ವಾಷಿಂಗ್ಟನ್​​:ಅಮೆರಿಕದಲ್ಲಿ ಸ್ಟೆಮ್​​ ಪ್ರೋಗ್ರಾಂಗಳಲ್ಲಿ ಉನ್ನತ ವ್ಯಾಸಂಗ ನಡೆಸುವ ಅಪೇಕ್ಷೆಯುಳ್ಳ ನಾಲ್ಕು ದೇಶಗಳ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಬಂದಿದೆ. ಖ್ವಾಡ್​ ರಾಷ್ಟ್ರಗಳಾದ ಭಾರತ, ಜಪಾನ್​, ಆಸ್ಟ್ರೇಲಿಯ ಮತ್ತು ಅಮೆರಿಕದಿಂದ ತಲಾ 25 ವಿದ್ಯಾರ್ಥಿಗಳಿಗೆ ಪ್ರತಿವರ್ಷ “ಖ್ವಾಡ್​ ಫೆಲೋಶಿಪ್​” ನೀಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ಶುಕ್ರವಾರ ವಾಷಿಂಗ್ಟನ್​ನ ವೈಟ್​ಹೌಸ್​ನಲ್ಲಿ ನಡೆದ ಖ್ವಾಡ್​ ನಾಯಕರ ಸಭೆಯಲ್ಲಿ ಬಿಡೆನ್​ ಈ ಘೋಷಣೆ ಮಾಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್ ಮತ್ತು ಜಪಾನಿನ ಯೋಶಿಹಿಡೆ ಶುಗಾ ಈ ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ಐತಿಹಾಸಿಕ ಅವಕಾಶ: ಮೊದಲ ಬಾರಿಗೆ ಯುವತಿಯರಿಂದ ಎನ್​ಡಿಎ ಪರೀಕ್ಷೆಗೆ ಅರ್ಜಿ ಆಹ್ವಾನ
ಸ್ಟೆಮ್​(ಸೈನ್ಸ್​, ಟೆಕ್ನಾಲಜಿ, ಇಂಜಿನಿಯರಿಂಗ್ ಮತ್ತು ಮ್ಯಾಥೆಮ್ಯಾಟಿಕ್ಸ್) ಪ್ರೋಗ್ರಾಂಗಳಲ್ಲಿ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ವ್ಯಾಸಂಗ ನಡೆಸಲು ಖಾಸಗಿ ಪ್ರಾಯೋಜಕತ್ವದಲ್ಲಿ 100 ವಿದ್ಯಾರ್ಥಿಗಳನ್ನು ಪ್ರತಿವರ್ಷ ಖ್ವಾಡ್​ ಫೆಲೋಶಿಪ್​ಗೆ ಆಯ್ಕೆ ಮಾಡಲಾಗುವುದು ಎನ್ನಲಾಗಿದೆ.(ಏಜೆನ್ಸೀಸ್)
ಗಡಿಯಾಚೆಗಿನ ಭಯೋತ್ಪಾದನೆ, ಪ್ರಾಕ್ಸಿ ಕಾರ್ಯಾಚರಣೆಗಳ ವಿರುದ್ಧ ಕೈಜೋಡಿಸಿದ ಭಾರತ-ಅಮೆರಿಕ

‘ವಿಜಯಾನಂದ’ ಚಿತ್ರದ ಆಡಿಷನ್ಸ್​ಗೆ ಜಮಾಯಿಸಿದ ಕಲಾವಿದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + six =
Remember me
