ನವದೆಹಲಿ/ಬೆಂಗಳೂರು:ದೇಶದ 14 ಪ್ರಮುಖ ನಗರಗಳಲ್ಲಿ ಕರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹಠಾತ್ ಏರಿಕೆಯಾಗಿರುವುದರಿಂದ ತಕ್ಷಣವೇ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸೂಚಿಸಿ ಕೇಂದ್ರ ಸರ್ಕಾರ ಕರ್ನಾಟಕ ಸೇರಿ 8 ರಾಜ್ಯಗಳಿಗೆ ಪತ್ರ ಬರೆದಿದೆ. ಹೆಚ್ಚು ಸೋಂಕುಕಾರಕ ಒಮಿಕ್ರಾನ್ ಪ್ರಭೇದದ ಕೇಸ್​ಗಳು ವ್ಯಾಪಕವಾಗುತ್ತಿರುವುದಕ್ಕೂ ಕೇಂದ್ರ ಕಳವಳ ವ್ಯಕ್ತಪಡಿಸಿದೆ. ಸಾವಿನ ಸಂಖ್ಯೆ ಹೆಚ್ಚುವುದನ್ನು ತಡೆಯಲು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಇನ್ನು ಗುರುವಾರ ದೇಶದಲ್ಲಿ 13,154 ಪ್ರಕರಣ ದೃಢಪಟ್ಟರೆ, ಕರ್ನಾಟಕದಲ್ಲಿ 707 ಮಂದಿಗೆ ಸೋಂಕು ತಗುಲಿದೆ. 8 ರಾಜ್ಯಗಳಿಗೆ ಪತ್ರ ಬರೆದಿರುವ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಕೋವಿಡ್-19 ಪರೀಕ್ಷೆ ಹೆಚ್ಚಳ ಹಾಗೂ ಆಸ್ಪತ್ರೆಗಳ ಸಿದ್ಧತೆಗಳನ್ನು ಬಲಪಡಿಸಲು ಸೂಚಿಸಿದ್ದಾರೆ. ವ್ಯಾಕ್ಸಿನ್ ನೀಡಿಕೆ ಪ್ರಮಾಣ ಹೆಚ್ಚಿಸಲೂ ನಿರ್ದೇಶಿಸಿದ್ದಾರೆ.
961 ಒಮಿಕ್ರಾನ್:ಗುರುವಾರ ಬೆಳಗ್ಗೆವರೆಗೆ ಇನ್ನೂ 180 ಕೇಸ್​ಗಳು ದೃಢಪಡುವುದರೊಂದಿಗೆ ದೇಶದಲ್ಲಿ ಒಮಿಕ್ರಾನ್ ಪ್ರಭೇದದ ಪ್ರಕರಣಗಳ ಸಂಖ್ಯೆ 961ಕ್ಕೆ ಏರಿದೆ. ಕರೊನಾ ವ್ಯಾಧಿಯ 13,154 ಹೊಸ ಪ್ರಕರಣ ಈ ಅವಧಿಯಲ್ಲಿ ವರದಿಯಾಗಿವೆ. 268 ಜನರು ಮೃತಪಟ್ಟಿದ್ದಾರೆ. ಅಪಾಯಕಾರಿಯಾದ ಒಮಿಕ್ರಾನ್ ಕೇಸ್​ಗಳು 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪತ್ತೆಯಾಗಿವೆ. 320 ಒಮಿಕ್ರಾನ್ ಸೋಂಕಿತರು ಗುಣಮುಖರಾಗಿದ್ದಾರೆ. ರಾಜಧಾನಿ ದೆಹಲಿಯಲ್ಲಿ ಅತಿ ಹೆಚ್ಚು, 263 ಒಮಿಕ್ರಾನ್ ಸೋಂಕಿತರಿದ್ದಾರೆ. ಮಹಾರಾಷ್ಟ್ರದಲ್ಲಿ 252 ಹಾಗೂ ಗುಜರಾತ್​ನಲ್ಲಿ 97 ಕೇಸ್​ಗಳಿವೆ. ಕರ್ನಾಟಕದಲ್ಲಿ 34 ರೋಗಿಗಳಿದ್ದಾರೆ.
ಸೋಂಕು ಪ್ರಮಾಣ ಏರಿಕೆ:ಮಹಾರಾಷ್ಟ್ರದಲ್ಲಿ ವಾರದ ಸೋಂಕು ಪ್ರಮಾಣ ದರ ಶೇ. 0.76ರಿಂದ ಶೇ. 2.59ಕ್ಕೆ ಏರಿಕೆಯಾಗಿದೆ. ಬಂಗಾಳದಲ್ಲಿ ಶೇ. 1.61 ರಿಂದ ಶೇ. 3.1ಕ್ಕೆ, ತ.ನಾಡಿನಲ್ಲಿ ಶೇ. 0.60 ಯಿಂದ 0.75ಕ್ಕೆ, ದೆಹಲಿ ಶೇ. 0.11 ರಿಂದ ಶೇ. 1.0ಗೆ, ಕರ್ನಾಟಕದಲ್ಲಿ ಶೇ. 0.41 ರಿಂದ ಶೇ. 0.61, ಗುಜರಾತಿನಲ್ಲಿ ಶೇ. 0.18ರಿಂದ ಶೇ. 0.54ಕ್ಕೆ ಏರಿಕೆಯಾಗಿದೆ.
707 ಮಂದಿಗೆ ಸೋಂಕು:ಕರ್ನಾಟಕದಲ್ಲಿ ತಜ್ಞರ ನೀಡಿರುವ ಗಡುವಿಗೂ ಮುನ್ನವೇ ಮೂರನೇ ಅಲೆ ಆರಂಭವಾದಂತೆ ಕಾಣುತ್ತಿದ್ದು, ಗುರುವಾರ 707 ಸೋಂಕು ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದಿನದ ಸೋಂಕು ಪ್ರಮಾಣ ದರ ಶೇ. 0.61ಕ್ಕೆ ಹೆಚ್ಚಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 8,223ಕ್ಕೆ ಏರಿಕೆಯಾಗಿದೆ. ಡಿ. 27ರಿಂದ 30ರವರೆಗೆ ಪ್ರತಿದಿನ ಕ್ರಮವಾಗಿ 289, 356, 566 ಹಾಗೂ 707 ಪ್ರಕರಣಗಳು ವರದಿಯಾಗಿವೆ. ದಿನೇದಿನೆ ಪ್ರಕರಣಗಳ ಏರಿಕೆ ಕಾಣುತ್ತಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಮೂವರು ನಿಧನರಾಗಿದ್ದಾರೆ. ಮೃತರ ಒಟ್ಟು ಸಂಖ್ಯೆ 38,327ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರಲ್ಲಿ 252 ಮಂದಿ ಚೇತರಿಸಿಕೊಂಡು ಬಿಡುಗಡೆ ಹೊಂದಿದ್ದಾರೆ. ಒಟ್ಟು ಗುಣಮುಖರ ಸಂಖ್ಯೆ 29.59 ಲಕ್ಷ ಮೀರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬೆಂಗಳೂರು ನಗರದಲ್ಲಿ 565 ಸೋಂಕು ಪ್ರಕರಣಗಳು ವರದಿಯಾಗಿದ್ದು, ಉಡುಪಿಯಲ್ಲಿ 19, ಹಾಸನದಲ್ಲಿ 17, ಮೈಸೂರಿನಲ್ಲಿ 16, ಕೊಡಗಿನಲ್ಲಿ 12, ದಕ್ಷಿಣ ಕನ್ನಡದಲ್ಲಿ 11 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 16 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಒಂದಂಕಿ ತಲುಪಿದ್ದು, 8 ಜಿಲ್ಲೆಗಳಲ್ಲಿ ಪ್ರಕರಣಗಳು ವರದಿಯಾಗಿಲ್ಲ.
ದೇಶದಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಇದೆ ಎಂದು ಕೇಂದ್ರ ಸರ್ಕಾರ ಹೇಳಿರುವುದು ಮತ್ತಷ್ಟು ಜಾಗ್ರತೆ ವಹಿಸುವ ಅವಶ್ಯಕತೆಯನ್ನು ಮನದಟ್ಟು ಮಾಡಿದೆ. ಸೋಂಕು ಏರಿಕೆಯಾಗುತ್ತಿರುವುದಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಒಟ್ಟಾರೆ ನೋಡಿದರೆ ಸೋಂಕಿನ ಪ್ರಮಾಣ ಕಡಿಮೆ ಇರುವಂತೆ ತೋರುತ್ತದೆ. ಆದರೆ ರಾಜ್ಯವಾರು ಅಂಕಿ ಅಂಶಗಳನ್ನು ನೋಡಿದಾಗ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು, ನವದೆಹಲಿ, ಕರ್ನಾಟಕ ಮತ್ತು ಗುಜರಾತ್​ಗಳಲ್ಲಿ ಒಂದು ವಾರದಿಂದ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬರುತ್ತದೆ. ದಿನದ ಸೋಂಕು ಪ್ರಮಾಣದರದಲ್ಲೂ ಏರಿಕೆ ಕಂಡು ಬಂದಿರುವುದರಿಂದ ಈ ರಾಜ್ಯಗಳಲ್ಲಿ ತೀವ್ರ ಎಚ್ಚರಿಕೆ ಮತ್ತು ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದಿನಾಂಕ ಶೇಕಡವಾರು ಸೋಂಕು ಪ್ರಕರಣಗಳ ಸಂಖ್ಯೆ
ಹೊಸ ವರ್ಷದ ಸವಾಲು:ಡಿ.3-9ರ ವರೆಗಿನ ಅವಧಿಯಲ್ಲಿ ಶೇ.0.41 ಇದ್ದ ಕರ್ನಾಟಕದ ಸೋಂಕು ಪ್ರಕರಣಗಳ ಪ್ರಮಾಣ ಡಿ.24-30ರ ಅವಧಿಯಲ್ಲಿ ಶೇ.0.61ಕ್ಕೆ ಅಂದರೆ ಒಂದೂವರೆ ಪಟ್ಟು ಹೆಚ್ಚಳವಾಗಿದೆ. ಹೊಸ ವರ್ಷಾಚರಣೆ ವೇಳೆಯಲ್ಲಿ ಜನಸಂದಣಿ ಸೇರುವುದು, ಕರೊನಾ ಮಾರ್ಗಸೂಚಿ ಪಾಲನೆ ಮಾಡದೇ ಇರುವ ಅಪಾಯವನ್ನರಿತು ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಸೋಂಕು ಹೆಚ್ಚಿರುವ ರಾಜ್ಯಗಳಿಂದ ಆಗಮಿಸುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಇಷ್ಟರ ನಡುವೆಯೂ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಲೇ ಇದೀಗ ಕೇಂದ್ರ ಸರ್ಕಾರದ ಗಮನಕ್ಕೂ ಬಂದಿದೆ.
ರಾತ್ರಿ ವೇಳೆ ಹೀಗಾದರೆ ಅದು ರೂಪಾಂತರಿ ವೈರಸ್​ ಒಮಿಕ್ರಾನ್​ನ ರೋಗಲಕ್ಷಣ!

ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್​ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
