ಕಣ್ಣೂರು: ಸಿನಿಮೀಯ ಶೈಲಿಯ ರೈಲು ದರೋಡೆ ಪ್ರಕರಣ ಕೇರಳದಲ್ಲಿ ನಡೆದಿದ್ದು, ಎರಡು ಎಕ್ಸ್​ಪ್ರೆಸ್​ ರೈಲುಗಳಲ್ಲಿ ಭಾರಿ ಪ್ರಮಾಣದ ಚಿನ್ನಾಭರಣ ದರೋಡೆಯಾಗಿರುವ ಘಟನೆ ಶನಿವಾರ ವರದಿಯಾಗಿದೆ. ಎರಡೂ ದರೋಡೆ ಪ್ರಕರಣಗಳು ಕೇರಳದ ವ್ಯಾಪ್ತಿಯಲ್ಲೇ ಆಗಿದ್ದು, ರೈಲು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ.
ತಿರೂರು ಮತ್ತು ವಡಕರ-ಮಾಹೆ ನಡುವೆ ಈ ದರೋಡೆಗಳು ನಡೆದಿರಬಹುದು ಎಂದು ನಂಬಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎರಡೂ ರೈಲುಗಳು ಮಂಗಳೂರು ಕಡೆಗೆ ಸಂಚರಿಸುತ್ತಿದ್ದವು. ಎರಡೂ ದರೋಡೆಗಳನ್ನೂ ಒಂದೇ ಗ್ಯಾಂಗ್ ಮಾಡಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಚೆನ್ನೈ-ಮಂಗಳೂರು ಸೂಪರ್​ಫಾಸ್ಟ್ ಎಕ್ಸ್​ಪ್ರೆಸ್ ಮತ್ತು ಮಲಬಾರ್ ಎಕ್ಸ್​ಪ್ರೆಸ್​ ರೈಲುಗಳಲ್ಲಿ ದರೋಡೆ ನಡೆದಿರುವಂಥದ್ದು. ಚೆನ್ನೈ-ಮಂಗಳೂರು ಸೂಪರ್ ಫಾಸ್ಟ್ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುತ್ತಿದ್ದ ಚೆನ್ನೈ ನಿವಾಸಿ ಪೊನ್ನಿಮಾರಾನ್ ಬಳಿ ಇದ್ದ 15 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಮತ್ತು ತಿರುವನಂತಪುರ-ಮಂಗಳೂರು ಮಲಬಾರ್ ಎಕ್ಸ್​ಪ್ರೆಸ್​ನಲ್ಲಿ ಸಂಚರಿಸುತ್ತಿದ್ದ ಸಿಂಗಾಪುರದಿಂದ ಹಿಂದಿರುಗಿದ ಕಾಌಂಗಾಡ್ ನಿವಾಸಿಗಳ ಬಳಿ ಇದ್ದ 9.5 ಸವರಿನ್ ಚಿನ್ನಾಭರಣ ದೋಚಲ್ಪಟ್ಟಿವೆ.
ರೈಲ್ವೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಕೋಳಿಕ್ಕೋಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಚಿನ್ನಾಭರಣ ಕಳೆದುಕೊಂಡವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಪ್ರಾಥಮಿಕ ಮಾಹಿತಿಗಳನ್ನು ಕಲೆಹಾಕಿರುವುದಾಗಿವರದಿಯಾಗಿದೆ. (ಏಜೆನ್ಸೀಸ್)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five × 2 =
Remember me
