ನವದೆಹಲಿ:ಸದ್ಯ ಚಿನ್ನದ ದರ ಪ್ರತಿ 10 ಗ್ರಾಮ್​ಗೆ 57 ಸಾವಿರ ರೂ. ದಾಟಿದೆ. ಈ ಮೊದಲಿನ ಅಂದಾಜಿನ ಪ್ರಕಾರ ಮುಂದಿನ ವರ್ಷದ ಮಾರ್ಚ್​ ವೇಳೆಗೆ ಚಿನ್ನದ ಬೆಲೆ 65,000 ರೂ. ದಾಟುವ ನಿರೀಕ್ಷೆ ಹೊಂದಲಾಗಿತ್ತು. ನಿತ್ಯವೂ ಏರುತ್ತಿರುವ ಬೆಲೆ ಗಮನಿಸಿದರೆ, ದೀಪಾವಳಿ ಹೊತ್ತಿಗೆ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ.
ಚಿನ್ನದ ಬೆಲೆಯೀಗ ದಿನವೂ ಹೊಸ ದಾಖಲೆಯನ್ನೇ ಬರೆಯುತ್ತಿದೆ ಎನ್ನುತ್ತಿದ್ದಾರೆ ಮಾರುಕಟ್ಟೆ ಪಂಡಿತರು. ಕಳೆದ 16 ದಿನಗಳಿಂದ ಬಂಗಾರದ ಬೆಲೆ ಏರುಗತಿಯಲ್ಲಿಯೇ ಇದೆ.
ಇದನ್ನೂ ಓದಿ;ಮುಗಿಯುತ್ತ ಬಂತು ಅರ್ಧ ಶೈಕ್ಷಣಿಕ ವರ್ಷ; ನರ್ಸರಿ ಬಳಿಕ ಮುಚ್ಚುವ ಭೀತಿಯಲ್ಲಿವೆಯೇ ಖಾಸಗಿ ಶಾಲೆಗಳು?
ಜೆಪಿ ಮಾರ್ಗನ್​ ಸಂಸ್ಥೆಯ ಮಾರುಕಟ್ಟೆ ವಿಶ್ಲೇಷಣೆ ಪ್ರಕಾರ ಮುಂದಿನ ಎರಡು ವರ್ಷಗಳಲ್ಲಿ ಚಿನ್ನದ ಬೆಲೆ 70 ಸಾವಿರ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ತಜ್ಞರು ಹೇಳುವ ಪ್ರಕಾರ ಕೋವಿಡ್​19 ಸಂಕಷ್ಟದ ಬಳಿಕವೂ ಆರ್ಥಿಕ ಹಿಂಜರಿತ ನಿಯಂತ್ರಣಕ್ಕೆ ಬರುವುದಿಲ್ಲ. ಹೀಗಾಗಿ ಚಿನ್ನಕ್ಕೆ ಬೇಡಿಕೆ ಇದ್ದೇ ಇರಲಿದೆ ಹಾಗೂ ಬೆಲೆ ಏರುಗತಿಯಲ್ಲಿಯೇ ಮುಂದುವರಿಯಲಿದೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯ. ಹೀಗಾಗಿ ದೀಪಾವಳಿ ವೇಳೆಗೆ ಚಿನ್ನದ ಬೆಲೆ 70,000 ರೂ.ಗೆ ತಲುಪಿದರೂ ಅಚ್ಚರಿಯಿಲ್ಲ.
ಕಳೆದ ಒಂದು ತಿಂಗಳಿಗೆ ಹೋಲಿಸಿದಲ್ಲಿ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ 7 ಸಾವಿರ ರೂ. ಹೆಚ್ಚಾಗಿದೆ. ಜುಲೈ 9ರಂದು ಪ್ರತಿ 10 ಗ್ರಾ. ಬೆಲೆ 50,600 ರೂ. ಇತ್ತು. ಆಗಸ್ಟ್​ 7ರ ವೇಳೆಗೆ 7 ಸಾವಿರ ರೂ. ಹೆಚ್ಚಾಗಿದೆ.
ಇದನ್ನೂ ಓದಿ;26 ವರ್ಷಗಳ ಬಳಿಕ ಪಾತಾಳಕ್ಕಿಳಿದಿದೆ ಚಿನ್ನ; ಹಳದಿ ಲೋಹ ಆಕರ್ಷಣೆ ಕಳೆದುಕೊಂಡರೆ ಲಾಭ ಯಾರಿಗೆ?
ಆರ್ಥಿಕ ಹಿಂಜರಿತ ಕಾರಣದಿಂದ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತಿದೆ. ಆಭರಣ ಹಾಗೂ ಇತರ ಉದ್ದೇಶಗಳಿಗಾಗಿ ಚಿನ್ನದ ಖರೀದಿ ಕುಸಿದಿದೆ. ಆದರೆ, ಕಳೆದೆರಡು ವರ್ಷಗಳಲ್ಲಿ ಚಿನ್ನದ ಮೇಲಿನ ಹೂಡಿಕೆ ಶೇ.50ಕ್ಕೂ ಹೆಚ್ಚು ಆದಾಯ ತಂದು ಕೊಟ್ಟಿದೆ. ಹೀಗಾಗಿ ಚಿನ್ನಕ್ಕೆ ಇನ್ನಿಲ್ಲದ ಬೆಲೆ ಬಂದಿದೆ.
ಜೈಲುಪಾಲಾಗಿದ್ದರು ಇನ್ಫೋಸಿಸ್​ ನಾರಾಯಣ ಮೂರ್ತಿ; ವಿದೇಶದಲ್ಲಿ 5 ದಿನ ಅನ್ನಾಹಾರವಿಲ್ಲದೇ ಕಳೆದಿದ್ದರು….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
