ನವದೆಹಲಿ:ಅಡುಗೆ ಗ್ಯಾಸ್​ ಸಿಲಿಂಡರ್ ಬುಕ್ ಮಾಡಿ ಹಲವು ದಿನಗಳು ಕಳೆದರೂ ಬಾರದಿರುವುದು ಬಡ ಮತ್ತು ಮಧ್ಯಮ ವರ್ಗದವರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯಾಗಿಬಿಟ್ಟಿದೆ. ಆದರೆ ಈ ಸಮಸ್ಯೆಗೆ ಸದ್ಯದಲ್ಲೇ ಪರಿಹಾರ ಒದಗಲಿದೆ. ಸಿಲಿಂಡರ್​​ನ ಸ್ಟಾಕ್ ಇಲ್ಲದೆಯೋ, ಹೆಚ್ಚು ಆರ್ಡರ್ ಇರುವುದರಿಂದಲೋ ನಿಮ್ಮ ಡಿಸ್ಟ್ರಿಬ್ಯೂಟರ್ ತಕ್ಷಣ ನಿಮಗೆ ಗ್ಯಾಸ್ ಸಿಲಿಂಡರ್ ಒದಗಿಸಲು ಸಾಧ್ಯವಿಲ್ಲ ಎಂದರೆ, ಮನೆಯ ಬಳಿಯ ಬೇರೆ ಡೀಲರ್​ಗಳಿಂದ ಸಿಲಿಂಡರ್ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ.
ಹೌದು, ಈ ನಿಟ್ಟಿನಲ್ಲಿ ಏಕೀಕೃತ ಸಾಫ್ಟ್​ವೇರ್​ ಆಧರಿಸಿದ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಇನ್ನು ಮುಂದೆ ನಗರ ಪ್ರದೇಶಗಳಲ್ಲಿ ಅಡುಗೆಗಾಗಿ ಎಲ್​ಪಿಜಿ ಬಳಸುವ ಗ್ರಾಹಕರು, ರೀಫಿಲ್ ಬುಕ್ ಮಾಡಲು ತಮ್ಮ ಮನೆಯ ಸಮೀಪದಲ್ಲಿರುವ ಯಾವುದೇ ಮೂರು ಡೀಲರ್​ಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಲಿದ್ದಾರೆ ಎಂದು ಕೇಂದ್ರ ಸರ್ಕಾರದ ತೈಲ ಸಚಿವಾಲಯ ಕಾರ್ಯದರ್ಶಿ ತರುಣ್ ಕಪೂರ್ ಹೇಳಿದ್ದಾರೆ.
ಇದನ್ನೂ ಓದಿ:ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ
ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಹೊಸದಾಗಿ ರೂಪಿಸಲಾಗುವ ಏಕೀಕೃತ ಸಾಫ್ಟ್‌ವೇರ್ ಮೂಲಕ, ಅಂತರ್-ಕಂಪನಿಯ ವಲಸೆ ಕೂಡ ಸುಲಭವಾಗುತ್ತದೆ. ಜೊತೆಗೆ ಹೊಸ ಸಂಪರ್ಕಗಳನ್ನು ಕಡಿಮೆ ದಾಖಲಾತಿಗಳ ಮೇಲೆ ಶೀಘ್ರವಾಗಿ ಪಡೆಯುವ ಅವಕಾಶವಿರುತ್ತದೆ ಎಂದು ಕಪೂರ್ ಹೇಳಿದ್ದಾರೆ.
1 ಕೋಟಿ ಹೊಸ ಸಂಪರ್ಕ :ಮೋದಿ ಸರ್ಕಾರದ ವಿಶೇಷ ಸಾಧನೆಗಳಲ್ಲೊಂದು ಎಂದರೆ ಬಡ ಕುಟುಂಬಗಳಿಗೆ ಎಲ್​ಪಿಜಿ ಸಂಪರ್ಕಗಳನ್ನು ಕಲ್ಪಿಸಿದ್ದು. ಮಹಿಳೆಯರಿಗೆ ಸೌದೆ ಒಲೆಗಳ ಮುಂದೆ ಹೊಗೆ ಕುಡಿಯುತ್ತ ಅಡುಗೆ ಮಾಡುವ ಪಾಡಿನಿಂದ ಮುಕ್ತಿ ನೀಡಲು ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಸಹಾಯಕವಾಗಿದೆ. ಉಜ್ವಲಾ ಯೋಜನೆಯಿಂದಾಗಿ ಭಾರತದಲ್ಲಿ ಈಗಾಗಲೇ 29 ಕೋಟಿ ಮನೆಗಳಿಗೆ ಅಡುಗೆ ಅನಿಲ ಲಭ್ಯವಾಗಿದೆ. ಇದೀಗ ಬಿಟ್ಟುಹೋಗಿರುವ ಕುಟುಂಬಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು, ಮುಂಬರುವ ಎರಡು ವರ್ಷಗಳಲ್ಲಿ ಹೊಸದಾಗಿ ಒಂದು ಕೋಟಿ ಉಚಿತ ಎಲ್​ಪಿಜಿ ಕನೆಕ್ಷನ್​ಗಳನ್ನು ಒದಗಿಸಲಾಗುವುದು. ತನ್ಮೂಲಕ ಶೇ. 100 ರಷ್ಟು ಶುದ್ಧ ಅನಿಲದ ಸೌಲಭ್ಯವನ್ನು ದೇಶದಾದ್ಯಂತ ಕಲ್ಪಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಕಪೂರ್ ಹೇಳಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

“ಮೋದಿಗೆ ತಮಿಳುನಾಡು ಟಿವಿ ಥರ… ರಿಮೋಟ್​ನಿಂದ ಸಿಎಂನ ಕಂಟ್ರೋಲ್ ಮಾಡ್ತಾರೆ !”

2ನೇ ಹಂತದ ಕರೊನಾ ಲಸಿಕೆ ಅಭಿಯಾನ : ಇಲ್ಲಿದೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ

ಚೀನಾದೊಂದಿಗೆ ವ್ಯಾಪಾರ ವಹಿವಾಟು ಮುಂದುವರಿಸಬೇಕು : ರಾಜೀವ್ ಬಜಾಜ್ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 12 =
Remember me
