ಕೋಲ್ಕತಾ/ಕೋಯಿಕ್ಕೋಡ್​:ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 3, 756 ಗ್ರಾಂ ಚಿನ್ನ ಮತ್ತು 59 ಸಾವಿರ ಫಾರೀನ್​ ಬ್ರ್ಯಾಂಡ್​ ಸಿಗರೇಟ್ ಅನ್ನು ಕಸ್ಟಮ್ಸ್​ ಅಧಿಕಾರಿಗಳು ಕೇರಳದ ಕೋಯಿಕ್ಕೋಡ್​ ಮತ್ತು ಪಶ್ಚಿಮ ಬಂಗಾಳದ ವಿಮಾನ ನಿಲ್ದಾಣಗಳಲ್ಲಿಂದು ವಶಪಡಿಸಿಕೊಂಡಿದ್ದಾರೆ.
ಕಸ್ಟಮ್ಸ್​ ಅಧಿಕಾರಿಗಳ ಪ್ರಕಾರ ಸುಮಾರು 13 ಮಂದಿಯನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಮೊದಲಿಗೆ ಕೋಯಿಕ್ಕೋಡ್​ ವಿಮಾನ ನಿಲ್ದಾಣದಲ್ಲಿ 2,601 ಮತ್ತು 624 ಗ್ರಾಂ ಚಿನ್ನ ಕಳ್ಳಸಾಗಾಣೆ ಮಾಡುತ್ತಿದ್ದ 5 ಪ್ರಯಾಣಿಕರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಅಲ್ಲದೆ, ವಿದೇಶಿ ಬ್ರ್ಯಾಂಡ್​ನ 59 ಸಾವಿರ ಸಿಗರೇಟ್​ ಅನ್ನು ದೇಶದೊಳಗೆ ತರಲು ಯತ್ನಿಸಿದ 6 ಮಂದಿಯನ್ನು ಸಹ ಬಂಧಿಸಲಾಗಿದೆ.
ಇದನ್ನೂ ಓದಿ:VIDEO: ಮಾಸ್ಕ್‌ ಧರಿಸದವ ಪೊಲೀಸ್‌ ಮೇಲೆ ಕಾರುಹತ್ತಿಸಿ, ಬಾನೆಟ್‌ ಮೇಲೆ ಎಳೆದೊಯ್ದ!
ಮತ್ತೊಂದು ಪ್ರಕರಣದಲ್ಲಿ ಕೋಲ್ಕತಾದ ನೇತಾಜಿ ಸುಭಾಷ್​ ಚಂದ್ರ ಬೋಸ್​ ವಿಮಾನ ನಿಲ್ದಾಣದಲ್ಲಿ ಚಾಕೋಲೇಟ್​ ಪೇಪರ್​ನಲ್ಲಿ ಸುತ್ತಿಟ್ಟಿದ್ದ 531.20 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.(ಏಜೆನ್ಸೀಸ್​)
https://www.vijayavani.net/s-police-on-bannet-of-car/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
