|ಪ್ರಕಾಶ್ ಮಂಜೇಶ್ವರಮಂಗಳೂರು
ರಾಜ್ಯದ ಅಭಿವೃದ್ಧಿಗೆ ವಿದೇಶಿ ಬಂಡವಾಳ ಆಕರ್ಷಿಸಲು, ವಿವಿಧ ಕಾರ್ಯಕ್ರಮಗಳಿಗೆ ಆರ್ಥಿಕ ಬೆಂಬಲ ಒದಗಿಸಲು ಸರ್ಕಾರಕ್ಕೆ ಅನಿವಾಸಿ ಭಾರತೀಯರು ಬೇಕು. ಆದರೆ ಅವರ ಕಷ್ಟ ಬೇಕಿಲ್ಲ!
ವಿದೇಶಿ ನೆಲದಲ್ಲಿ ತೊಂದರೆಗೆ ಒಳಗಾಗುವ ಕರ್ನಾಟಕದ ಜನರಿಗೆ ಕಷ್ಟ ಹೇಳಿಕೊಳ್ಳಲು ಇದ್ದ ಏಕೈಕ ವೇದಿಕೆ- ಅನಿವಾಸಿ ಭಾರತೀಯರ ಸಮಿತಿಯನ್ನು ಸಜೀವವಾಗಿಡಲು ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಇತರ ನಿಗಮ, ಮಂಡಳಿಗಳಿಗೆ ಸರ್ಕಾರ ನೇಮಕ ಮಾಡಿದರೂ ಅನಿವಾಸಿ ಭಾರತೀಯರ ವೇದಿಕೆಯ ಉಪಾಧ್ಯಕ್ಷ ಹುದ್ದೆ ಕಳೆದ ಸುಮಾರು ಮೂರುವರೆ ವರ್ಷಗಳಿಂದ ಖಾಲಿ ಇದೆ. ಕರೊನಾ ತುರ್ತು ಪರಿಸ್ಥಿತಿಯನ್ನು ಜಗತ್ತು ಎದುರಿಸುವ ಸಂದರ್ಭದಲ್ಲಿ ವಿದೇಶಗಳಲ್ಲಿ ನೆಲೆಸಿದ್ದ ರಾಜ್ಯದ ನಿವಾಸಿಗಳು ಅನೇಕ ಮಂದಿ ಅಕ್ಷರಶಃ ತಬ್ಬಲಿಗಳಾಗಿದ್ದರು. ಈ ಅವಧಿಯಲ್ಲಿ ವಿದೇಶದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ರಾಜ್ಯದ ಕೆಲ ಜನರು ಹಾಗೂ ಸಂಬಂಧಿಸಿದ ರಾಯಭಾರಿ ಕಚೇರಿ ಹಾಗೂ ಕೇಂದ್ರ ಸಚಿವಾಲಯದ ಜತೆ ಉತ್ತಮ ಭಾಂಧವ್ಯವಿದ್ದ ಜನರು ಅನಿವಾಸಿ ಭಾರತೀಯರಿಗೆ ನೀಡಿದ ನೆರವು ಮರೆಯಲಾಗದು.
ಉಪಾಧ್ಯಕ್ಷ ಹುದ್ದೆಯೇ ಮುಖ್ಯ:ಮುಖ್ಯಮಂತ್ರಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಆದ್ದರಿಂದ ಸಮಿತಿಯ ಚಟುವಟಿಕೆಗಳ ಕೇಂದ್ರ ಉಪಾಧ್ಯಕ್ಷರೇ ಆಗಿದ್ದು, ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಮಂಗಳೂರಿನ ಕ್ಯಾ.ಗಣೇಶ್ ಕಾರ್ಣಿಕ್ ಪ್ರಥಮ ಉಪಾಧ್ಯಕ್ಷರಾಗಿದ್ದರು. ಬಳಿಕ ಆರತಿ ಕೃಷ್ಣ, ವಿ.ಸಿ. ಪ್ರಕಾಶ್ ಈ ಸ್ಥಾನಕ್ಕೇರಿದ್ದರು. ಕೆಲವರ್ಷಗಳ ಹಿಂದೆ ಬಿಜೆಪಿ ಸರ್ಕಾರ ಆರಂಭಿಸಿದ ಈ ಎನ್​ಆರ್​ಐ ಫೋರಂ ಅದೇ ಪಕ್ಷದ ಸರ್ಕಾರದ ಅವಧಿಯಲ್ಲಿ ನಿಷ್ಕ್ರಿಯವಾಗಿದೆ.

ವಿಕಾಸ ಸೌಧದಿಂದ ಹೊರಗೆ:ಬೆಂಗಳೂರಿನ ವಿಕಾಸಸೌಧದಲ್ಲೇ ಇದ್ದ ಸಮಿತಿಯ ಕಚೇರಿಯನ್ನು ಓರ್ವ ಸಚಿವರಿಗಾಗಿ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಕಚೇರಿಯಲ್ಲಿ ಸದಸ್ಯ ಕಾರ್ಯದರ್ಶಿ- ಕೆಎಎಸ್ ಅಧಿಕಾರಿ ಇದ್ದಾರೆ. ಆದರೆ ಸಮಿತಿಗೆ ಅನುದಾನ, ಉಪಾಧ್ಯಕ್ಷರು ಇಲ್ಲದೆ ಚಟುವಟಿಕೆ ನಡೆಯುತ್ತಿಲ್ಲ. ಉದ್ಯೋಗ ಹಾಗೂ ಶಿಕ್ಷಣದ ಸಲುವಾಗಿ ಪ್ರಪಂಚದ ಸುಮಾರು 185 ದೇಶಗಳಲ್ಲಿ 2.84 ಕೋಟಿ ಭಾರತೀಯರು ನೆಲೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಅಂದಾಜಿಸಿದೆ. ಗಲ್ಪ್ ರಾಷ್ಟ್ರಗಳಲ್ಲೇ ಕರಾವಳಿಯ ಸುಮಾರು ಐದು ಲಕ್ಷ ಮಂದಿ ಇದ್ದಾರೆ. ಬಹುತೇಕ ಎಲ್ಲ ದೇಶಗಳ ಪ್ರಮುಖ ಎನ್​ಆರ್​ಐ ಸಂಸ್ಥೆಗಳು ವೇದಿಕೆಗೆ ಕರ್ನಾಟಕದ ಪ್ರತಿನಿಧಿ ನೇಮಕ ಮಾಡುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತಿವೆ. ಕಳೆದ ವರ್ಷ ದುಬೈ ಎನ್​ಆರ್​ಐ ಫೋರಂ ಈ ಬಗ್ಗೆ ಟ್ವಿಟರ್ ಅಭಿಯಾನ ನಡೆಸಿತ್ತು.
ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್​ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − three =
Remember me
