ನವದೆಹಲಿ:ಊಟವಾದ ಮೇಲೆ ಪಾನ್​ ಬೇಕೇಬೇಕು ಎನ್ನುವವರು ಅನೇಕರಿದ್ದಾರೆ. ಆದರೆ ಈ ಪಾನ್​ ಅಂಗಡಿಗೆ ಹೋದವರು ಒಂದು ಪಾನ್​ಗೆ ಉಸ್ಸಪ್ಪಾ ಎಂದು ನಿಟ್ಟುಸಿರು ಬಿಟ್ಟರೂ ಬಿಡಬಹುದು. ಏಕೆಂದರೆ ಇಲ್ಲಿನ ಆ ಒಂದು ಪಾನ್​ ಬೆಲೆ ಬರೋಬ್ಬರಿ 600 ರೂಪಾಯಿ!
ಹೌದು! ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂತದ್ದೊಂದು ಪಾನ್​ ಕಾರ್ನರ್​ ಇದೆ. ಅದರ ಹೆಸರು ಯಮೂಸ್​ ಪಂಚಾಯತ್​. ಇಲ್ಲಿ ರಫೆಲ್ಲೋ ಗೋಲ್ಡ್​ ಪಾನ್​ ತುಂಬಾ ವಿಶೇಷವಂತೆ. ಈ ವಿಶೇಷ ಪಾನ್​ನ ಬೆಲೆ 600 ರೂಪಾಯಿ. ಅಂದ ಹಾಗೆ ಈ ಪಾನ್​ನ ವಿಶೇಷತೆ ಏನು ಎನ್ನುವುದಕ್ಕೆ ಪಾನ್​ ಅಂಗಡಿಯವರೇ ಒಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಮಾಮೂಲಿ ಪಾನ್​ಗಳಂತೆ ಎಲೆಗೆ ಒಂದಿಷ್ಟು ಸುಣ್ಣ, ಫ್ಲೇವರ್​ಗಳನ್ನು ಹಾಕಲಾಗುತ್ತದೆ. ಅದಕ್ಕೆ ಒಂದಿಷ್ಟು ಖರ್ಜೂರದ ಪೇಸ್ಟ್​, ಲವಂಗ, ಏಲಕ್ಕಿ ಹೀಗೆ ಅನೇಕ ಪದಾರ್ಥಗಳನ್ನು ಮಿಶ್ರಣ ಮಾಡಲಾಗುತ್ತದೆ. ಕೊನೆಯಲ್ಲಿ ಎಲೆಯನ್ನು ಸುತ್ತಿ ಅದಕ್ಕೆ ಗೋಲ್ಡ್​ ಕಲರ್​ ಪೇಪರ್​ನ್ನು ಸುತ್ತಲಾಗುತ್ತದೆ. ಅದನ್ನು ಚೆರ್ರಿಯೊಂದಿಗೆ ಸುಂದರಗೊಳಿಸಿ ಸರ್ವ್​ ಮಾಡಲಾಗುತ್ತದೆ. ಹಾರ್ಟ್​ ಶೇಪ್​ನಲ್ಲಿ ಟ್ರೇನಲ್ಲಿತ್ತು ಕೊಡಲಾಗುತ್ತದೆ.


A post shared by Yamu’s Panchayat (@yamuspanchayat_official)


ಈ ವಿಶೇಷ ಪಾನ್​ ಮಾಡುವ ವಿಡಿಯೋ ವೈರಲ್​ ಆಗಿದೆ. ದುಬಾರಿ ಬೆಲೆಯ ಪಾನ್​ ಬಗ್ಗೆ ಹೆಚ್ಚಿನ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಹಣದಲ್ಲಿ ನಾವು ತಿಂಗಳು ಪೂರ್ತಿ ಪಾನ್​ ತಿನ್ನಬಹುದು ಎಂದು ಆರೋಪಿಸಲಾರಂಭಿಸಿದ್ದಾರೆ. (ಏಜೆನ್ಸೀಸ್​)
ಬೀದಿಯಲ್ಲಿ ಮಸ್ತ್​ ಡ್ಯಾನ್ಸ್​ ಮಾಡಿದ ನಟಿ ಸುಹಾಸಿನಿ ಹಾಗೂ ಅಕ್ಷರಾ ಹಾಸನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 10 =
Remember me
