ಹೈದರಾಬಾದ್​:ಕುದುರೆ, ಐಷಾರಾಮದ ವಸ್ತುಗಳು, ಭಾರಿ ಪ್ರಮಾಣದಲ್ಲಿ ಚಿನ್ನಾಭರಣ, ನಗದು, ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಚ್ಚರಿಯೆಂದರೆ ಇವೆಲ್ಲ ಪತ್ತೆಯಾಗಿದ್ದು ಕಾರು ಚಾಲಕನೊಬ್ಬನ ಮಾವನ ಮನೆಯಲ್ಲಿ….!
ಬಿಲ್​ಗಳನ್ನು ಪಾಸ್​ ಮಾಡಲು ಭಾರಿ ಲಂಚ ಪಡೆಯುತ್ತಿದ್ದ ಅಧಿಕಾರಿ ಅದರಿಂದ ಅಪಾರ ಸಂಪತ್ತು ಗಳಿಸಿದ್ದ. ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು.
ಇದನ್ನೂ ಓದಿ;ಶುಭಸುದ್ದಿ…! ಮೋದಿ ಬಯಸಿದಲ್ಲಿ ತುರ್ತು ಬಳಕೆಗೆ ಸಜ್ಜಾಗುತ್ತೆ ದೇಶಿಯ ಕರೊನಾ ಲಸಿಕೆ
84 ಕೆ.ಜಿ ಬೆಳ್ಳಿ, 2.4 ಕೆ.ಜಿ ಬಂಗಾರ, 15 ಲಕ್ಷ ರೂ. ನಗದು, 49 ಲಕ್ಷ ರೂ. ಮೊತ್ತದ ಠೇವಣಿ, 27 ಲಕ್ಷ ರೂ. ಮೊತ್ತದ ಸಾಲಪತ್ರಗಳು, ಹಾರ್ಲೆ ಡೇವಿಡ್​ಸನ್​ ಬೈಕ್​, ವಿವಿಧ ಐಷಾರಾಮದ ಸಾಮಗ್ರಿಗಳು, ಮೂರು ಪಿಸ್ತೂಲ್​ಗಳು, ಒಂದು ಏರ್​ಗನ್​ ಹಾಗೂ ಕುದುರೆಯೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅನಂತಪುರ ಜಿಲ್ಲೆಯಲ್ಲಿರುವ ಬಾಳಪ್ಪ ಎಂಬುವರ ಮನೆಯಿಂದ ಇದನ್ನೆಲ್ಲ ಸ್ವಾಧೀನಕ್ಕೆ ಪಡೆಯಲಾಗಿದೆ. ಈತ ಖಜಾನೆ ಇಲಾಖೆಯಲ್ಲಿ ಅಧಿಕಾರಿಯೊಬ್ಬರ ಕಾರು ಚಾಲಕನ ಮಾವನಾಗಿದ್ದಾನೆ. ಅಧಿಕಾರಿ ವಿರುದ್ಧ ಇನ್ನಷ್ಟೇ ದೂರು ದಾಖಲಾಗಬೇಕಾಗಿದೆ.
ಇದನ್ನೂ ಓದಿ;ಮಸೀದಿಗಳನ್ನು ಒಡೆದು ಅದೇ ಜಾಗದಲ್ಲಿ ಶೌಚಗೃಹ, ಮದ್ಯದಂಗಡಿ ನಿಮಿರ್ಸಿದ ಚೀನಾ ಸರ್ಕಾರ….!
ಈ ಅಧಿಕಾರಿ ಕಾನ್​ಸ್ಟೆಬಲ್ ಆಗಿದ್ದ ತಂದೆಯ ಮರಣಾಂತರ ಅನುಕಂಪದ ಆಧಾರದಲ್ಲಿ 2006ರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. 14 ವರ್ಷಗಳಲ್ಲಿ ಈತ ಗಳಿಸಿದ ಸಂಪತ್ತು ಎಂಥವರನ್ನೂ ಬೆಚ್ಚಿ ಬೀಳಿಸುತ್ತದೆ.
ಕಳೆದ ವಾರವಷ್ಟೇ ತಹಶೀಲ್ದಾರ್​ವೊಬ್ಬ ಭೂವಿವಾದವನ್ನು ಬಗೆಹರಿಸಲು 1.10 ಕೋಟಿ ರೂ. ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದ. ಈ ಹಿಂದೆಯೂ ಈತನ ವಿರುದ್ಧ ಅಕ್ರಮ ನಡೆಸಿದ ಆರೋಪಗಳಿದ್ದವು. ಹಿರಿಯ ಅಧಿಕಾರಿಗಳಿಗೆ ಭಾರಿ ಉಡುಗೊರೆಗಳನ್ನು ನೀಡುತ್ತಿದ್ದ ಈತ ಸುಲಭವಾಗಿ ಪಾರಾಗುತ್ತಿದ್ದ ಎಂದು ಹೇಳಲಾಗಿದೆ.
ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಮಗನನ್ನು 105 ಕಿ.ಮೀ. ದೂರದ ಕೇಂದ್ರಕ್ಕೆ ಸೈಕಲ್​ನಲ್ಲಿ ಕರೆತಂದ ತಂದೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
