ಬೆಂಗಳೂರು:ಚಿನ್ನಾಭರಣ ಪ್ರಿಯರಿಗೆ ಈ ವರ್ಷದ ಬಜೆಟ್​ ಶುಭಸುದ್ದಿ ನೀಡಿತ್ತು. ಅದರಂತೆ ಬಜೆಟ್​ ಮಂಡನೆಯಾದಾಗಿನಿಂದಲೂ ಚಿನ್ನದ ದರದಲ್ಲಿ ಸತತವಾಗಿ ಇಳಿಕೆ ಕಂಡುಬಂದಿದೆ. ಐದು ದಿನಗಳಲ್ಲಿ 10 ಗ್ರಾಂಗೆ 2 ಸಾವಿರಕ್ಕೂ ಹೆಚ್ಚು ರೂಪಾಯಿ ಕಡಿಮೆಯಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶುಕ್ರವಾರ ಚಿನ್ನದ ದರದಲ್ಲಿ 163 ರೂಪಾಯಿ ಇಳಿಕೆಯುಂಟಾಗಿದ್ದು, 10 ಗ್ರಾಂ ಚಿನ್ನದ ದರ 46,738 ರೂಪಾಯಿಯಷ್ಟಾಗಿದೆ. ಬೆಳ್ಳಿಯ ದರದಲ್ಲಿ ಮಾತ್ರ 530 ರೂಪಾಯಿ ಏರಿಕೆಯಾಗಿದ್ದು ಒಂದು ಕೆಜಿ ಬೆಳ್ಳಿ ದರ 67,483 ರೂಪಾಯಿಷ್ಟಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್​ (10 ಗ್ರಾಂ) ಚಿನ್ನದ ದರ 43,750 ರೂಪಾಯಿಯಿದ್ದರೆ, 24 ಕ್ಯಾರೆಟ್​ (10 ಗ್ರಾಂ) ಚಿನ್ನದ ದರ 40,730 ರೂಪಾಯಿಯಾಗಿದೆ. ಶುಕ್ರವಾರದಂದು 10 ಗ್ರಾಂ ಚಿನ್ನದ ದರದಲ್ಲಿ 600 ರೂಪಾಯಿ ಇಳಿಕೆಯಾಗಿದೆ. ಸೋಮವಾರದಂದು 310 ರೂಪಾಯಿ, ಮಂಗಳವಾರ 350 ರೂಪಾಯಿ, ಬುಧವಾರ 400 ರೂಪಾಯಿ ಮತ್ತು ಗುರುವಾರ 400 ರೂಪಾಯಿ ಇಳಿಕೆ ದಾಖಲಾಗಿತ್ತು. ಈ ವರ್ಷದ ಆರಂಭದಲ್ಲಿ ಚಿನ್ನದ ದರ 46,800 ರೂಪಾಯಿಯಷ್ಟಿತ್ತು. (ಏಜೆನ್ಸೀಸ್​)
ಮನೆಯಲ್ಲಿನ ಲೈವ್​ ಸೆಕ್ಸ್​ನ್ನು ಸಿಸಿಟಿವಿಯಿಂದಲೇ ಕದ್ದು ನೋಡುತ್ತಿದ್ದ ಖತರ್ನಾಕ್​​ ಟೆಕ್ನಿಷಿಯನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 7 =
Remember me
