ಬೆಂಗಳೂರು:ಚಿನ್ನಾಭರಣ ಪ್ರಿಯರಿಗೆ ಶನಿವಾರ ಒಂದು ಗುಡ್​ ನ್ಯೂಸ್​ ಸಿಕ್ಕಿದೆ. ಚಿನ್ನದ ದರದಲ್ಲಿ ಶುಕ್ರವಾರದಂತೆ ಶನಿವಾರವೂ ಇಳಿಕೆ ಕಂಡುಬಂದಿದೆ.
ಚಿನಿವಾರು ಮಾರುಕಟ್ಟೆಯಲ್ಲಿ ಶನಿವಾರ 10 ಗ್ರಾಂ ಚಿನ್ನಕ್ಕೆ 457 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ 10 ಗ್ರಾಂ ಚಿನ್ನದ ದರ 46,390 ರೂಪಾಯಿಯಷ್ಟಾಗಿದೆ. ಶುಕ್ರವಾರದಂದು 661 ರೂಪಾಯಿ ಇಳಿಕೆ ಕಂಡುಬಂದಿತ್ತು. ಬೆಳ್ಳಿ ದರದಲ್ಲೂ 347 ರೂಪಾಯಿ ಇಳಿಕೆಯಾಗಿದ್ದು ಒಂದು ಕೆಜಿ ಬೆಳ್ಳಿ ದರ 67,894 ರೂಪಾಯಿಯಷ್ಟಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್​ ಚಿನ್ನದ ದರ (10 ಗ್ರಾಂ) 44,240 ರೂಪಾಯಿಯಿದ್ದರೆ, 24 ಕ್ಯಾರೆಟ್ ಚಿನ್ನದ ದರ 48,280 ರೂಪಾಯಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶನಿವಾರದಂದು 22 ಕ್ಯಾರೆಟ್​ ಚಿನ್ನದ ದರ (10 ಗ್ರಾಂ.) 46,390 ರೂಪಾಯಿಯಾಗಿದ್ದರೆ, ಮುಂಬೈನಲ್ಲಿ 46,430 ರೂಪಾಯಿಯಾಗಿದೆ. ಚೆನ್ನೈನಲ್ಲಿ 44,650 ರೂಪಾಯಿಯಷ್ಟಿದೆ.
2021ರ ಆರಂಭದಿಂದ ಈವರೆಗೆ ಚಿನ್ನದ ದರದಲ್ಲಿ ಶೇ. 2 ಇಳಿಕೆ ಕಂಡುಬಂದಿದೆ. ಕಳೆದ ವರ್ಷದ ಆಗಸ್ಟ್​ಗೆ ಹೋಲಿಸದರೆ 10 ಗ್ರಾಂಗೆ ಸುಮಾರು 7 ಸಾವಿರ ರೂಪಾಯಿ ದರ ಕಡಿಮೆಯಾಗಿದೆ. (ಏಜೆನ್ಸೀಸ್​)
ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?

ಪ್ರಾಮಿಸ್​ ದಿನದಂದೇ ಪ್ರೀತಿ ತಿರಸ್ಕರಿಸಿದ ಯುವತಿಗೆ ಸಾವಿನ ಶಿಕ್ಷೆ ಕೊಟ್ಟ ಪ್ರಿಯಕರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − two =
Remember me
