ಎನ್​ಪಿಎಸ್ ಹಂತ-1 ಉದ್ಯೋಗದಾತರು ಸಂದಾಯ ಮಾಡುವ ಹಣದ ಮೇಲಿನ ತೆರಿಗೆ ವಿನಾಯಿತಿಯ ಲಾಭವನ್ನು ರಾಜ್ಯ ಸರ್ಕಾರಿ ನೌಕರರಿಗೂ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರಿ ನೌಕರರ ಎನ್​ಪಿಎಸ್ ನಿಧಿಗೆ ಈ ಹಿಂದೆ ಕೇಂದ್ರ ಸರ್ಕಾರ ನೀಡುವ ಪಾಲಿನ ಮೇಲೆ ಶೇ.10 ತೆರಿಗೆ ರಿಯಾಯಿತಿ ಪಡೆಯಲು ಅವಕಾಶ ನೀಡಲಾಗಿತ್ತು. 2019ರಲ್ಲಿ ಈ ಪ್ರಮಾಣವನ್ನು ಶೇ.14ಕ್ಕೆ ಹೆಚ್ಚಳ ಮಾಡಲಾಯಿತು. ನಂತರದಲ್ಲಿ ಈ ಅವಕಾಶವನ್ನು ಕೇಂದ್ರ ಸ್ವಾಯತ್ತ ಸಂಸ್ಥೆಗಳ ನೌಕರರಿಗೂ ವಿಸ್ತರಿಸಲಾಯಿತು. ಆದರೆ ರಾಜ್ಯ ಸರ್ಕಾರಿ ನೌಕರರು ಮಾತ್ರ ಶೇ.10 ರಿಯಾಯಿತಿ ಪಡೆಯುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರಿ ನೌಕರರೂ, ರಾಜ್ಯ ಸರ್ಕಾರ ಪಾವತಿಸುವ ಎನ್​ಪಿಎಸ್ ಪಾಲಿನ ಮೇಲೆ ಶೇ.14 ತೆರಿಗೆ ರಿಯಾಯಿತಿ ಪಡೆಯಬಹುದಾಗಿದೆ.
ಸಹಾಯಧನ ಕಡಿತ ಸಾಧ್ಯತೆ:ಬಜೆಟ್ ದಾಖಲೆಗಳ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಆಹಾರ, ರಸಗೊಬ್ಬರ ಮತ್ತು ಪೆಟ್ರೋಲಿಯಂ ಮೇಲಿನ ಸರ್ಕಾರದ ಸಹಾಯಧನ (ಸಬ್ಸಿಡಿ) 4,33,108 ಕೋಟಿ ರೂ. (ಶೇ.39) ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದ್ದು, 2022-23ರಲ್ಲಿ ಇದು ಶೇ.27 ಕಡಿತಗೊಂಡು 3,17,866 ರೂ. ತಲುಪಲಿದೆ ಎಂದು ಅಂದಾಜಿಸಲಾಗಿದೆ. 2021-22ನೇ ಸಾಲಿನ ವಾಸ್ತವಿಕ ಬಜೆಟ್​ನಲ್ಲಿ ಅಂದಾಜಿಸಲಾಗಿದ್ದ 7,07,707 ಕೋಟಿ ರೂ. ಗಳ ಸಬ್ಸಿಡಿಗಳನ್ನು ಪರಿಷ್ಕೃತ ಬಜೆಟ್ ಅಂದಾಜಿನಲ್ಲಿ 4,33,108 ಕೋಟಿ ರೂ.ಗಳಿಗೆ ಇಳಿಕೆ ಮಾಡಲಾಗಿತ್ತು. ಇದೀಗ 2022-23ನೇ ಸಾಲಿನಲ್ಲಿ ಸರ್ಕಾರ ಸಬ್ಸಿಡಿ ಮೊತ್ತವನ್ನು ಮತ್ತಷ್ಟು ಕಡಿತ ಮಾಡುವ ಸಾಧ್ಯತೆ ಇದ್ದು, ಪ್ರಕ್ತ ಸಾಲಿನಲ್ಲಿ 4,33,108 ಕೋಟಿ ರೂ. ಗಳಿಂದ 3,17,866 ಕೋಟಿ ರೂ. ಗೆ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + seven =
Remember me
