| ಡಾ.ಬನು ದೇಶಪಾಂಡೆ
ಆಹಾರ ಮಾನವನ ಮೂಲಭೂತ ಹಕ್ಕು, ಇದು ಸಾರ್ವಕಾಲಿಕ ಸತ್ಯ. ಪ್ರತಿಯೊಬ್ಬ ಪುರುಷ, ಮಹಿಳೆ, ಮಗುವಿಗೆ ಎಲ್ಲಕಾಲಕ್ಕೂ ಗುಣಮಟ್ಟದ ರುಚಿಕರ ಹಾಗೂ ವೈವಿಧ್ಯಮಯವಾದ ಆಹಾರ ದೊರೆಯಬೇಕು. ಆಹಾರ ಶುಚಿ-ರುಚಿಯಾಗಿರಬೇಕು. ಅದು ಪೌಷ್ಟಿಕವಾಗಿಯೂ ಇರಬೇಕು. ಪ್ರಾಕೃತಿಕ ವಿಕೋಪ, ಶೋಷಣೆ, ಆರ್ಥಿಕ ದುರ್ಬಲತೆ, ಅಂಗವಿಕಲತೆಯಿಂದ ಯಾರಿಗಾದರೂ ಆಹಾರದ ಕೊರತೆಯಾದಲ್ಲಿ ಸರ್ಕಾರ ಅವರಿಗೆ ಸೂಕ್ತ ಕಾರ್ಯಕ್ರಮಗಳಿಂದ ಸಾಕಷ್ಟು ಆಹಾರ ಒದಗಿಸಲು ಸಹಾಯ ಮಾಡುತ್ತದೆ. ಹಸಿವು, ಅಪೌಷ್ಟಿಕತೆ ಕೇವಲ ಆಹಾರದ ಕೊರತೆಯಿಂದ ಉಂಟಾಗುವುದಲ್ಲ. ಅದರ ಕಾರಣ ಅನೇಕ. ಬಡತನ, ಅಜ್ಞಾನ, ನಿರಕ್ಷರತೆ, ಆರ್ಥಿಕ ಅಸಮತೋಲನ, ಆರೋಗ್ಯ ಸೌಲಭ್ಯದ ಕೊರತೆ, ಮುಂತಾದವು.
ವಿಶ್ವ ಆಹಾರ ದಿನದ ಉದ್ದೇಶ ಜಗತ್ತಿನೆಲ್ಲೆಡೆ ಆಹಾರ ಸುಭದ್ರತೆಯನ್ನು ಒದಗಿಸುವಲ್ಲಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, ಪೋಷಣಾ ಖಾತ್ರಿಯನ್ನು ಪ್ರತಿ ವ್ಯಕ್ತಿಗೂ ಒದಗಿಸುವ ಸೂಕ್ತ ಮಾಹಿತಿ-ತಂತ್ರಜ್ಞಾನಗಳ ಅನುಷ್ಠಾನ ಹಾಗೂ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸುವುದು. ಇತ್ತೀಚೆಗೆ ಪರಿಸರ ಮಾಲಿನ್ಯ, ಹವಾಮಾನ ಬದಲಾವಣೆ, ಕುಗ್ಗುತ್ತಿರುವ ಕೃಷಿಭೂಮಿ, ನಶಿಸುತ್ತಿರುವ ಕಾಡು, ಬದಲಾಗುತ್ತಿರುವ ಜೀವನಶೈಲಿಯಿಂದ ಆಹಾರ ಸೇವನೆ ಹಾಗೂ ಪೋಷಣಾ ಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುತ್ತಿವೆ. ಇಂತಹ ಸನ್ನಿವೇಶದಲ್ಲಿ ಜಗವನ್ನು ಹಸಿರನ್ನಾಗಿಸುವ ಸಂಕಲ್ಪ ಸಾಮಯಿಕವಾಗಿದೆ. ಈ ನಿಟ್ಟಿನಲ್ಲಿ ‘ಒಂದುಗೂಡಿ ಬೆಳೆಯಿರಿ, ಪೋಷಿಸಿರಿ, ಸುಸ್ಥಿರತೆ ಕಾಪಾಡಿರಿ: ನಮ್ಮ ಕ್ರಿಯೆಗಳು- ನಮ್ಮ ಭವಿಷ್ಯ’ (Grow, nourish, sustain. Together. Our actions are our future.) ಎನ್ನುವ ಈ ವರ್ಷದ ವಿಶ್ವ ಆಹಾರ ದಿನಾಚರಣೆಯ ಸಂಕಲ್ಪ ಸೂಕ್ತವಾಗಿದೆ.
ತೋಟಗಾರಿಕಾ ಬೆಳೆಗಳ ಉತ್ಪಾದನೆ ಹೆಚ್ಚಾಗುತ್ತಿದ್ದರೂ ಹಣ್ಣು ಮತ್ತು ತರಕಾರಿಗಳ ಸೇವನೆಯ ಪ್ರಮಾಣ ಮಧ್ಯಮ ಹಾಗೂ ಬಡವರ್ಗದ ಜನರಲ್ಲಿ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ. ಇದರಿಂದ ಅಪೌಷ್ಟಿಕತೆಯ ಸಮಸ್ಯೆ ಅಧಿಕಗೊಂಡು ಸೂಕ್ಷ್ಮ ಪೋಷಕಾಂಶಗಳಾದ ಜೀವಸತ್ವ ಹಾಗೂ ಖನಿಜಾಂಶಗಳ ಕೊರತೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಆದ್ದರಿಂದ ಹಣ್ಣು, ತರಕಾರಿಗಳನ್ನೊಳಗೊಂಡ ಆಹಾರ ಬೆಳೆಗಳ ಸುಸ್ಥಿರ ಕೃಷಿ ಈ ಸಮಸ್ಯೆಗೆ ಪರಿಹಾರವಾಗಬಹುದು. ಈ ನಿಟ್ಟಿನಲ್ಲಿ ಮನೆಯ ಬಳಿ ಲಭ್ಯವಿರುವ ಸ್ಥಳದಲ್ಲಿ ಚಿಕ್ಕ ಕೈತೋಟಗಳನ್ನು ಬೆಳೆಯಲು ಮನಸ್ಸು ಮಾಡಿದರೆ ಆಹಾರ ಸುಭದ್ರತೆಗೆ ನಾಂದಿ ಹಾಡಿದಂತಾಗುತ್ತದೆ.
ಕೈತೋಟದ ನಿರ್ವಹಣೆ ಸ್ವಲ್ಪ ಕಷ್ಟವೆನಿಸಿದರೂ ಶ್ರಮದಾಯಕವಲ್ಲ. ಬದಲಿಗೆ ಪ್ರಯೋಜನಕಾರಿಯೇ ಹೌದು. ಏಕೆಂದರೆ ಒಮ್ಮೆ ರೂಢಿಸಿಕೊಂಡರೆ ವರ್ಷಪೂರ್ತಿ ವಿವಿಧ ಬೆಳೆಗಳನ್ನು ಬೆಳೆದು ಪುಷ್ಟಿಕರ ಹಾಗೂ ವೈವಿಧ್ಯಮಯ ಆಹಾರ ತಯಾರಿಸಿ, ಕುಟುಂಬದ ಆರೋಗ್ಯವನ್ನು ಕಾಪಾಡಬಹುದು. ವರ್ಷಪೂರ್ತಿ ವಿವಿಧ ಬಗೆಯ ಹಣ್ಣು ಹಾಗೂ ತರಕಾರಿಗಳನ್ನು ಪಡೆಯಬಹುದು.
(ಲೇಖಕರು ಆಹಾರ ವಿಜ್ಞಾನ ಮತ್ತು ಪೋಷಣೆ ವಿಷಯದ ಸಹ ಪ್ರಾಧ್ಯಾಪಕರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
