ನವದೆಹಲಿ:ಪ್ರಸಕ್ತ ವರ್ಷದ ಮಧ್ಯ ಭಾಗದ ನಂತರ ಕಳೆಗುಂದಿರುವ ಚಿನ್ನ ಹೊಸ ವರ್ಷದಲ್ಲಿ ಮತ್ತೆ ಏರಿಕೆ ಕಾಣುವ ಸಾಧ್ಯತೆ ಇದೆ. ಪ್ರತಿ 10 ಗ್ರಾಂಗೆ 55 ಸಾವಿರ ರೂ.ವರೆಗೂ ತಲುಪುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಕಾಣುತ್ತಿರುವುದು, ದೇಶದಲ್ಲಿ ಹಣದುಬ್ಬರ ಪ್ರಮಾಣ ಏರಿಕೆ ಹಾಗೂ ಅಮೆರಿಕ ಪೆಡರಲ್ ರಿಸರ್ವ್ ಬಡ್ಡಿದರದಲ್ಲಿ ಹೆಚ್ಚಳ ಮಾಡುವ ಸೂಚನೆ ನೀಡಿರುವ ಕಾರಣ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಲಿದೆ.
ಕಳೆದ ಆಗಸ್ಟ್​ನಲ್ಲಿ ಚಿನ್ನ 10 ಗ್ರಾಂಗೆ 56,200 ರೂ.ಗೆ ಮಾರಾಟವಾಗಿತ್ತು. ಪ್ರಸ್ತುತ 48 ಸಾವಿರ ಸಮೀಪ ಇದೆ. ಸಾರ್ವಕಾಲಿಕ ಎತ್ತರದಿಂದ ಈಗಾಗಲೇ ಶೇ. 14ರಷ್ಟು ದರ ಇಳಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ದರ ಶೇ. 4 ಹೆಚ್ಚಾಗಿದೆ. ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿರುವುದು ಇದಕ್ಕೆ ಕಾರಣ. ಈ ವರ್ಷ ಷೇರುಮಾರುಕಟ್ಟೆಗೆ ಅತ್ಯಧಿಕ ಪ್ರಮಾಣದಲ್ಲಿ ಹಣದ ಹರಿವು ಬಂದ ಕಾರಣ ಚಿನ್ನದ ಬೆಲೆಯಲ್ಲಿ ತುಸು ಇಳಿಮುಖವಾಗಿದೆ. ಆದರೆ ಈಗ ಮತ್ತೆ ಕರೊನಾ ನಿರ್ಬಂಧ ಹೇರಿಕೆಯಾಗುತ್ತಿದೆ. ಅಮೆರಿಕ, ಬ್ರಿಟನ್, ಜರ್ಮನಿ ಸಹಿತ ಪ್ರಮುಖ ರಾಷ್ಟ್ರಗಳಲ್ಲಿ ಮತ್ತೆ ಲಾಕ್​ಡೌನ್ ವಿಧಿಸುವ ಸಾಧ್ಯತೆ ಇದೆ. ಹೀಗಾಗಿ ಚೇರುಪೇಟೆಯಲ್ಲಿ ಮತ್ತೆ ಇಳಿಕೆ ಕಂಡುಬಂದು, ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿನ್ನ 98 ರೂಪಾಯಿ ಇಳಿಕೆ:ಚಿನಿವಾರ ಪೇಟೆಯಲ್ಲಿ ಗುರುವಾರ 10 ಗ್ರಾಂ ಚಿನ್ನದ ದರ 98 ರೂ. ಇಳಿಕೆ ಕಂಡು 46,688 ರೂ. ಆಗಿದೆ. ಬೆಳ್ಳಿ ಕೆಜಿಗೆ 699 ರೂ. ಇಳಿಕೆ ಕಂಡು 60,024 ರೂ. ಆಗಿದೆ. ಷೇರುಮಾರುಕಟ್ಟೆಯಲ್ಲಿ ನಿಫ್ಟಿ 9 ಹಾಗೂ ಸೆನ್ಸೆಕ್ಸ್ 12 ಅಂಕಗಳ ಅಲ್ಪ ಇಳಿಕೆ ದಾಖಲಿಸಿದೆ. ರೂಪಾಯಿ 29 ಪೈಸೆ ಚೇತರಿಕೆ ಕಂಡಿದ್ದು, 74.42 ರೂ. ಆಗಿದೆ. ಇದು ಕಳೆದ ಒಂದು ತಿಂಗಳ ಗರಿಷ್ಠ ಏರಿಕೆಯಾಗಿದೆ.
ಇದು ವಾಟ್ಸ್​ಆ್ಯಪ್​ ಅಡ್ಮಿನ್ಸ್​ ಓದಲೇಬೇಕಾದ ವಿಚಾರ; ಗ್ರೂಪ್​ ಸದಸ್ಯರ ಪೋಸ್ಟ್​ಗಳಿಗೆ ಸಂಬಂಧಿಸಿದಂತೆ ಮತ್ತದೇ ಆದೇಶ ಪುನರುಚ್ಚಾರ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
