ವಿಯೆಟ್ನಾಂ:ಕರೊನಾ ವೈರಸ್‌ನ ಈ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲೆಲ್ಲೂ ಆರ್ಥಿಕ ಕುಸಿತದ್ದೇ ಮಾತು, ಈ ಹಿನ್ನೆಲೆಯಲ್ಲಿ ಎಷ್ಟೋ ಕಂಪನಿಗಳು ತಮ್ಮ ಉದ್ಯೋಗಿಗಳನ್ನೂ ಕೆಲಸದಿಂದ ತೆಗೆಯುತ್ತಿವೆ.
ಇಂಥ ಸಂದರ್ಭದಲ್ಲಿ ವಿಯೆಟ್ನಾಂನಲ್ಲಿ ಆರಂಭವಾಗಿದೆ ಜಗತ್ತಿನ ಮೊಟ್ಟಮೊದಲ ಚಿನ್ನದ ಹೋಟೆಲ್‌. ಇಲ್ಲಿ ಪ್ಲೇಟು, ಲೋಟ, ಮಂಚ, ಖುರ್ಚಿ ಅಷ್ಟೇ ಏಕೆ, ಕಮೋಡ್‌, ಬಾತ್‌ಟಬ್‌ ಎಲ್ಲವೂ ಚಿನ್ನಮಯ! ಚಿನ್ನದ ತಟ್ಟೆಯಲ್ಲಿ ಊಟ ಬಡಿಸುತ್ತಾರೆ. ಚಿನ್ನದ ಕಪ್‌ನಲ್ಲಿ ಪಾನೀಯ ಕೊಡುತ್ತಾರೆ. ಸಾಲದು ಎಂಬುದಕ್ಕೆ ಚಿನ್ನದ ಹೊದಿಕೆಯ ಬೃಹತ್‌ ಈಜುಕೊಳವೂ ಇಲ್ಲಿದೆ.
ಇದನ್ನೂ ಓದಿ:ಸಾವಯವ ಕೃಷಿಗೆ ಒತ್ತು- ರೈತರಿಂದ ಸೆಗಣಿ ಖರೀದಿಗೆ ಛತ್ತೀಸಗಢದ ಸರ್ಕಾರ
ವಿಯೆಟ್ನಾಂನ ರಾಜಧಾನಿ ಹನಾಯ್‌ ಡಾಲ್ಸ್‌ನ ಹನಾಯ್‌ ಗೋಲ್ಡನ್‌ ಲೇಕ್‌ ಎಂಬಲ್ಲಿ ಶುರುವಾಗಿರುವ ಪಂಚತಾರಾ ಹೋಟೆಲ್‌ ಇದು. ಇಲ್ಲಿನ ಎಲ್ಲ ವಸ್ತುಗಳಿಗೂ 24 ಕ್ಯಾರೆಟ್‌ನ ಚಿನ್ನದ ಹೊದಿಕೆಯಿದೆ ಎಂದು ಹೋಟೆಲ್‌ನ ಮಾಲಿಕ ನುಗುಯೇನ್‌ ಹು ಡಾಂಗ್‌ ಹೇಳಿಕೊಂಡಿದ್ದಾರೆ.
25 ಅಂತಸ್ತಿನ ಹೋಟೆಲ್‌ ಇದಾಗಿದೆ. ಇದರ ನಿರ್ಮಾಣಕ್ಕೆ ಸುಮಾರು 1500 ಕೋಟಿ ರೂಪಾಯಿ ಖರ್ಚಾಗಿದೆ. ಹಾಗೆಂದು ಬಾಡಿಗೆಯೇನೂ ಇಲ್ಲಿ ಹೆಚ್ಚಿಲ್ಲ. ಒಂದು ದಿನಕ್ಕೆ ಒಂದು ರೂಮ್‌ನ ಬಾಡಿಗೆ ಭಾರತದ ರೂಪಾಯಿಯಲ್ಲಿ ಹೇಳುವುದಾದರೆ ಸುಮಾರು 18,750 ರೂಪಾಯಿ. ಜನಸಾಮಾನ್ಯರಿಂದ ಹಿಡಿದು ಜಗತ್ತಿನಲ್ಲಿ ಇರುವ ಶ್ರೀಮಂತ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಇಲ್ಲಿನ ದರ ನಿರ್ಮಾಣ ಮಾಡಲಾಗಿದೆ ಎನ್ನುತ್ತಾರೆ ಇದರ ಮಾಲೀಕರು(ಏಜೆನ್ಸೀಸ್‌)
ಎಲ್ಲೆಲ್ಲೂ ಕರೊನಾ! 239 ವಿಜ್ಞಾನಿಗಳಿಂದ ಬಂದಿದೆ ಆತಂಕದ ವರದಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × four =
Remember me
