು ದಿನಗಳಿಂದ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಈ ನಡುವೆ ಇವೆಲ್ಲವುಗಳಿಗೆ ಸರ್ಕಾರ ಮತ್ತೊಂದು ಸೂಚನೆ ಕೊಟ್ಟಿದ್ದು, ಇವತ್ತೇ ತಮ್ಮ ಅಭಿಪ್ರಾಯ ತಿಳಿಸಬೇಕು ಎಂದು ಸರ್ಕಾರ ಸೂಚಿಸಿದೆ.
ಕೇಂದ್ರ ಸರ್ಕಾರ ತಂದಿರುವ ಹೊಸ ಇನ್​ಫಾರ್ಮೇಷನ್​ ಟೆಕ್ನಾಲಜಿ ರೂಲ್ಸ್​ಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಇಂಟರ್​ಮೀಡಿಯರಿ ಕಂಪನಿಗಳಿಗೆ ಅರ್ಥಾತ್​ ಫೇಸ್​ಬುಕ್​, ಟ್ವಿಟರ್ ಮುಂತಾದ ಕಂಪನಿಗಳಿಗೆ ಫೆಬ್ರವರಿಯಲ್ಲೇ ಸೂಚನೆ ನೀಡಿ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಆ ಗಡುವು ನಿನ್ನೆಗೇ ಮುಗಿದಿದೆ.
ಇದನ್ನೂ ಓದಿ:ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್​ ನಾಳೆಯಿಂದ ಭಾರತದಲ್ಲಿ ನಿಷೇಧ?; ಸೋಷಿಯಲ್ ಮೀಡಿಯಾದಲ್ಲಿ ಗರಿಗೆದರಿದ ಕುತೂಹಲ!
ಈ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾ ಇಂಟರ್​​ಮೀಡಿಯರಿ ಕಂಪನಿಗಳಿಂದ ಸರಿಯಾದ ಸ್ಪಷ್ಟನೆಗಳು ಸಿಗದ ಕಾರಣ ಸರ್ಕಾರ ಇಂದು ಮತ್ತೊಂದು ಸೂಚನೆ ಹೊರಡಿಸಿದೆ. ಕಾನೂನುಪಾಲನೆ ಕುರಿತು ಸಂಸ್ಥೆಗಳ ನಿಲುವು, ಕಂಪನಿಗಳ ವಿವರ, ಸಂಪರ್ಕಿಸಬೇಕಾದ ಅಧಿಕಾರಿಗಳ ಮಾಹಿತಿ ಎಲ್ಲವನ್ನೂ ಒದಗಿಸುವಂತೆ ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್​ ಆ್ಯಂಡ್ ಇನ್​ಫಾರ್ಮೇಷನ್​ ಟೆಕ್ನಾಲಜಿ ನೋಟಿಸ್ ರವಾನಿಸಿದೆ. ಮಾತ್ರವಲ್ಲ ಈ ಬಗ್ಗೆ ಆದಷ್ಟು ಬೇಗ, ಅದರಲ್ಲೂ ಇಂದೇ ಮಾಹಿತಿ ನೀಡಲು ಆದ್ಯತೆ ನೀಡುವಂತೆ ಆಗ್ರಹಿಸಿ ಸೂಚನೆ ನೀಡಿದೆ.
Ministry of Electronics & Information Technology asks all social media intermediaries compliance details over the new 'the InformationTechnology (Intermediary Guidelines and Digital Ethics Code) Rules, 2021'.pic.twitter.com/5hvWekHK8n
— ANI (@ANI)May 26, 2021

ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

ವಾಟ್ಸ್​ಆ್ಯಪ್​ ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ಬರಲಿದೆಯೇ?; ಪ್ರೈವೆಸಿಗಾಗಿ ದೆಹಲಿ ಹೈಕೋರ್ಟ್​ ಮೊರೆ ಹೋದ ಕಂಪನಿ..

ಟ್ವಿಟರ್​ನಲ್ಲಿ ಉಪೇಂದ್ರಗೆ 1 ಮಿಲಿಯನ್ ಫಾಲೋವರ್ಸ್; ಸ್ಯಾಂಡಲ್​ವುಡ್​​ನಲ್ಲಿ ಗರಿಷ್ಠ ಫಾಲೋವರ್ಸ್​ ಹೊಂದಿರುವ 2ನೇ ನಟ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − fifteen =
Remember me
