ಬೆಂಗಳೂರು:ಎಲಾನ್​ ಮಸ್ಕ್​ ಟ್ವಿಟರ್ ಮಾಲೀಕತ್ವ ಹೊಂದಿದ ಮೇಲೆ ಟ್ವಿಟರ್​ ಭಾರಿ ಸದ್ದಿನಲ್ಲಿದ್ದು, ಈ ಮೈಕ್ರೋಬ್ಲಾಗಿಂಗ್ ಸೈಟ್​ನಲ್ಲಿ ಬಹಳಷ್ಟು ಬದಲಾವಣೆಗಳೂ ಆಗಲಾರಂಭಿಸಿವೆ. ಅದರಲ್ಲೂ ಎರಡು ಬಹುನಿರೀಕ್ಷಿತ ಸೌಲಭ್ಯವನ್ನು ನೀಡಲಿರುವುದಾಗಿ ಮಸ್ಕ್​ ಘೋಷಿಸಿರುವುದು ಕುತೂಹಲ ಮೂಡಿಸಿದೆ.
ಪ್ರಪಂಚದ ನಿಖರ ಮಾಹಿತಿಯ ಮೂಲವಾಗಬೇಕು ಎಂಬ ನಿಟ್ಟಿನಲ್ಲಿ ಟ್ವಿಟರ್​ ರೂಪುಗೊಳಿಸಲಾಗುತ್ತಿದೆ ಎಂದಿರುವ ಮಸ್ಕ್, ವ್ಯಾಪಕ ವೆರಿಫಿಕೇಷನ್​ನಿಂದ ಪತ್ರಿಕೋದ್ಯಮದ ಪ್ರಜಾಪ್ರಭುತ್ವಕ್ಕೆ ಮತ್ತು ಸಾವರ್ಜನಿಕರ ಧ್ವನಿ ಎತ್ತಿ ಹಿಡಿಯಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಟ್ವಿಟರ್ ಬಗ್ಗೆ ಇರುವ ದೊಡ್ಡ ನಿರೀಕ್ಷೆ ಎಂದರೆ ಟೆಕ್ಸ್ಟ್​ ಲಿಮಿಟ್. ಆರಂಭದಲ್ಲಿ 140 ಕ್ಯಾರೆಕ್ಟರ್​ಗೆ ಸೀಮಿತವಾಗಿದ್ದ ಟ್ವಿಟರ್​ ನಂತರ ಆ ಸಾಮರ್ಥ್ಯವನ್ನು ದುಪ್ಟಟ್ಟುಗೊಳಿಸಿದ್ದರಿಂದ, ಈಗ 280 ಕ್ಯಾರೆಕ್ಟರ್​ ವರೆಗೆ ಬರೆಯಬಹುದಾಗಿದೆ. ಶೀಘ್ರದಲ್ಲೇ ಲಾಂಗ್​ಫಾರ್ಮ್​ ಟೆಕ್ಸ್ಟ್​ಗೂ ಅವಕಾಶ ಕೊಡುವುದಾಗಿ ಮಸ್ಕ್ ಹೇಳಿರುವುದು, ಇನ್ನುಮುಂದೆ ಉದ್ದುದ್ದದ ಬರಹಗಳಿಗೂ ಟ್ವಿಟರ್​ನಲ್ಲಿ ವೇದಿಕೆ ಸಿಗಲಿದೆ. ಸದ್ಯ ಜಾಸ್ತಿ ಬರೆದವರು ಅವನ್ನು ಒಂದೇ ಟ್ವೀಟ್​ನಲ್ಲಿ ಹಾಕಲಾಗದೆ ಸ್ಕ್ರೀನ್​ಶಾಟ್​ ತೆಗೆದು ಇಲ್ಲವೇ ಫೋಟೋ ಮಾದರಿಯಲ್ಲಿ ಬರಹವನ್ನು ಪೋಸ್ಟ್​ ಮಾಡುತ್ತಿದ್ದಾರೆ.
Twitter will soon add ability to attach long-form text to tweets, ending absurdity of notepad screenshots
— Elon Musk (@elonmusk)November 5, 2022

ಇನ್ನೊಂದೆಡೆ ಸದ್ಯದ ಬಹುತೇಕ ಸೋಷಿಯಲ್​ ಮೀಡಿಯಾಗಳಲ್ಲಿ ಕ್ರಿಯೇಟರ್​ ಮಾನಿಟೈಸೇಷನ್​ ಎಂದರೆ ಅದು ವಿಡಿಯೋ ಕಂಟೆಂಟ್ ಕ್ರಿಯೇಟರ್ಸ್​ಗೆ ಮಾತ್ರ ಎನ್ನುವಂತಿದೆ. ಆದರೆ ಎಲ್ಲ ಥರದ ಕಂಟೆಂಟ್​​ಗಳಿಗೂ ಕ್ರಿಯೇಟರ್ ಮಾನಿಟೈಸೇಷನ್​ ಕೊಡುವುದಾಗಿ ಮಸ್ಕ್ ಹೇಳಿರುವುದು, ಬರೀ ಬರವಣಿಗೆಯಲ್ಲೇ ಹೆಚ್ಚು ತೊಡಗಿಸಿಕೊಳ್ಳುವವರಲ್ಲಿ ನಿರೀಕ್ಷೆ ಮೂಡಿಸಿದೆ. ಮುಂದೆ ಬರಹಕ್ಕೂ ಮಾನಿಟೈಸೇಷನ್ ಇರಬಹುದೇ ಎಂಬ ಕುತೂಹಲ ಮೂಡಿದೆ.
Followed by creator monetization for all forms of content
— Elon Musk (@elonmusk)November 5, 2022


ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿಯ ಹತ್ಯೆ, ಇಬ್ಬರು ಆರೋಪಿಗಳ ಬಂಧನ..

Hindu ಧರ್ಮದ ಬಗ್ಗೆ ಮಾತನಾಡುವ ಹಕ್ಕು ನನಗೂ ಇಲ್ಲ, ಅವರಿಗೂ ಇಲ್ಲ: ಜಾರಕಿಹೊಳಿ ವಿವಾದಾತ್ಮಕ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
