ನವದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೆ.9 ಹಾಗೂ 10ರಂದು ನಡೆಯಲಿರುವ G20 ಶೃಂಗಸಭೆಗೆ ಭಾರಿ ತಯಾರಿ ನಡೆಯುತ್ತಿದ್ದು ಸುರಕ್ಷತೆಯಿಂದ ಹಿಡಿದು ದೇಶದ ಪ್ರತಿಯೊಂದು ವೈಶಿಷ್ಟ್ಯತೆಯನ್ನು ಅತಿಥಿಗಳಿಗೆ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಜಾಗತಿಕ ನಾಯಕರೂ, ವಿವಿಧ ದೇಶಗಳ ಪ್ರತಿನಿಧಿಗಳೂ ಆಗಮಿಸಲಿದ್ದಾರೆ. ಈ ವಿಶಿಷ್ಟ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗಾಗಿ ಚಿನ್ನ- ಬೆಳ್ಳಿ ಲೇಪಿತ ಪಾತ್ರೆಗಳಿಂದ ಆಹಾರ ಬಡಿಸಲಾಗುತ್ತದೆ ಎನ್ನುವ ಸುದ್ದಿ ಇದೀಗ ಹೊರಬಿದ್ದಿದೆ.
ಇದನ್ನೂ ಓದಿ:ಜಿ20 ಶೃಂಗ ಸಭೆಯಿಂದ ದೂರ ಉಳಿಯಲಿದ್ದಾರೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್
G20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ದೇಶಗಳ ಮುಖ್ಯಸ್ಥರು ಮತ್ತು ಇತರ ವಿಶ್ವ ನಾಯಕರಿಗೆ ಆಹಾರ ಬಡಿಸಲು ಭಾರತದ ಸಾಂಸ್ಕೃತಿಕ ಪರಂಪರೆಯಿಂದ ಪ್ರೇರಿತವಾದ ಸಂಕೀರ್ಣವಾಗಿ ಕೆತ್ತನೆಗಳುಳ್ಳ ಬೆಸ್ಪೋಕ್ ಬೆಳ್ಳಿ ಪಾತ್ರೆಗಳಲ್ಲಿ ಭವ್ಯವಾದ ಭೋಜನವನ್ನು ನೀಡಲಾಗುವುದು ಎಂದು ಜೈಪುರ ಮೂಲದ ಮೆಟಲ್ ವೇರ್ ಸಂಸ್ಥೆ ತಿಳಿಸಿದೆ.
#WATCH| Delhi: Delegates of the G20 Summit to be served in silverware and gold utensilspic.twitter.com/1f2Zm0wGTL— ANI (@ANI)September 6, 2023
#WATCH| Delhi: Delegates of the G20 Summit to be served in silverware and gold utensilspic.twitter.com/1f2Zm0wGTL
ಐರಿಸ್ ಜೈಪುರ್ ಮಂಗಳವಾರ ನವದೆಹಲಿಯಲ್ಲಿ ತನ್ನ ಕೆಲವು ಬೆಳ್ಳಿ ಪಾತ್ರೆಗಳ ಪ್ರದರ್ಶನ ನಡೆಸಿದ್ದು ವಿವಿಧ ಐಷಾರಾಮಿ ಹೋಟೆಲ್‍ಗಳಿಗಾಗಿ ಟೇಬಲ್‍ವೇರ್ ಮತ್ತು ಬೆಳ್ಳಿ ಪಾತ್ರೆಗಳನ್ನು ತಯಾರಿಸಿ ನಿಯೋಜಿಸಲಾಗಿದೆ ಎಂದು ಹೇಳಿದೆ. ಹೋಟೆಲ್‍ಗಳಲ್ಲಿ ಅದ್ದೂರಿ ಔತಣಕೂಟಗಳು ಮತ್ತು ಭೋಜನಕ್ಕಾಗಿ ಈ ಪಾತ್ರೆಗಳನ್ನು ವಿದೇಶಿ ಅತಿಥಿಗಳು ಬಳಸಲಿದ್ದಾರೆ.
ಇದನ್ನೂ ಓದಿ:ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಜಿ20 ಶೃಂಗಸಭೆ; ಲಂಬಾಣಿ ಕುಸುರಿ ಕಸೂತಿ ಪ್ರದರ್ಶನದ ಅತಿದೊಡ್ಡ ಗುರಿ
ಹೆಚ್ಚಿನ ಪಾತ್ರೆಗಳನ್ನು ಸ್ಟೀಲ್ ಅಥವಾ ಹಿತ್ತಾಳೆ ಬೇಸ್‍ನೊಂದಿಗೆ ಬೆಳ್ಳಿಯ ಸೊಗಸಾದ ಲೇಪನದೊಂದಿಗೆ ಮಾಡಲಾಗಿರುತ್ತದೆ. ಸ್ವಾಗತ ಪಾನೀಯಗಳನ್ನು ನೀಡಲು ಬಳಸುವ ಪಾತ್ರೆಗಳು ಚಿನ್ನದ ಲೇಪನವನ್ನು ಹೊಂದಿರಲಿದೆ ಎಂದು ಬೆಳ್ಳಿ ಪಾತ್ರೆಗಳ ಸಂಸ್ಥೆಯ ಲಕ್ಷ್ ಪಬುವಾಲ್ ಮಾಹಿತಿ ನೀಡಿದ್ದಾರೆ.
ಜಿ20 ಶೃಂಗಸಭೆಯ ಈ ವಿಶೇಷ ಸಂದರ್ಭದಲ್ಲಿ 200 ಕುಶಲಕರ್ಮಿಗಳು ಸುಮಾರು 15,000 ಬೆಳ್ಳಿ ಪಾತ್ರೆಗಳನ್ನು ರಚಿಸಿದ್ದಾರೆ ಎಂದು ಅವರು ಹೇಳಿದರು. ಟೇಬಲ್ವೇರ್ ಮತ್ತು ಸಿಲ್ವರ್ ವೇರ್ ವಿನ್ಯಾಸಗಳು ಭಾರತದ ಶ್ರೀಮಂತ ಪರಂಪರೆ ಮತ್ತು ಅದರ ಜಾಗತಿಕ ಪ್ರಾಮುಖ್ಯತೆಯ ಪ್ರತೀಕವಾಗಿದೆ ಎಂದು ರಾಜೀವ್ ಪಬುವಾಲ್ ಹೇಳಿದರು.(ಏಜೆನ್ಸೀಸ್)
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:eight − 7 =
Remember me
