| ಅವಿನಾಶ ಮೂಡಂಬಿಕಾನ ಬೆಂಗಳೂರು
ವಿದೇಶಿ ಕಳ್ಳಸಾಗಣೆ ಪ್ರಕರಣ ಭೇದಿಸಿ ಸ್ಮಗ್ಲರ್​ಗಳಿಂದ ಜಪ್ತಿ ಮಾಡಲಾಗಿದ್ದ 1 ಕೋಟಿ ರೂ.ಗೂ ಅಧಿಕ ಮೌಲ್ಯದ 2.6 ಕೆಜಿ ಚಿನ್ನ ಏರ್​ಪೋರ್ಟ್ ಗೋದಾಮಿನಿಂದ ನಿಗೂಢವಾಗಿ ಮಾಯವಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಿಬಿಐ ಈ ನಾಪತ್ತೆ ರಹಸ್ಯದ ಬೆನ್ನತ್ತಿರುವಂತೆಯೇ ಪ್ರಕರಣದಲ್ಲಿ ಕಸ್ಟಮ್್ಸ ಅಧಿಕಾರಿಗಳ ಕೈವಾಡವಿರುವ ಅನುಮಾನ ವ್ಯಕ್ತವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಲ್ಲಿ 2012ರಿಂದ 2014ರ ಅವಧಿಯಲ್ಲಿ 13 ಪ್ರಕರಣಗಳಲ್ಲಿ ಸ್ಮಗ್ಲರ್ಸ್​ಗಳಿಂದ 2.6 ಕೆ.ಜಿ ಚಿನ್ನವನ್ನು ಕಸ್ಟಮ್ಸ್​ ಅಧಿಕಾರಿಗಳು ಜಪ್ತಿ ಮಾಡಿದ್ದರು. ಬಳಿಕ ಜಪ್ತಿ ಮಾಲನ್ನು ಏರ್​ಪೋರ್ಟ್​ನ ಎಂಎಚ್​ಬಿ ಗೋದಾಮಿನಲ್ಲಿಡಲಾಗಿತ್ತು. ಆದರೆ, ಆ ಚಿನ್ನ ಕಾಣೆಯಾಗಿರುವ ವಿಚಾರ ಇತ್ತೀಚೆಗಿನ ಆಂತರಿಕ ಪರಿಶೀಲನೆ ವೇಳೆ ಬಹಿರಂಗವಾಗಿದೆ. ಏರ್​ಪೋರ್ಟ್ ಕಸ್ಟಮ್್ಸ ವಿಭಾಗದ ಜಂಟಿ ಆಯುಕ್ತ ಎಂ.ಜೆ.ಚೇತನ್ ಕೊಟ್ಟ ದೂರಿನ ಮೇರೆಗೆ ಅ.12ರಂದು ಎಫ್​ಐಆರ್ ದಾಖಲಿಸಿಕೊಳ್ಳಲಾಗಿತ್ತು.
ಕಸ್ಟಮ್ಸ್​ ಮತ್ತು ಸೆಂಟ್ರಲ್ ಎಕ್ಸೈಸ್ ವಿಭಾಗದ ಸಹಾಯಕ ಆಯುಕ್ತ ವಿನೋದ್ ಚಿನ್ನಪ್ಪ, ಚೆನ್ನೈನ ವಿಭಾಗದ ಸಹಾಯಕ ಆಯುಕ್ತ ಕೆ.ಕೇಶವ್, ಕೇಂದ್ರ ತೆರಿಗೆ ವಿಭಾಗದ ಅಧೀಕ್ಷಕರಾದ ಕೆ.ಬಿ ಲಿಂಗರಾಜು, ಡೀನ್ ರೆಕ್ಸ್, ಎನ್.ಜೆ.ರವಿಶಂಕರ್, ಎಸ್.ಡಿ ಹಿರೇಮಠ್ ಇತರರ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಎಫ್​ಐಆರ್​ನಲ್ಲಿ 7ನೇ ಆರೋಪಿ ಸ್ಥಾನದಲ್ಲಿ ಅಪರಿಚಿತ ಎಂದು ನಮೂದಿಸಲಾಗಿದೆ.
ದಾಖಲೆಗಳಿಲ್ಲದ ಅಪಾರ ಪ್ರಮಾಣದ ಚಿನ್ನವನ್ನು ವಿದೇಶಗಳಿಂದ ವಿಮಾನ ಮಾರ್ಗದಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿದೆ. ಸ್ಮಗ್ಲಿಂಗ್ ತಡೆಗಟ್ಟಲು ಎಲ್ಲ ಏರ್​ಪೋರ್ಟ್​ಗಳಲ್ಲೂ ಕಸ್ಟಮ್್ಸ ವಿಭಾಗ ಸ್ಥಾಪಿಸಲಾಗಿದ್ದು, ಪ್ರತಿ ಪ್ರಯಾಣಿಕರನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಲಾಗುತ್ತದೆ. ಹೀಗಿದ್ದರೂ ಬೇರೆಬೇರೆ ರೀತಿಯಲ್ಲಿ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತದೆ. ಇಂತಹ ಚಿನ್ನವನ್ನು ಕಸ್ಟಮ್್ಸ ಅಧಿಕಾರಿಗಳು ಜಪ್ತಿ ಮಾಡಿ ಏರ್​ಪೋರ್ಟ್​ಗಳಲ್ಲಿರುವ ಎಂ್ಎಚ್​ಬಿ ಗೋದಾಮಿನಲ್ಲಿ ಇಡುತ್ತಾರೆ. ಒಂದು ವೇಳೆ ಚಿನ್ನಕ್ಕೆ ಸೂಕ್ತ ದಾಖಲೆ ಒದಗಿಸಿದರೆ ಮಾಲೀಕರಿಗೆ ಹಿಂದಿರುಗಿಸಲಾಗುತ್ತದೆ. ಇಲ್ಲವಾದರೆ ಮುಟ್ಟುಗೋಲು ಹಾಕಿಕೊಂಡು ಕೋರ್ಟ್ ಅನುಮತಿ ಪಡೆದು ಹರಾಜು ಹಾಕಲಾಗುತ್ತದೆ. ಆದರೆ, ಏರ್​ಪೋರ್ಟ್​ಗಳಲ್ಲಿ ಸಿಕ್ಕಿಬೀಳುವ ಬಹುತೇಕ ಪ್ರಕರಣಗಳಲ್ಲಿ ದಾಖಲೆ ತೋರಿಸಿ ಚಿನ್ನಾಭರಣ ಹಿಂಪಡೆದುಕೊಳ್ಳುವುದು ವಿರಳ.
ಏರ್​ಪೋರ್ಟ್​ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಹೊರತಾಗಿಯೂ ರಾಜ್ಯಕ್ಕೆ ದುಬೈ, ಮಲೇಷ್ಯಾ, ಶ್ರೀಲಂಕಾ ಹಾಗೂ ಮಧ್ಯಪ್ರಾಚ್ಯ ದೇಶಗಳಿಂದ ಚಿನ್ನ ಕಳ್ಳಸಾಗಣೆಯಾಗುತ್ತಿದೆ. ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಕಳ್ಳಮಾರ್ಗದಲ್ಲಿ ಬರುವ ಅಂದಾಜು 11 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನ ವಾರ್ಷಿಕ ಜಪ್ತಿಯಾಗುತ್ತಿದೆ. ಅಧಿಕಾರಿಗಳ ಕಣ್ತಪ್ಪಿಸಿ ನಿಲ್ದಾಣದಿಂದ ಹೊರದಾಟುವ ಅಕ್ರಮ ಚಿನ್ನದ ಮೌಲ್ಯ ಲೆಕ್ಕಕ್ಕೆ ಸಿಗದಷ್ಟಿದೆ.
ಈ ಹಿಂದೆ ಚಿನ್ನ ಕಳ್ಳಸಾಗಣೆಗೆ ನೆರವು ನೀಡುತ್ತಿದ್ದ ಆರೋಪದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್್ಸ ವಿಭಾಗದ ಎಸ್ಪಿ ಡಿ. ಅಶೋಕ್ ವಿರುದ್ಧ ಸಿಬಿಐ ಎಫ್​ಐಆರ್ ಆಗಿತ್ತು. ಕೆ.ಜಿಗೆ ಇಂತಿಷ್ಟು ಕಮಿಷನ್ ಪಡೆದು ಚಿನ್ನ ಕಳ್ಳಸಾಗಣೆಗೆ ಸಹಾಯ ಮಾಡುತ್ತಿದ್ದ ಆರೋಪ ಕೇಳಿಬಂದಿತ್ತು.
ಭಾರತಕ್ಕೆ ಕಳ್ಳಮಾರ್ಗದಲ್ಲಿ ಚಿನ್ನ ಸಾಗಣೆ ಹೆಚ್ಚಾಗುತ್ತಿದ್ದು, ವಾರ್ಷಿಕವಾಗಿ ಅಂದಾಜು 1000 ಕೋಟಿ ರೂ. ಮೌಲ್ಯದ ಚಿನ್ನ ಜಪ್ತಿ ಮಾಡಲಾಗುತ್ತಿದೆ. ಸರ್ಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದ ನಂತರ ಕಳ್ಳಸಾಗಣೆ ಹೆಚ್ಚಾಗಿದೆ.
(2.6 ಕೆಜಿ ಚಿನ್ನದ ಮೂಲ)
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 13 ಸ್ಮಗ್ಲಿಂಗ್ ಪ್ರಕರಣದಡಿ ಜಪ್ತಿ ಮಾಡಲಾಗಿದ್ದ 2.6 ಕೆ.ಜಿ. ಚಿನ್ನ ಲೆಕ್ಕ ಪರಿಶೋಧನೆಯಲ್ಲಿ ಪತ್ತೆಯಾಗಿಲ್ಲ. ಹೈದರಾಬಾದ್ ಪ್ರಾದೇಶಿಕ ವಿಭಾಗದ ಜಾಗೃತ ಜಾರಿ ನಿರ್ದೇಶನಾಲಯ ಆಂತರಿಕ ತನಿಖೆ ನಡೆಸಿದಾಗ ಅಧಿಕಾರಿಗಳ ಕರ್ತವ್ಯಲೋಪ, ನಿಯಮ ಉಲ್ಲಂಘನೆ ದೃಢಪಟ್ಟಿದೆ. ಆದರೆ, ಚಿನ್ನವನ್ನು ಅಧಿಕಾರಿಗಳೇ ಲಪಟಾಯಿಸಿದ್ದಾರೋ ಅಥವಾ ಕಳ್ಳತನವಾಗಿದೆಯೇ ಎಂಬುದು ಸಿಬಿಐ ತನಿಖೆಯಿಂದಷ್ಟೇ ಹೊರಬರಬೇಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − one =
Remember me
