ಬೆಂಗಳೂರು:ಕರೊನಾ ಮೂರನೇ ಅಲೆಯ ಭೀತಿ ಹೆಚ್ಚುತ್ತಿರುವಾಗ, ಮಕ್ಕಳಿಗೆ ಕರೊನಾ ಲಸಿಕೆ ಬಂದಿರುವ ಶುಭ ಸುದ್ದಿ ಬಂದಿದೆ. ಜೈಡಸ್​ ಕ್ಯಾಡಿಲಾದ ಮೂರು-ಡೋಸ್​​ ಕರೊನಾ ಲಸಿಕೆಗೆ, 12 ವರ್ಷ ಮೇಲ್ಪಟ್ಟವರಿಗೆ ಬಳಸಲು, ಭಾರತದ ಡ್ರಗ್​ ನಿಯಂತ್ರಕರು ಶುಕ್ರವಾರ ಅನುಮೋದನೆ ನೀಡಿದ್ದಾರೆ. ಜೈಕೋವಿ-ಡಿ ಹೆಸರಿನ ಈ ಡಿಎನ್​ಎ ಲಸಿಕೆಯು ಭಾರತದಲ್ಲಿ ಮಕ್ಕಳಿಗಾಗಿ ಲಭ್ಯವಾಗುತ್ತಿರುವ ಮೊದಲ ಕರೊನಾ ಲಸಿಕೆಯಾಗಿದೆ.
ಕ್ಯಾಡಿಲಾ ಹೆಲ್ತ್​ಕೇರ್ ಲಿಮಿಟೆಡ್​ ಕಂಪೆನಿ ಉತ್ಪಾದಿಸುತ್ತಿರುವ ಜೈಕೋವಿ-ಡಿ ಲಸಿಕೆಯನ್ನು ಎಲ್ಲಾ ವಯಸ್ಕರಿಗೆ ಮತ್ತು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ರಾಷ್ಟ್ರಾದ್ಯಂತ 28,000 ವಾಲೆಂಟಿಯರ್​ಗಳ ಮೇಲೆ ನಡೆಸಿದ ಟ್ರಯಲ್​ಗಳಲ್ಲಿ ಈ ಲಸಿಕೆಗೆ ಶೇ. 66.6 ಪರಿಣಾಮಕಾರಿತ್ವ ಇರುವುದು ಕಂಡುಬಂದಿದೆ ಎಂದು ಕಂಪೆನಿ ತಿಳಿಸಿದೆ.
ಇದನ್ನೂ ಓದಿ:ಸದ್ಯದಲ್ಲೇ ಈ ಮಹಾನಗರದಲ್ಲಿ ಕರೊನಾ ಲಸಿಕಾ ಅಭಿಯಾನ ಕಂಪ್ಲೀಟ್​!
ಕ್ಯಾಡಿಲಾ ಕಂಪೆನಿಯು ವರ್ಷಕ್ಕೆ 100 ರಿಂದ 120 ಮಿಲಿಯನ್​ ಡೋಸ್​ಗಳನ್ನು ಉತ್ಪಾದಿಸುವ ಗುರಿ ಹೊಂದಿದ್ದು, ಲಸಿಕೆಯ ಶೇಖರಣೆಯನ್ನು ಆರಂಭಿಸಿದೆ. ಇದು ಜಗತ್ತಿನ ಮೊದಲ ಪ್ಲಾಸ್ಮಿಡ್​ ಡಿಎನ್​ಎ ಲಸಿಕೆಯಾಗಿದ್ದು, ಭಾರತದಲ್ಲಿ ಬಳಕೆಗೆ ಅನುಮೋದನೆ ಪಡೆದಿರುವ 6ನೇ ಕರೊನಾ ಲಸಿಕೆಯಾಗಿದೆ.
ಜೈಕೋವಿ-ಡಿ ಲಸಿಕೆಯು ಡೆಲ್ಟಾ ರೂಪಾಂತರಿ ಸೇರಿದಂತೆ ಕರೊನಾ ವೈರಸ್​​ನ ಹೊಸ ರೂಪಾಂತರಿಗಳ ವಿರುದ್ಧವೂ ಪರಿಣಾಮಕಾರಿಯಾಗಿದೆ. ಈ ಲಸಿಕೆಯನ್ನು ಸಾಂಪ್ರದಾಯಿಕವಾಗಿ ಬಳಸುವ ಸಿರಿಂಜ್​ಗಳ ಬದಲಿಗೆ ಸೂಜಿರಹಿತ ಅಪ್ಲಿಕೇಟರ್​ನ ಮೂಲಕ ನೀಡಲಾಗುತ್ತದೆ ಎಂದು ಕ್ಯಾಡಿಲಾ ಕಂಪೆನಿ ತಿಳಿಸಿರುವುದಾಗಿ ವರದಿಯಾಗಿದೆ.(ಏಜೆನ್ಸೀಸ್)
ಸಿಂಪಲ್​ ಒನ್​ ಎಲೆಕ್ಟ್ರಿಕ್​ ಸ್ಕೂಟರ್​: ಐದೇ ದಿನಗಳಲ್ಲಿ 30,000 ಬುಕ್ಕಿಂಗ್!

ದೇಹಕ್ಕೆ ನವಚೈತನ್ಯ ನೀಡುವ ಏಕಪಾದ ರಾಜಕಪೋತಾಸನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
