ಕೋಲ್ಕತ್ತ:ಗೃಹ ಸಚಿವ ಅಮಿತ್ ಷಾ ಅವರ ಕೋಲ್ಕತ್ತ ಸಮಾವೇಶದಲ್ಲಿ ಪರವಾನಗಿ ಇರುವ ಗನ್​ ಹೊಂದಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದು ಪ್ರಶ್ನಿಸಿದಾಗ, ತಾನೊಬ್ಬ ಬಿಜೆಪಿ ಬೆಂಬಲಿಗ ಎಂದು ಹೇಳಿಕೊಂಡಿದ್ದ.ಅದಾದ ಕೆಲವೇ ಕ್ಷಣಗಳಲ್ಲಿ ಕೆಲವರು ತಾವು ಬಿಜೆಪಿ ಕಾರ್ಯಕರ್ತರು ಎಂದು ಹೇಳಿಕೊಂಡವರು ರ‍್ಯಾಲಿಯಲ್ಲಿ ಗೋಲಿ ಮಾರೋ..ಘೋಷಣೆ ಕೂಗಿದ್ದಾಗಿ ವರದಿಯಾಗಿದೆ.
ಅಮಿತ್​ ಷಾ ಅವರ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಒಂದಷ್ಟು ಜನರ ಗುಂಪು ಹೀಗೆ ಗೋಲಿ ಮಾರೋ (ದೇಶದ್ರೋಹಿಗಳಿಗೆ ಗುಂಡಿಕ್ಕಿ) ಎಂದು ಕೂಗುತ್ತ ಹೋಗಿದೆ. ಶಾಹಿದ್​ ಮಿನಾರ್​ ಮೈದಾನಕ್ಕೆ ತೆರಳುತ್ತಿದ್ದ ಈ ಗುಂಪಿನಲ್ಲಿದ್ದವರ ಕೈಯಲ್ಲಿ ಬಿಜೆಪಿ ಬಾವುಟವಿತ್ತು.
ಗೋಲಿಮಾರೋ ಎಂದು ಕೂಗಿದ್ದರ ಬಗ್ಗೆ ಕೋಲ್ಕತ್ತ ಹಿರಿಯ ಪೊಲೀಸ್ ಅಧಿಕಾರಿ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆದರೆ ಕಾನೂನು ಸುವ್ಯವಸ್ಥೆ ಹದಗೆಡಿಸಲು ಯಾರೇ ಪ್ರಯತ್ನಿಸಿದರೂ ಅವರ ವಿರುದ್ಧ ಕಠಿಣ ಕ್ರಮವಹಿಸುವುದಾಗಿ ತಿಳಿಸಿದ್ದಾರೆ.
ದೆಹಲಿ ಚುನಾವಣಾ ಪೂರ್ವ ಬಿಜೆಪಿ ಪ್ರಚಾರದ ವೇಳೆ ಈ ಗೋಲಿ ಮಾರೋ ಎಂಬ ಘೋಷಣೆ ತೀವ್ರ ವಿವಾದ ಸೃಷ್ಟಿಸಿತ್ತು. ಈಗ ಅಮಿತ್​ ಷಾ ಪಾಲ್ಗೊಂಡ ಸಮಾವೇಶದಲ್ಲೂ ಇದೇ ಘೋಷಣೆ ಮರುಕಳಿಸಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
