ಅಮರಾವತಿ:ವಜ್ರಗಳಿಗೆ ಆಂಧ್ರಪ್ರದೇಶ ಪ್ರಸಿದ್ಧಿ ಪಡೆದುಕೊಂಡಿರುವುದು ತಿಳಿದ ಸಂಗತಿಯೇ. ಕೆಲವು ಜಿಲ್ಲೆಗಳಲ್ಲಿ ಆಗಾಗ ಜನರು ವಜ್ರಗಳನ್ನು ಮಣ್ಣಿನಲ್ಲಿ ಹುಡುಕವುದನ್ನೂ ಕಾಣಬಹುದು. ಇದೇ ನಿಟ್ಟಿನಲ್ಲಿ ಕರ್ನೂಲ್ ಜಿಲ್ಲೆಯ ರೈತ ಮಣ್ಣನ್ನು ತಿರುವಿಹಾಕುತ್ತಿದ್ದಾಗ ಲಕ್ಷಾಂತರ ರೂ.ಬೆಲೆ ಬಾಳುವ ವಜ್ರವೊಂದು ದೊರೆತಿದ್ದು, ಸುತ್ತಲಿನ ಊರುಗಳ ಜನ ರೈತ ಮತ್ತು ಆತನ ಜಮೀನಿಗೆ ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ:‘ರಿಲೇಷನ್​ಷಿಪ್​ನಲ್ಲಿ ಜಗಳ ಸಾಮಾನ್ಯ’: ನಟಿ ಕೃತಿಸನನ್ ಹೀಗೆನ್ನಲು ಕಾರಣ ಇದೇ ನೋಡಿ..
ಕರ್ನೂಲ್​ ಜಿಲ್ಲೆಯ ತುಗ್ಗಲಿ ಮಂಡಲದ ಜೊನ್ನಗಿರಿಯ ತನ್ನ ಜಮೀನಿನಲ್ಲಿ ರೈತ ಕೃಷಿಕಾಯಕದಲ್ಲಿ ತೊಡಗಿರುವಾಗ ವಜ್ರ ಪತ್ತೆಯಾಗಿದೆ. ಇದು ವ್ಯಾಪಾರಿಯೊಬ್ಬರ ಗಮನಕ್ಕೆ ಬಂದಿದ್ದು, 12 ಲಕ್ಷ ರೂ ಜೊತೆಗೆ 50ಗ್ರಾಂ ಚಿನ್ನ ನೀಡಿ ಖರೀದಿಸಿದ್ದಾರೆ ಎನ್ನಲಾಗಿದೆ.
ರೈತನಿಗೆ ಹೊಲದಲ್ಲಿ ವಜ್ರ ಸಿಕ್ಕಿದ ವಿಷಯ ಜನರ ಕಿವಿಯಿಂದ ಕಿವಿಗೆ ಬಿದ್ದು, ಕಡೆಗೆ ಜನರು ಸುತ್ತಮುತ್ತಲಿನ ಹೊಲಗಳಲ್ಲಿ ವಜ್ರದ ಹುಡುಕಾಟಕ್ಕೆ ಇಳಿದಿದ್ದಾರೆ. ವ್ಯಾಪಾರಿಗಳು ಸಹ ಜನರನ್ನು ಹುಡುಕಾಟಕ್ಕೆ ಪ್ರೇರೇಪಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಹುಡುಕಾಟದಲ್ಲಿ ಜನರಿಗೆ ಸಿಗುವ ವಜ್ರಗಳನ್ನು ಸದ್ದಿಲ್ಲದೆ ಖರೀದಿಸುವ ವ್ಯಾಪಾರಿಗಳು ಅಧಿಕ ಬೆಲೆಗೆ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ. ವಜ್ರದ ಬಣ್ಣ ಮತ್ತು ಪ್ರಕಾರವನ್ನು ಅವಲಂಬಿಸಿ ಬೆಲೆ ಕಟ್ಟಲಾಗುತ್ತದೆ. ಕೆಲವರು ಚಿನ್ನ ನೀಡಿ ವಜ್ರ ಖರೀದಿಸಿ ತೆರಳುತ್ತಾರೆ ಎನ್ನಲಾಗುತ್ತಿದೆ.
‘ತಪ್ಪು ಮಾಡಿಲ್ಲ, ನನ್ನನ್ನು ಸಿಲುಕಿಸಿದ್ದಾರೆ’: ವರಸೆ ಬದಲಿಸಿದ ಕೋಲ್ಕತ್ತಾ ವೈದ್ಯೆ ರೇಪ್ ಪ್ರಕರಣ ಆರೋಪಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 + 20 =
Remember me
