|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಪ್ರತಿ ವರ್ಷ ನೆರೆ ಹಾಗೂ ಬರದಿಂದ ಆಗುತ್ತಿರುವ ಬೆಳೆ ಹಾನಿಗೆ ನೀಡುತ್ತಿರುವ ಪರಿಹಾರದ ಮೊತ್ತ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಮನವಿ ಮಾಡಿದೆ. ಈ ವರ್ಷ ಸುಮಾರು 10 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಬೆಳೆ ಹಾನಿಯಾಗಿದ್ದು, ರೈತರು ಸರ್ಕಾರದಿಂದ ಪರಿಹಾರ ಮೊತ್ತ ಹೆಚ್ಚಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನೀಡುವ ಪರಿಹಾರ ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ರೀತಿಯಲ್ಲಿ ಅತ್ಯಂತ ಕಡಿಮೆ. ರೈತರು ಮಾಡುವ ವೆಚ್ಚವೂ ಸಿಗುತ್ತಿಲ್ಲ. ಆದ್ದರಿಂದಲೇ ಈ ಮೊತ್ತ ಪರಿಷ್ಕರಣೆ ಆಗಬೇಕು ಎಂಬುದು ರಾಜ್ಯದ ಬೇಡಿಕೆಯಾಗಿದೆ.
ಪ್ರಸ್ತುತ ಒಣ ಭೂಮಿಯ ಬೆಳೆಗಳಿಗೆ ಹೆಕ್ಟೇರ್​ಗೆ 6800 ರೂ., ನೀರಾವರಿಗೆ ಹೆಕ್ಟೇರ್​ಗೆ 13,500 ರೂ. ಹಾಗೂ ವಾಣಿಜ್ಯ ಬೆಳೆಗಳಿಗೆ ಹೆಕ್ಟೇರ್​ಗೆ 18,500 ರೂ. ಪರಿಹಾರ ನೀಡಲಾಗುತ್ತದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಬೆಳೆ ಹಾನಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿಯಮಾವಳಿ ರೂಪಿಸಬೇಕಾಗುತ್ತದೆ. ಈ ಸಂಬಂಧ ರಾಜ್ಯ ಸರ್ಕಾರ ಮನವಿ ಮಾಡಿದೆ ಎಂದು ಕೃಷಿ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಕೃಷಿ ಇಂದು ದುಬಾರಿಯಾಗುತ್ತಿದೆ. ಜಾನುವಾರುಗಳ ಆಹಾರ ಕ್ವಿಂಟಾಲ್​ಗೆ 700 ರೂ. ಇದ್ದದ್ದು ಈಗ 1300 ರೂ.ಗಳಿಗೆ ಏರಿಕೆಯಾಗಿದೆ. ರಸಗೊಬ್ಬರ, ಕೀಟನಾಶಕಗಳ ಬೆಲೆಯೂ ಹೆಚ್ಚಾಗಿದೆ. ಕೂಲಿಯ ದರಗಳು ಹೆಚ್ಚಿವೆ. ರೈತರಿಗೆ ಬೆಳೆ ಹಾನಿಯಾದರೆ ಸಿಗುವ ಪರಿಹಾರ ಸಾಲ ತೀರಿಸುವುದಕ್ಕೂ ಆಗುತ್ತಿಲ್ಲ. ಆದ್ದರಿಂದಲೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಪರಿಹಾರದ ಮೊತ್ತ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದೆ.
ಉತ್ಪಾದನೆ ಕುಸಿತ:ರಾಜ್ಯದಲ್ಲಿ ಈ ವರ್ಷ ಶೇ. 22 ಮಳೆ ಹೆಚ್ಚಾಗಿದೆ. ಇದರ ಪರಿಣಾಮ ಶೇ. 15 ರಿಂದ 20 ಕೃಷಿ ಉತ್ಪನ್ನದ ಉತ್ಪಾದನೆ ಕಡಿಮೆಯಾಗಬಹುದೆಂದು ಅಂದಾಜು ಮಾಡಲಾಗಿದೆ.
ಬೆಳೆ ಹಾನಿ ಪರಿಹಾರದ ಮೊತ್ತ ಹೆಚ್ಚಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದು ರಾಷ್ಟ್ರ ಮಟ್ಟದಲ್ಲಿ ಆಗಬೇಕಾಗಿರುವ ನಿರ್ಧಾರವಾಗಿದೆ. ರಾಜ್ಯದಲ್ಲಿ ನಷ್ಟದ ಸಮೀಕ್ಷೆ ಮಾಡಲು ತಿಳಿಸಿದ್ದೇವೆ.
|ಬಿ.ಸಿ. ಪಾಟೀಲ್ಕೃಷಿ ಸಚಿವ
ವಿಮೆಯಲ್ಲಿ ಗೋಲ್‍ಮಾಲ್ ಆಗುತ್ತಿದೆ. ಬೆಳೆ ಕಟಾವು ಅವೈಜ್ಞಾನಿಕವಾಗಿವೆ. ಬೆಳೆ ಪರಿಹಾರಕ್ಕೆ ರೈತರು ಅರ್ಜಿ ಹಾಕಿ ಕಾಯುತ್ತಿದ್ದಾರೆ. ರೈತರ ಸಂಕಷ್ಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕು. ರಾಜ್ಯ ಸರ್ಕಾರದಿಂದಲೇ ಪರಿಹಾರ ನೀಡಲಿ.
|ಜೆ.ಸಿ. ಬಯ್ಯಾರೆಡ್ಡಿಅಧ್ಯಕ್ಷ, ಪ್ರಾಂತ ರೈತ ಸಂಘ
ಮಳೆ ಜಾಸ್ತಿಯಾಗಿ ರೈತರು ಹಿಂದಿನ ವರ್ಷಗಳಿಗಿಂತ ಈ ವರ್ಷ ಹೆಚ್ಚು ಸಂಕಷ್ಟದಲ್ಲಿದ್ದಾರೆ. ಕೇಂದ್ರದ ಮೇಲೆ ಒತ್ತಡ ತಂದು ಕೂಡಲೇ ರೈತರಿಗೆ ಪರಿಹಾರ ಕೊಡಿಸಲು ಸರ್ಕಾರ ಪ್ರಯತ್ನ ನಡೆಸಬೇಕು. ಕಬ್ಬು ಬೆಳೆಗಾರರ ನೆರವಿಗೆ ವಿಶೇಷವಾಗಿ ಬರಬೇಕು.
|ಕುರುಬೂರು ಶಾಂತಕುಮಾರ್ಅಧ್ಯಕ್ಷ, ಕಬ್ಬು ಬೆಳೆಗಾರರ ಸಂಘ
ಫಸಲ್ ಬಿಮಾ ಯೋಜನೆಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಸಿಬಿಐಗೆ ದೂರು ನೀಡಿದರೂ ತನಿಖೆ ಕೈಗೆತ್ತಿಕೊಂಡಿಲ್ಲ. ಬೆಳೆ ವಿಮೆ ಕೇವಲ ರೈತರಿಗೆ ಉಪಯೋಗವಾಗುತ್ತಿಲ್ಲ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು.
|ಸಚ್ಚಿನ್ ಮಿಗಾಅಧ್ಯಕ್ಷ, ಕಿಸಾನ್ ಕಾಂಗ್ರೆಸ್
ರಾಜ್ಯದಲ್ಲಿ ಮಳೆಯಿಂದ ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ಸೇರಿ ಸುಮಾರು 10 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಬೆಳೆ ಹಾನಿ ಆಗಿರಬಹುದೆಂದು ಅಂದಾಜು ಮಾಡಲಾಗಿದೆ. ಆದರೆ ಸರ್ಕಾರಿ ಅಧಿಕಾರಿಗಳು ಮಾತ್ರ ಇನ್ನೂ ಅಧ್ಯಯನ ನಡೆಯುತ್ತಿದೆ ಎನ್ನುತ್ತಿದ್ದಾರೆ. ಕೇವಲ ಮಳೆ ಹೆಚ್ಚಿರುವ ಜಿಲ್ಲೆಗಳಲ್ಲಿ ಮಾತ್ರ ನಷ್ಟದ ಅಂದಾಜು ನಡೆದಿದೆ ಎಂಬ ಆರೋಪವಿದೆ. ಅನೇಕ ಜಿಲ್ಲೆಗಳಲ್ಲಿ ಅಗತ್ಯ ಇರುವಾಗ ಮಳೆ ಬಾರದೇ ಬೆಳೆ ಹಾನಿಯಾಗಿದ್ದರೆ, ಇನ್ನೂ ಕೆಲವೆಡೆ ಮಳೆ ಹೆಚ್ಚಾಗಿ ಹಾನಿಯಾಗಿದೆ. ಜುಲೈ ತನಕ ಸುಮಾರು 2000 ಕೋಟಿ ರೂ.ಗಳ ಮೊತ್ತದ ಬೆಳೆ ಹಾನಿಯಾಗಿದೆ ಎಂಬುದು ಸರ್ಕಾರದ ಅಂದಾಜು. ಆದರೆ ಆನಂತರ ಆಗಿರುವ ಹಾನಿಯ ಅಂದಾಜು ಇನ್ನೂ ಆಗಿಲ್ಲ.
ರಾಜ್ಯದಲ್ಲಿ ಪ್ರತಿ ವರ್ಷ ಸಾವಿರಾರು ಕೋಟಿ ರೂ.ಗಳ ಬೆಳೆ ನಷ್ಟವಾಗುತ್ತಿದೆ. ಮುಂಗಾರು ಹಾಗೂ ಹಿಂಗಾರು ಸಂದರ್ಭದಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಪ್ರಕೃತಿ ವಿಕೋಪ ನಿಧಿಯಿಂದ ಪರಿಹಾರ ಸಿಕ್ಕಿಲ್ಲ. ಕೇಂದ್ರ ತಂಡಗಳು ಅಧ್ಯಯನ ಮಾಡಿಕೊಂಡು ಹೋದರೂ ನಿರೀಕ್ಷೆಯಷ್ಟು ಹಣವನ್ನು ಕೇಂದ್ರ ಬಿಡುಗಡೆ ಮಾಡಿಲ್ಲ. ಕರೊನಾದಿಂದಾಗಿ ರಾಜ್ಯ ಸರ್ಕಾರ ಸಹ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕಾರಣ ಪರಿಹಾರ ನೀಡುವುದಕ್ಕೆ ಮುಂದಾಗಿಲ್ಲ. ಈ ವರ್ಷ ಇನ್ನೂ ಕೇಂದ್ರದಿಂದ ಪರಿಹಾರ ಬಂದಿಲ್ಲ. ಅಕ್ಟೋಬರ್, ನವೆಂಬರ್​ನಲ್ಲಿ ಆಗಿರುವ ಹಾನಿಗೆ ಇನ್ನಷ್ಟೇ ಕೇಂದ್ರ ತಂಡ ಬಂದು ಅಧ್ಯಯನ ಮಾಡಬೇಕಾಗಿದೆ. ಹಿಂದೆ ನೀಡಿ ರುವ ಪರಿಹಾರ ಹೆಕ್ಟೇರ್​ಗೆ -ಠಿ;300 ರಿಂದ -ಠಿ;900 ತನಕ ನೀಡಲಾಗಿದೆ. ಇದೊಂದು ರೀತಿ ಕಣ್ಣೊರೆಸುವ ತಂತ್ರವಾಗಿದೆ.
ಫಸಲ್ ಬಿಮಾ ಯೋಜನೆಯ ವಿಮೆ ಮೊತ್ತ ಸಹ ರೈತರಿಗೆ ಸಕಾಲಕ್ಕೆ ಸಿಗುತ್ತಿಲ್ಲ. ರೈತರಿಂದ ಸುಮಾರು 20 ಸಾವಿರ ಕೋಟಿ ರೂ.ಗಳ ತನಕ ವಿಮೆ ಕಂತು ಪಡೆಯಲಾಗುತ್ತದೆ. ಆದರೆ ಬೆಳೆ ಕಟಾವು ಪದ್ಧತಿ ಹಾಗೂ ಇತರೆ ಕಾರಣಗಳನ್ನು ನೀಡಿ ರೈತರಿಗೆ 4000 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತ ಸಿಕ್ಕುವ ಸಾಧ್ಯತೆಗಳೇ ಇಲ್ಲ. ವಿಮಾ ಕಂಪನಿಗಳೇ ದೊಡ್ಡ ಮೊತ್ತ ಪಡೆಯುವುದರಿಂದ ರೈತರಿಗೆ ವಿಮೆಯಲ್ಲಿ ಅನ್ಯಾಯವಾಗುತ್ತಿದೆ ಎಂಬುದು ರೈತ ಮುಖಂಡರ ಆರೋಪವಾಗಿದೆ. ಬೆಳೆ ಕಟಾವು ಪದ್ಧತಿಯಲ್ಲಿ ಬದಲಾವಣೆ ಮಾಡದ ಹೊರತೂ ವಿಮೆಯಿಂದ ಯಾವುದೇ ಉಪಯೋಗವಾಗುವುದಿಲ್ಲ. ಪ್ರತಿ ಜಮೀನಿನಲ್ಲಿ ಕಟಾವು ಪರೀಕ್ಷೆ ನಡೆಯುವಂತಾಗಬೇಕು ಎಂಬುದು ರೈತರು ಮಾಡುತ್ತಿರುವ ಒತ್ತಾಯವಾಗಿದೆ. ವಿಮೆ ಕಂಪನಿಗಳು ಒಂದೊಂದು ವರ್ಷ ಒಂದೊಂದು ಜಿಲ್ಲೆ ಆಯ್ಕೆ ಮಾಡಿಕೊಳ್ಳುತ್ತವೆ. ಇದರಿಂದ ಸಮಸ್ಯೆ ಬಗೆ ಹರಿಯುತ್ತಿಲ್ಲ. ಆಯಾ ಕಂಪನಿಗಳು ಪ್ರತಿ ವರ್ಷ ಅದೇ ಜಿಲ್ಲೆಯಲ್ಲಿದ್ದರೆ ಮೋಸ ಆಗುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವೂ ರೈತರಲ್ಲಿದೆ. ಇದರ ಜತೆಗೆ ಎಲ್ಲ ಬೆಳೆಗಳನ್ನು ವಿಮೆಯ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆಯೂ ಇದೆ.
ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 17 =
Remember me
