ನವದೆಹಲಿ:ಫಾಕ್ಸ್​ಕಾನ್ ಗ್ರೂಪ್, ಎಚ್​ಪಿ, ಡೆಲ್ ಮತ್ತು ಲೆನೊವೊದಂತಹ ಬೃಹತ್ ಸಂಸ್ಥೆಗಳು ಸೇರಿದಂತೆ 40 ಕಂಪನಿಗಳು ಲ್ಯಾಪ್​ಟಾಪ್, ಪರ್ಸನಲ್ ಕಂಪ್ಯೂಟರ್ ಮತ್ತು ಸರ್ವರ್​ಗಳನ್ನು ಭಾರತದಲ್ಲಿಯೇ ತಯಾರಿಸಲು ಪೊ›ಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಉತ್ಪಾದನೆಗೆ ಜೋಡಣೆ ಯಾಗಿರುವ ಪ್ರೋತ್ಸಾಹ- ಪಿಎಲ್​ಐ) ಐಟಿ ಹಾರ್ಡ್ ವೇರ್ ಯೋಜನೆಯಡಿ ಪೋ›ತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಿವೆ.
ಇದುವರೆಗೆ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಕಂಪನಿಗಳ ಸಂಖ್ಯೆ 40ಕ್ಕೆ ಏರಿದೆ. ಬುಧವಾರ ಮಧ್ಯರಾತ್ರಿವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಫ್ಲೆಕ್ಸ್​ಟ್ರಾನಿಕ್ಸ್, ಡಿಕ್ಸನ್, ಏಸರ್, ಥಾಂಪ್ಸನ್, ವಿವಿಡಿಎನ್, ಎಚ್​ಪಿ ಎಂಟರ್​ಪ್ರೖೆಸಸ್, ಆಸುಸ್ ಕಂಪನಿಗಳು ಕೂಡ ಅರ್ಜಿ ಸಲ್ಲಿಸಿವೆ. ಈ ಯೋಜನೆಗೆ ಅಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಭಾರತದಲ್ಲಿಯೇ ಲ್ಯಾಪ್​ಟಾಪ್, ಟ್ಯಾಬ್ಲೆಟ್, ಪಿಸಿ, ಸರ್ವರ್​ಗಳ ತಯಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾಗತಿಕ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದಕ ಕಂಪನಿಗಳನ್ನು ಈ ಪೋ›ತ್ಸಾಹಕ ಯೋಜನೆಯೊಂದಿಗೆ ಆಕರ್ಷಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳ ಉತ್ಪಾದನೆಯು ಕಳೆದ ಎಂಟು ವರ್ಷಗಳಲ್ಲಿ 17 ಪ್ರತಿಶತ ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರದೊಂದಿಗೆ ಸ್ಥಿರವಾದ ಬೆಳವಣಿಗೆ ಕಂಡಿದೆ. ಈ ವರ್ಷ ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆ 9 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಮೀರಿದೆ. ಇದೇ ರೀತಿಯ ಪಿಎಲ್​ಐ ಯೋಜನೆಯ ಮೂಲಕ ಭಾರತವು ಈಗ ಮೊಬೈಲ್ ಫೋನ್​ಗಳ ವಿಶ್ವದ ಎರಡನೇ ಅತಿದೊಡ್ಡ ತಯಾರಕನಾಗಿ ಹೊರಹೊಮ್ಮಿದೆ. ಮೊಬೈಲ್ ಫೋನ್​ಗಳ ರಫ್ತು ಈ ವರ್ಷ 90,000 ಕೋಟಿ ರೂಪಾಯಿಯ ಮೈಲಿಗಲ್ಲನ್ನು ದಾಟಿದೆ.
ಉದ್ದೇಶಿತ ಪಿಎಲ್​ಐ ಐಟಿ ಹಾರ್ಡ್​ವೇರ್ ಯೋೕಜನೆಯ ಯೋಜನೆಯು 75,000 ನೇರ ಉದ್ಯೋಗ ಗಳನ್ನು ಸೃಷ್ಟಿಸಲಿದ್ದು, ಪರೋಕ್ಷವಾಗಿ ಇದರ ಮೂರು ಪಟ್ಟು ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಡಿಕ್ಸನ್ ಕಂಪನಿಯು ನೋಯ್ಡಾದಲ್ಲಿ 20 ಸಾವಿರ ಉದ್ಯೋಗಿಗಳನ್ನು ಹೊಂದಿರುವ ಒಂದು ಘಟಕವನ್ನು ಸ್ಥಾಪಿಸಲಿದೆ. ಇದಕ್ಕಾಗಿ ಈಗಾಗಲೇ ಸೌಲಭ್ಯಗಳು ನಿರ್ವಣಗೊಂಡಿದ್ದು, ಇದು ಶೀಘ್ರದಲ್ಲೇ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಎಂದು ಸಚಿವ ವೈಷ್ಣವ್ ತಿಳಿಸಿದ್ದಾರೆ.
ಐಟಿ ಹಾರ್ಡ್​ವೇರ್​ಗಾಗಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್​ಐ) ಯೋಜನೆಯನ್ನು ಕಳೆದ ಮೇತಿಂಗಳಲ್ಲಿ 17 ಸಾವಿರ ಕೋಟಿ ರೂ.ಗಳ ಬಜೆಟ್ ವೆಚ್ಚದೊಂದಿಗೆ ಪ್ರಕಟಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಈ ಯೋಜನೆಗೆ ಅನುಮೋದನೆ ನೀಡಿದೆ. ಈಗ ಕಂಪನಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಮೊತ್ತವು 22890 ಕೋಟಿ ರೂ.ಗೆ ಹೆಚ್ಚಳವಾಗಬಹುದಾಗಿದೆ. ಈ ಯೋಜನೆಯು ದೇಶದಲ್ಲಿ ಐಟಿ ಹಾರ್ಡ್​ವೇರ್ ಉತ್ಪಾದನೆ ಹೆಚ್ಚಿಸುವ ಉದ್ದೇಶ ಹೊಂದಿದೆ. ಆತ್ಮನಿರ್ಭರ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ, ಭಾರತೀಯ ತಯಾರಕರನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಗೆ ಅಣಿಗೊಳಿಸಲು, ಹೂಡಿಕೆಗಳನ್ನು ಆಕರ್ಷಿಸಲು, ರಫ್ತುಗಳನ್ನು ಹೆಚ್ಚಿಸಲು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವನ್ನು ಸಂಯೋಜಿಸಲು ಮತ್ತು ಆಮದುಗಳಸ ಮೇಲಿನ ಅವಲಂಬನೆ ಕಡಿಮೆ ಮಾಡಲು ಸರ್ಕಾರವು ವಿವಿಧ ವಲಯಗಳಲ್ಲಿ ಉತ್ಪಾದನಾ ಲಿಂಕ್ಡ್ ಇನ್ಸೆಂಟಿವ್ (ಪಿಐಎಲ್) ಯೋಜನೆಗಳನ್ನು ಪ್ರಾರಂಭಿಸಿದೆ.
ಮೊಬೈಲ್​ಫೋನ್ ಉತ್ಪಾದನೆಯಲ್ಲಿ ಭಾರತ ಯಶಸ್ಸಿನ ಕಥೆ ಬರೆದಿದೆ. ಲ್ಯಾಪ್​ಟಾಪ್, ಪಿಸಿ ಮತ್ತು ಸರ್ವರ್​ಗಳ ತಯಾರಿಕೆಯಲ್ಲಿಯೂ ಇದೇ ರೀತಿಯ ಮೇಕ್-ಇನ್-ಇಂಡಿಯಾ ಯಶಸ್ಸಿನ ಕಥೆಯನ್ನು ಬರೆಯಲಾಗುವುದು.
|ಅಶ್ವಿನಿ ವೈಷ್ಣವ್​​, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 20 =
Remember me
