ಚೆನ್ನೈ:ಚಿನ್ನ ಎಂದರೆ ಎಲ್ಲರಿಗೂ ಒಮ್ಮೆ ಮುಟ್ಟಿ ನೋಡಬೇಕು ಎನಿಸುತ್ತದೆ. ಆದರೆ ಇಲ್ಲಿ ಮೂವರು ಸ್ಮಗ್ಲರ್ಸ್​ಗಳಿಂದ ಸಿಕ್ಕ ಚಿನ್ನವನ್ನು ಮುಟ್ಟಿನೋಡಲು ಒಮ್ಮೆ ಹಿಂಜರಿಕೆ ಉಂಟಾಗುತ್ತದೆ. ಏಕೆಂದರೆ ಚಿನ್ನ ಕಳ್ಳಸಾಗಣೆಗೆ ಈ ಸ್ಮಗ್ಲರ್ಸ್​ ಕಂಡುಕೊಂಡ ‘ದಾರಿ’ಯೇ ಅಂಥದ್ದು.
ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿಕೊಂಡು ಬಂದಿದ್ದ ಮೊಹಮ್ಮದ್ ಮುಸ್ತಾಫಾ ಮೀರಾಸಾ ಮರೈಕ್ಕಯರ್​, ಶೌಬರ್ ಅಲಿ ಐನಾಜ್​ ಹಾಗೂ ಶೇಖ್​ ಅಬ್ದುಲ್ಲ ಹಬೀಬ್​ ಅಬ್ದುಲ್ಲ ಎಂಬ ಮೂವರು ಸ್ಮಗ್ಲರ್ಸ್ ಕಸ್ಟಮ್ಸ್​ ಅಧಿಕಾರಿಗಳ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಎರಡು ಪ್ರತ್ಯೇಕ ವಿಮಾನಗಳಲ್ಲಿ ಚೆನ್ನೈಗೆ ಬಂದಿದ್ದ ಇವರನ್ನು ಕಸ್ಟಮ್ಸ್​ ಅಧಿಕಾರಿಗಳು ವಿಚಾರಣೆ ನಡೆಸಿ ತಪಾಸಣೆಗೆ ಒಳಪಡಿಸಿದಾಗ ಚಿನ್ನ ಕಳ್ಳಸಾಗಣೆ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಮೂವರೂ ಚಿನ್ನವನ್ನು ಪೇಸ್ಟ್ ಮಾಡಿ ಗುದನಾಳದಲ್ಲಿ ಇರಿಸಿಕೊಂಡು ತಂದಿದ್ದರು. ಜತೆಗೆ ಇವರು ಇನ್ನಿತರೆಡೆ ಅಡಗಿಸಿ ಇರಿಸಿಕೊಂಡಿದ್ದ ಚಿನ್ನವನ್ನೂ ಪತ್ತೆ ಮಾಡಿದ ಅಧಿಕಾರಿಗಳು, ಒಟ್ಟು 83.7 ಲಕ್ಷ ಮೌಲ್ಯದ 1.62 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − nine =
Remember me
