ಚೆನ್ನೈ:ಹಿರಿಯ ನಟ ಕಮಲ್​ ಹಾಸನ್​ ಆರೋಗ್ಯದ ಬಗ್ಗೆ ಚಿಂತೆಗೀಡಾಗಿದ್ದ ಅಭಿಮಾನಿಗಳಿಗೆ ಇದೀಗ ಶುಭ ಸುದ್ದಿ ಬಂದಿದೆ. ಕಮಲ್​ ಕೋವಿಡ್​ ಸೋಂಕಿನಿಂದ ಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಅವರು ಚಿಕಿತ್ಸೆ ಪಡೆಯುತ್ತಿದ್ದ ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಹಾಸ್ಪಿಟಲ್​ ವೈದ್ಯರು ತಿಳಿಸಿದ್ದಾರೆ. ಡಿಸೆಂಬರ್​ 4 ರಿಂದ ಮತ್ತೆ ತಮ್ಮ ಕೆಲಸವನ್ನು ಆರಂಭಿಸಬಹುದು ಎಂದೂ ಹೇಳಿದ್ದಾರೆ.
ಅಮೆರಿಕಾಕ್ಕೆ ಹೋಗಿಬಂದ ನಂತರ ಕರೊನಾದ ಲಕ್ಷಣಗಳು ತೋರಿಬಂದಿದ್ದ ಅವರಿಗೆ ನ.22 ರಂದು ಸೋಂಕು ದೃಢಪಟ್ಟಿತ್ತು. ಅಲ್ಪಪ್ರಮಾಣದ ಲಕ್ಷಣಗಳಿದ್ದ ಕಮಲ್​ಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಡಿ.3 ರವರೆಗೆ ಪ್ರತ್ಯೇಕವಾಗಿರಬೇಕು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುಹಾಸ್ ಪ್ರಭಾಕರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಮಂಡ್ಯ ಸಂಸದೆ ಸುಮಲತಾ ಸಹೋದರಿಗೆ ವಂಚನೆ! ಖಾಲಿ ಪತ್ರಕ್ಕೆ ಸಹಿ ಹಾಕುವಂತೆ ಧಮ್ಕಿ
ಕೆಲಸದ ವಿಷಯಕ್ಕೆ ಬಂದರೆ, ಸದ್ಯಕ್ಕೆ ಲೋಕೇಶ್​ ಕನಕರಾಜ್​ ನಿರ್ದೇಶನದ ತಮ್ಮ ಹೊಸ ಚಿತ್ರ ‘ವಿಕ್ರಮ್​’ನಲ್ಲಿ ಕಮಲ್​ ಪಾತ್ರ ನಿರ್ವಹಿಸುತ್ತಿದ್ದಾರೆ. ಜೊತೆಗೆ, ವಿಜಯ್​ ಟೆಲಿವಿಷನ್​ನಲ್ಲಿ ಪ್ರಸಾರವಾಗುತ್ತಿರುವ ಬಿಗ್​ ಬಾಸ್ ತಮಿಳ್​ ಸೀಸನ್ 5 ರ ಹೋಸ್ಟ್​ ಆಗಿದ್ದಾರೆ. ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ನಟಿ ರಮ್ಯ ಕೃಷ್ಣನ್​ ಬಿಗ್​ ಬಾಸ್​ ನಡೆಸಿಕೊಡುತ್ತಿದ್ದು, ಕಮಲ್​ರ ಚೇತರಿಕೆಯ ನಂತರ ಶೋಗೆ ವಾಪಸಾಗುವ ನಿರೀಕ್ಷೆ ಇದೆ.(ಏಜೆನ್ಸೀಸ್)
ಕಂಗನಾ ಪೋಸ್ಟ್​ಗಳನ್ನು ಸೆನ್ಸಾರ್​ ಮಾಡಿ ಎಂದು ಅರ್ಜಿ! ನಟಿಯ ಪ್ರತಿಕ್ರಿಯೆ ಹೀಗಿತ್ತು

ದೇಶಕ್ಕೆಲ್ಲಾ ಒಂದೇ ನೀತಿ! ಕೇಂದ್ರದ ಪ್ರಯಾಣ ನಿರ್ಬಂಧಗಳನ್ನು ತಕ್ಷಣ ಜಾರಿಗೊಳಿಸಲು ಮಹಾ ಸರ್ಕಾರಕ್ಕೆ ಸೂಚನೆ

ಮಹಾರಾಷ್ಟ್ರ ಕಡೆಗೆ ದೀದಿ ಸವಾರಿ! ‘ಈಗ ಯುಪಿಎ ಇಲ್ಲ’ ಎಂದ ಟಿಎಂಸಿ ನಾಯಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eleven =
Remember me
