ನವದೆಹಲಿ:ಚಿನ್ನ ಸರಬರಾಜು ಮಾಡುವ ಪ್ರಮುಖ ಬ್ಯಾಂಕ್​ಗಳು ಭಾರತಕ್ಕೆ ಸರಬರಾಜು ಕಡಿತ ಮಾಡಿರುವುದರಿಂದ ಹಬ್ಬಗಳ ಸೀಸನ್​ನಲ್ಲಿ ದೇಶದಲ್ಲಿ ಬಂಗಾರ ಇನ್ನಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಭಾರತ, ಜಗತ್ತಿನ ಎರಡನೇ ಅತಿ ದೊಡ್ಡ ಸ್ವರ್ಣ ಮಾರುಕಟ್ಟೆಯಾಗಿದೆ. ಚಿನ್ನ ಸರಬರಾಜುದಾರರು ಚೀನಾ, ಟರ್ಕಿ ಮತ್ತಿತರ ಹೆಚ್ಚು ಮೌಲ್ಯವಿರುವ ಮಾರುಕಟ್ಟೆಗಳಿಗೆ ಪೂರೈಸಲು ಗಮನ ಕೇಂದ್ರೀಕರಿಸಿದ್ದಾರೆ ಎಂದು ಮೂರು ಬ್ಯಾಂಕ್​ಗಳ ಅಧಿಕಾರಿಗಳು ಮತ್ತು ಚಿನ್ನ ದಾಸ್ತಾನು ನಿರ್ವಾಹಕರು ತಿಳಿಸಿದ್ದಾರೆ.
ಭಾರತಕ್ಕೆ ಚಿನ್ನ ಸರಬರಾಜು ಮಾಡುವ ಪ್ರಮುಖರಲ್ಲಿ ಸೇರಿರುವ ಐಸಿಬಿಸಿ ಸ್ಟಾ್ಯಂಡರ್ಡ್ ಬ್ಯಾಂಕ್, ಜೆಪಿ ಮಾರ್ಗನ್ ಮತ್ತು ಸ್ಟಾ್ಯಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಸಾಮಾನ್ಯವಾಗಿ ಹಬ್ಬದ ಋತುವಿಗೂ ಮುನ್ನ ಹೆಚ್ಚು ಬಂಗಾರವನ್ನು ಆಮದು ಮಾಡಿಕೊಂಡು ಸ್ಟ್ರಾಂಗ್ ರೂಮ್ಳಲ್ಲಿ (ವೋಲ್ಟ್) ಸಂಗ್ರಹಿಸಿಡುತ್ತವೆ. ಆದರೆ ವೋಲ್ಟ್ ಗಳಲ್ಲಿ ಕಳೆದ ವರ್ಷಕ್ಕಿಂತ ಶೇಕಡ 10ರಷ್ಟು ಕಡಿಮೆ ಚಿನ್ನದ ದಾಸ್ತಾನಿದೆ ಎಂದು ಮೂಲಗಳು ತಿಳಿಸಿವೆ.
ಕೆಲವೇ ಕೆಜಿ ಬಂಗಾರ!:‘ಸಾಮಾನ್ಯವಾಗಿ ವರ್ಷದ ಈ ಅವಧಿಯಲ್ಲಿ ವೋಲ್ಟ್​ಗಳಲ್ಲಿ ಕೆಲವು ಟನ್​ಗಟ್ಟಲೆ ಬಂಗಾರ ಇರಬೇಕಿತ್ತು. ಆದರೆ, ಈಗ ಕೇವಲ ಕೆಲವು ಕೆಜಿಯಷ್ಟೇ ಉಳಿದಿದೆ’ ಎಂದು ಮುಂಬೈನ ವೋಲ್ಟ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತೀಯರು ಅಕ್ಟೋಬರ್​ನಲ್ಲಿ ದಸರಾ, ದೀಪಾವಳಿ ಮತ್ತು ಧಂತೇರಾ ಹಬ್ಬಗಳನ್ನು ಆಚರಿಸುತ್ತಿದ್ದು ಈ ಸಂದರ್ಭ ಬಂಗಾರ ಖರೀದಿ ಮಂಗಳಕರ ಎನ್ನುವ ನಂಬಿಕೆಯಿದೆ. ಈ ಹಬ್ಬಗಳ ನಂತರ ಮದುವೆ ಸೀಸನ್ ಆರಂಭವಾಗುತ್ತದೆ. ಅದು ದೇಶದಲ್ಲಿ ಬಂಗಾರ ಖರೀದಿಯ ಅತಿ ದೊಡ್ಡ ಪ್ರೇರಕ ಸಮಯವಾಗಿರುತ್ತದೆ.
30% ಕುಸಿತ:ಸೆಪ್ಟೆಂಬರ್​ನಲ್ಲಿ ಭಾರತದ ಬಂಗಾರ ಆಮದು ಶೇಕಡ 30ರಷ್ಟು ಕುಸಿದು 68 ಟನ್ ಆವಕವಾಗಿದೆ. ಟರ್ಕಿಯ ಆಮದು ಶೇಕಡ 543ರಷ್ಟು ಏರಿಕೆಯಾಗಿದೆ. ಆಗಸ್ ್ಟ ನಲ್ಲಿ ಹಾಕಾಂಗ್ ಮೂಲಕ ಚೀನಾದ ಚಿನ್ನದ ಆಮದು ಶೇಕಡ 40ರಷ್ಟು ಏರಿದ್ದು ನಾಲ್ಕು ವರ್ಷದಲ್ಲೇ ಅತ್ಯಧಿಕವಾಗಿದೆ.
ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + 20 =
Remember me
