ನವದೆಹಲಿ:ದೇಶದಲ್ಲಿ ಮಂಗಳವಾರದಿಂದ ಚಿನ್ನದ ಆಭರಣ ಹಾಗೂ ಬಂಗಾರದ ಕರಕುಶಲ ವಸ್ತುಗಳ ಮೇಲೆ ಹಾಲ್​ಮಾರ್ಕ್​ ಹಾಕುವುದು ಕಡ್ಡಾಯ ವಾಗಲಿದೆ. ಪ್ರಸ್ತುತ ದೇಶದಲ್ಲಿ ಮಾರಾಟವಾಗುವ ಶೇ. 40 ಆಭರಣಗಳು ಮಾತ್ರ ಹಾಲ್​ಮಾರ್ಕ್​ ಹೊಂದಿವೆ. ದೇಶದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಜ್ಯುವೆಲ್ಲರಿ ಮಳಿಗೆ ಇದ್ದು, ಇವುಗಳ ಪೈಕಿ 35,800 ಮಳಿಗೆಗಳು ಮಾತ್ರ ಬಿಐಎಸ್​ ಸಟಿರ್ಫಿಕೆಟ್​ ಹೊಂದಿವೆ. ಕಳೆದ 5 ವರ್ಷದಲ್ಲಿ ಹಾಲ್​ಮಾರ್ಕ್​ ಕೇಂದ್ರಗಳು ಶೇ. 25 ಏರಿಕೆ ಕಂಡಿವೆ.
ಚಿನ್ನ 464 ರೂ. ಇಳಿಕೆ: ದೆಹಲಿ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಸೋಮವಾರ 464 ರೂ. ಇಳಿಕೆಯಾಗಿದ್ದು, 47,705 ರೂ. ತಲುಪಿದೆ. ಬೆಳ್ಳಿ ಪ್ರತಿ ಕೆಜಿಗೆ 723 ರೂ. ಇಳಿಕೆಯಾಗಿ 70,420 ರೂ. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ, ಬೆಳ್ಳಿ ಇಳಿಕೆ ಹಾದಿಯಲ್ಲಿದೆ. ಸೆನ್ಸೆಕ್ಸ್​ 76.77 ಅಂಶ ಏರಿಕೆ ಮೂಲಕ 52,551.53ಕ್ಕೆ ಮುಟ್ಟಿದೆ. ನಿಫ್ಟಿ 12.50 ಪಾಯಿಂಟ್​ ಹೆಚ್ಚಳವಾಗಿ 15,811.85 ತಲುಪಿದೆ.
ಹೈದರಾಬಾದ್​ನಲ್ಲೂ 100 ರೂ. ದಾಟಿದ ಪೆಟ್ರೋಲ್​: ದೇಶದಲ್ಲಿ ತೈಲ ದರ ಏರಿಕೆ ಮುಂದುವರಿದಿದೆ. ಸೋಮವಾರ ಪ್ರತಿ ಲೀಟರ್​ ಪೆಟ್ರೋಲ್​ಗೆ 30 ಪೈಸೆ, ಡೀಸೆಲ್​ಗೆ 31ಪೈಸೆ ಏರಿಕೆಯಾಗಿದೆ. ಮಧ್ಯಪ್ರದೇಶದ ಅನುಪು$್ಪರ ಜಿಲ್ಲೆಯಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 107.17 ರೂ. ತಲುಪಿದೆ. ಹೈದರಾಬಾದ್​ನಲ್ಲಿ ಪೆಟೋಲ್​ ದರ 100.20 ರೂ. ಮುಟ್ಟಿದೆ. ದೆಹಲಿಯಲ್ಲಿ ಪೆಟ್ರೋಲ್​ ಬೆಲೆ 96.41 ರೂ. ಆಗಿದೆ. ಡೀಸೆಲ್​ 87.28 ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 16 =
Remember me
