ನವದೆಹಲಿ:ಚಿನ್ನ, ಬೆಳ್ಳಿಯ ಖರೀದಿದಾರರಿಗೆ ಕೇಂದ್ರ ಬಜೆಟ್​ನಿಂದ ಭರ್ಜರಿ ಉಡುಗೊರೆಯೇ ಸಿಕ್ಕಿದೆ. 2024-25ರ ಬಜೆಟ್​ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡ 15ರಿಂದ ಶೇ.6ಕ್ಕೆ ಇಳಿಸಲಾಗಿದೆ. ಪ್ಲಾಟಿನಂ ಮೇಲಿನ ಸುಂಕವನ್ನು ಶೇ.15.4ರಿಂದ ಶೇ.6.4ಕ್ಕೆ ಕಡಿತಗೊಳಿಸಲಾಗಿದೆ. ಈ ಕ್ರಮದಿಂದ ಮಂಗಳವಾರ ಮತ್ತು ಬಜೆಟ್ ಮಂಡನೆಯ ಮರುದಿನ ಬುಧವಾರ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭಾರೀ ಕುಸಿತ ಉಂಟಾಗಿದೆ. ಮುಂಬರುವ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇನ್ನಷ್ಟು ಇಳಿಮುಖವಾಗಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ವಹಿವಾಟಿನಲ್ಲಿ ಚಿನ್ನದ ದರ 10 ಗ್ರಾಂಗೆ 4000 ರೂ.ಗಳಷ್ಟು ಕಡಿಮೆಯಾಗಿದೆ.
ಮಲ್ಟಿ ಕಮೊಡಿಟಿ ಎಕ್ಸ್​ಚೇಂಜ್​ನಲ್ಲಿ (ಎಂಸಿಎಕ್ಸ್) ಬುಧವಾರ ಸಂಜೆ ವೇಳೆಗೆ 10 ಗ್ರಾಂ ಅಪರಂಜಿ ಚಿನ್ನದ ಬೆಲೆ 650 ರೂ. ಕಡಿಮೆಯಾಗಿ, 68,791 ರೂ.ಗೆ ಸ್ಥಿರಗೊಂಡಿದೆ. ಮಂಗಳವಾರ ಚಿನ್ನದ ದರ 10 ಗ್ರಾಂಗೆ 3,350 ರೂ. ಕಡಿಮೆಯಾಗಿತ್ತು. ಎರಡು ದಿನದಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 3500 ರೂ. ಇಳಿಕೆಯಾಗಿದ್ದು, 88,000 ರೂ.ಗೆ ತಗ್ಗಿದೆ. ಕಳೆದ 5 ದಿನಗಳಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 8,000 ರೂ. ಕುಸಿದಿರುವುದು ಗಮನಾರ್ಹ.
ರೀಟೇಲ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ:ಬೆಂಗಳೂರಲ್ಲಿ 22 ಕ್ಯಾರೆಟ್ ಚಿನ್ನದ ದರ 2750 ರೂ. ಇಳಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 64,950 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಈ ಮೂಲಕ ಸತತ ಐದನೇ ದಿನವೂ ಚಿನ್ನದ ದರ ಇಳಿಕೆಯಾದಂತಾಗಿದೆ. 24 ಕ್ಯಾರೆಟ್​ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 2990 ರೂ. ಕುಸಿದಿದ್ದು, 70,860ಕ್ಕೆ ಇಳಿದಿದೆ. ಬೆಂಗಳೂರಲ್ಲಿ 1 ಕೆಜಿ ಬೆಳ್ಳಿ ಬೆಲೆ 3500 ರೂ. ಇಳಿಕೆಯಾಗಿದ್ದು, 92,500 ರೂ.ಗೆ ಕುಸಿದಿದೆ.
ಮುಂಬೈ:ಕೇಂದ್ರ ಬಜೆಟ್ ಮಂಡನೆಯ ದಿನವಾದ ಜುಲೈ 23ರಂದು ಕೊಂಚ ಕುಸಿದಿದ್ದ ಷೇರುಪೇಟೆ, ಬುಧವಾರವೂ ಕುಸಿತ ಕಂಡಿತು. ಮುಂಬೈ ಷೇರು ಸೂಚ್ಯಂಕ (ಬಿಎಸ್​ಇ) ಸೆನ್ಸೆಕ್ಸ್ 280 ಅಂಕ ಇಳಿಕೆಯಾಗಿ (0.35%), 80,148ಕ್ಕೆ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್​ಎಸ್​ಇ) ನಿಫ್ಟಿ 65 (0.27%) ಅಂಕ ಕುಸಿತ ಕಂಡು. 24,413ಕ್ಕೆ ಸ್ಥಿರಗೊಂಡಿತು. ಸೆನ್ಸೆಕ್ಸ್​ನ 30 ಷೇರುಗಳ ಪೈಕಿ 20 ನಷ್ಟ ಕಂಡರೆ, 10 ಲಾಭ ಮಾಡಿವೆ. ನಿಫ್ಟಿಯ 50 ಷೇರುಗಳಲ್ಲಿ 30 ಏರಿಕೆ, 20 ಇಳಿಕೆ ದಾಲಿಸಿವೆ. ನಿಫ್ಟಿಯಲ್ಲಿ ಎಚ್​ಡಿಎಫ್​ಸಿ ಲೈಫ್, ಟೆಕ್ ಮಹೀಂದ್ರಾ, ಬಿಪಿಸಿಎಲ್ ಏರಿಕೆ ದಾಖಲಿಸಿದ್ದು, ಬಜಾಜ್ ಫಿನ್​ಸರ್ವ್, ಬ್ರಿಟಾನಿಯಾ ಇಳಿಕೆ ಕಂಡಿವೆ.
ನವದೆಹಲಿ:ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್​ಎನ್​ಎಲ್) 2023-24ನೇ ಆರ್ಥಿಕ ವರ್ಷದಲ್ಲಿ 5,371 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಕೇಂದ್ರ ದೂರಸಂಪರ್ಕ ಖಾತೆಯ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರಶೇಖರ್ ಬುಧವಾರ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 2022-23ರಲ್ಲಿ ಬಿಎಸ್​ಎನ್​ಎಲ್ 8,161 ಕೋಟಿ ರೂ. ನಷ್ಟ ಅನುಭವಿಸಿತ್ತು. ಬಿಎಸ್​ಎನ್​ಎಲ್ ಮತ್ತು ಮಹಾನಗರ ಟೆಲಿಕಾಂ ನಿಗಮ ಲಿಮಿಟೆಡ್ (ಎಂಟಿಎನ್​ಎಲ್) ಪುನರುಜ್ಜೀವನಕ್ಕೆ ಸರ್ಕಾರ ಕ್ರಮ ಕೈಗೊಂಡಿದ್ದು, ವಿಶೇಷ ಪ್ಯಾಕೇಜ್​ಗಳನ್ನು ಘೋಷಿಸಿದೆ. ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ 4ಜಿ ತಂತ್ರಜ್ಞಾನ ಅನುಷ್ಠಾನಕ್ಕೆ ಬಿಎಸ್​ಎನ್​ಎಲ್ 1 ಲಕ್ಷ ಪ್ರದೇಶಗಳಲ್ಲಿ 4ಜಿ ಟವರ್​ಗಳನ್ನು ಅಳವಡಿಸಲು ನಿರ್ಧರಿಸಿದೆ. ಈ ಉಪಕರಣಗಳನ್ನು 5ಜಿ ಸೇವೆ ಒದಗಿಸುವಂತೆ ಅಪ್​ಡೇಟ್ ಮಾಡಲು ಸಾಧ್ಯ ಎಂದು ಪೆಮ್ಮಸಾನಿ ಚಂದ್ರಶೇಖರ್ ವಿವರಿಸಿದ್ದಾರೆ.
Paris Olympics: ಒಲಿಂಪಿಕ್ಸ್‌ ಕ್ರೀಡಾಕೂಟ ವೀಕ್ಷಣೆಗೆ ಬಂದಿದ್ದ ಆಸ್ಟ್ರೇಲಿಯಾ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 + 18 =
Remember me
