ಮುಂಬೈ:ಮುಂಬೈ ವಿಶ್ವವಿದ್ಯಾಲಯದ 2021ರ ಘಟಿಕೋತ್ಸವ ಸಮಾರಂಭವು ಡಿ.27ರಂದು ಮುಂಬೈನ ಫೋರ್ಟ್ ಕ್ಯಾಂಪಸ್​​ನ ಜಹಾಂಗೀರ್ ಹಾಲ್​ನಲ್ಲಿ ಅದ್ಧೂರಿಯಾಗಿ ನೆರವೇರಿತು. ಕನ್ನಡ ವಿಭಾಗದ 2019-20ನೆಯ ಸಾಲಿನ ಎಂಎ ರ‌್ಯಾಂಕ್ ವಿಜೇತ ವಿದ್ಯಾರ್ಥಿ ಪಾರ್ವತಿ ಪೂಜಾರಿ ಹಾಗೂ 2020-21ನೆಯ ಸಾಲಿನ ಎಂಎ ರ‌್ಯಾಂಕ್ ವಿಜೇತ ವಿದ್ಯಾರ್ಥಿ ಕಲಾ ಭಾಗ್ವತ್ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರತಿಷ್ಠಿತ ಎಂ.ಬಿ. ಕುಕ್ಯಾನ್ ಸುವರ್ಣ ಪದಕವನ್ನು ಪ್ರದಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾರಾಷ್ಟ್ರ ರಾಜ್ಯಪಾಲ ಹಾಗೂ ಕುಲಪತಿ ಭಗತ್ ಸಿಂಗ್ ಕೊಶ್ಯಾರಿ ಅವರು ಪದಕ ಹಾಗೂ ಪ್ರಮಾಣಪತ್ರ ನೀಡಿದರು. ಅತಿಥಿಗಳಾಗಿ ಆಗಮಿಸಿದ್ದ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್ ಓಷಿಯಾನೊಗ್ರಫಿ ಗೋವಾ ಇದರ ನಿರ್ದೇಶಕ ಪ್ರೊ.ಸುನೀಲ್ ಕುಮಾರ್ ಸಿಂಗ್ ಮಾತನಾಡಿ, ಕಲಿಕೆ ಎಂದಿಗೂ ನಿಲ್ಲಬಾರದು. ಗಳಿಸಿದ ಜ್ಞಾನ ಅಂತಿಮವಾಗಿ ವೈಯಕ್ತಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯ ಮತ್ತು ಸಂತೋಷಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ ಅನೇಕ ಸವಾಲುಗಳನ್ನು ಎದುರಿಸುವ ಹಾಗೂ ಜಯಿಸುವ ಕೌಶಲ ಮತ್ತು ಜ್ಞಾನವನ್ನು ಮುಂಬೈ ವಿಶ್ವವಿದ್ಯಾಲಯ ನೀಡಿದೆ. ಇದನ್ನು ಪಡೆದ ಎಲ್ಲರೂ ಮಹತ್ವಾಕಾಂಕ್ಷೆಯಿಂದ ಆದರ್ಶವಾಗಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ:ಕೊನೆಗೂ ಹೊರಬಿತ್ತು ಪುನೀತ್ ರಾಜಕುಮಾರ್ ಡೈರಿಯಲ್ಲಿದ್ದ ಆ ನಿರ್ಮಾಪಕರ ಹೆಸರು!
ಐತಿಹಾಸಿಕ ಮಹತ್ವವಿರುವ ಮುಂಬೈ ವಿಶ್ವವಿದ್ಯಾಲಯದಲ್ಲಿ ಅನೇಕ ಮಹಾಪುರುಷರು ವಿದ್ಯಾರ್ಜನೆ ಮಾಡಿ ತ್ಯಾಗ-ಬಲಿದಾನ, ವಿಜ್ಞಾನ, ಕಲೆ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ದೇಶಕ್ಕೆ ಮಹತ್ವದ ಕೊಡುಗೆಯನ್ನು ನೀಡಿರುತ್ತಾರೆ. ಈ ವಿಶ್ವವಿದ್ಯಾಲಯದಲ್ಲಿ ಕಲಿತು ಸಾಧನೆ ಮಾಡಿರುವುದು ಅಭಿಮಾನದ ಸಂಗತಿ ಎಂದು ಭಗತ್ ಸಿಂಗ್ ಕೊಶ್ಯಾರಿ ಶುಭ ಹಾರೈಸಿದರು.
ಪಾರ್ವತಿ ಪೂಜಾರಿಗೆ ರಾಜ್ಯಪಾಲರಿಂದ ಪ್ರಮಾಣಪತ್ರ ಪ್ರದಾನಕಲಾ ಭಾಗ್ವತ್​ಗೆ ರಾಜ್ಯಪಾಲರಿಂದ ಪ್ರಮಾಣಪತ್ರ ಪ್ರದಾನ
ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಸುಹಾಸ್ ಪೆಡ್ನೇಕರ್ ಅವರು, ಕರೊನಾ ದುರಿತ ಕಾಲದಲ್ಲಿಯೂ ವಿಶ್ವವಿದ್ಯಾಲಯದ ಚಟುವಟಿಕೆಗಳನ್ನು ಸಶಕ್ತವಾಗಿ ನಿಭಾಯಿಸಿದ ಎಲ್ಲ ವಿಭಾಗಗಳನ್ನೂ ಶ್ಲಾಘಿಸಿ ಅಭಿನಂದಿಸಿದರು. ಪ್ರವಾಸೋದ್ಯಮ ಹಾಗೂ ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ, ಸಹ ಕುಲಪತಿ ಪ್ರೊ.ರವೀಂದ್ರ ಕುಲಕರ್ಣಿ, ಉಪ ಕುಲಸಚಿವ ರಾಜೇಂದ್ರ ಪಗಾರೆ, ಪರೀಕ್ಷಾ ಮಂಡಳಿಯ ಸಂಚಾಲಕ ವಿನೋದ್ ಪಾಟೀಲ್, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಎನ್. ಉಪಾಧ್ಯ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಚಿದಾನಂದ ಭಾಗ್ವತ್, ಶ್ರೀಮತಿ ದೀಪಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಎರಡು ತಿಂಗಳ ಹಿಂದೆ ಕಂಪನಿ ಕ್ಲೋಸ್​, ಈಗ ಬದುಕು ಕೂಡ ಅಂತ್ಯ: ಎಸ್ಟೀಮ್​ ಕಾರಿನಲ್ಲಿ ಅನಾಥವಾಗಿತ್ತು ಶವ…
ಅಪಾರ ಪರಿಶ್ರಮ, ಮನೆಯಲ್ಲಿ ಪೂರಕ ವಾತಾವರಣ ಇವೆಲ್ಲದರ ಜೊತೆಗೆ ಕನ್ನಡ ವಿಭಾಗ ನೀಡಿದ ವಿಷಯ ಜ್ಞಾನ, ನಿರಂತರ ಪ್ರೋತ್ಸಾಹ, ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಅದು ವಹಿಸಿದ ಶ್ರಮ ಹಾಗೂ ತರಬೇತಿ ತಮ್ಮ ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಅದರಿಂದಲೇ ಈ ಹಂತ ತಲುಪಲು ಸಾಧ್ಯವಾಯಿತು ಎಂಬುದಾಗಿ ಪಾರ್ವತಿ ಪೂಜಾರಿ ಹಾಗೂ ಕಲಾ ಭಾಗ್ವತ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಿಭಾಗದ ಪ್ರಾಧ್ಯಾಪಕರು, ಮುಖ್ಯಸ್ಥರೂ ಆದ ಡಾ.ಜಿ.ಎನ್. ಉಪಾಧ್ಯ ಅವರು, ಈ ಸಾಧನೆಗಾಗಿ ಇಬ್ಬರೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಚಿನ್ನದಂಗಡಿಯ ಹುಡುಗಿಯ ಹೃದಯಕ್ಕೆ ಕನ್ನ ಹಾಕುವ ಯತ್ನ; ಕೊನೆಗೂ ಸೋತು ಆಕೆಗೆ ಚೂರಿ ಇರಿದವ ಹೆಣವಾಗಿ ಸಿಕ್ಕ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
