ಚೆನ್ನೈ:ಕಳ್ಳತನ ಮಾಡುವವರಿಗೆ ಕರುಣೆ ಎನ್ನುವುದು ಇರುತ್ತದೆಯೇ ಎಂದು ಕೇಳಿದರೆ ಉತ್ತರಿಸುವುದು ಕಷ್ಟ. ಆದರೆ ಇಲ್ಲೊಬ್ಬ ಕಳ್ಳನ ಬಗ್ಗೆ ಯಾವುದೇ ಅನುಮಾನವಿಲ್ಲದೆ ಕರುಣೆಯಿದೆ ಎನ್ನಬಹುದು. ಏಕೆಂದರೆ ಆ ಕಳ್ಳ ಕದಿಯುವ ಮುನ್ನ ಕ್ಷಮಾಪಣಾ ಪತ್ರವನ್ನೂ ಬರೆದಿಟ್ಟಿದ್ದಾನೆ.
ಸಾಮಾನ್ಯವಾಗಿ ಮನೆಯಲ್ಲಿ ಕಳ್ಳತನವಾದರೆ, ಕಳುವಾದ ವಸ್ತುಗಳು ಮರಳಿ ಸಿಗುವ ಭರವಸೆ ಇರುವುದಿಲ್ಲ. ಪೋಲೀಸರಿಗೆ ಹೇಳಿದರೂ ಕಳ್ಳನನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ, ವರ್ಷಗಳು ಕಳೆದರೂ ಕಳ್ಳತನವಾದ ವಸ್ತುಗಳು ಪತ್ತೆಯಾಗುವುದಿಲ್ಲ. ಆದರೆ, ಕಳ್ಳನಿಗೂ ಮಾನವೀಯತೆ, ಒಳ್ಳೆಯ ಮನಸ್ಸು ಇರುತ್ತದೆ ಎಂಬುದನ್ನು ಇಲ್ಲೊಬ್ಬ ಕಳ್ಳ ಸಾಬೀತುಪಡಿಸಿದ್ದಾನೆ.
ತಮಿಳುನಾಡಿನಲ್ಲಿ ಖದೀಮನೊಬ್ಬ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದಲ್ಲದೆ, ಕಳ್ಳತನ ಮಾಡಿರುವ ಬಗ್ಗೆ ಪತ್ರವನ್ನು ಸಹ ಬರೆದಿದ್ದು, ಕದ್ದ ಹಣವನ್ನು ಒಂದು ತಿಂಗಳೊಳಗೆ ವಾಪಸ್ ನೀಡುವುದಾಗಿ ಹೇಳಿದ್ದಾರೆ. ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಖದೀಮ ಬರೆದಿರುವ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದು, ಚಿತ್ತಿರೈ ಸೆಲ್ವಿನ್ ಎಂಬುವರು ತೂತುಕ್ಕುಡಿ ಜಿಲ್ಲೆಯ ತಿರುಚ್ಚೆಂದೂರಿನ ಮೇಘನಾಪುರದ ನಿವೃತ್ತ ಶಿಕ್ಷಕ. ಅವರಿಗೆ ಒಬ್ಬ ಮಗ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ. ಎಲ್ಲರು ಮದುವೆಯಾಗಿ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರ. ಜೂನ್ 17 ರಂದು ಸೆಲ್ವಿನ್ ತನ್ನ ಹೆಂಡತಿಯೊಂದಿಗೆ ಚೆನ್ನೈಗೆ ಹೋಗಿದ್ದರು. ಅವರ ಮನೆಯನ್ನು ನೋಡಿಕೊಳ್ಳಲು ಒಬ್ಬ ಮಹಿಳೆಯನ್ನು ನೇಮಿಸಲಾಗಿತ್ತು.
ಜುಲೈ 1ರಂದು ಮಹಿಳೆ ಮನೆ ಸ್ವಚ್ಛಗೊಳಿಸಲು ಬಂದಾಗ ಮನೆಯನ್ನು ನೋಡಿ ಒಂದು ಕ್ಷಣ ಶಾಕ್​ ಆಗಿದ್ದಾಳೆ. ಮನೆಯ ಬೀಗ ಒಡೆದು ಕಳ್ಳತನ ಮಾಡಿರುವ ಬಗ್ಗೆ ಮಹಿಳೆ ತಕ್ಷಣ ಮಾಲೀಕರಿಗೆ ಮಾಹಿತಿ ನೀಡಿದ್ದಾಳೆ. ಸೆಲ್ವಿನ್ ತಕ್ಷಣ ಮನೆಗೆ ಬಂದು ನೋಡಿದಾಗ ಬಿರುವಿನಲ್ಲಿದ್ದ 60 ಸಾವಿರ ರೂಪಾಯಿ ನಗದು ಮತ್ತು ಚಿನ್ನದ ಬಳೆಗಳು ಹಾಗೂ ಬೆಳ್ಳಿಯ ಸರಗಳು ಕಳುವಾಗಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವಾಗ ಕಳ್ಳ ಬರೆದ ಪತ್ರ ಅವರಿಗೆ ಸಿಕ್ಕಿದೆ. ಅದರಲ್ಲಿ, ನನ್ನನ್ನು ಕ್ಷಮಿಸಿ, ನಾನು ಒಂದು ತಿಂಗಳಲ್ಲಿ ಹಣವನ್ನು ಹಿಂತಿರುಗಿಸುತ್ತೇನೆ. ಮನೆಯಲ್ಲಿ ಹುಷಾರಿಲ್ಲ, ಅದಕ್ಕೆ ಕಳ್ಳತನ ಮಾಡಿದ್ದಾನೆ ಎಂದು ಬರೆದಿದ್ದಾನೆ. ಪತ್ರವನ್ನು ನೋಡಿದ ಪೊಲೀಸರು ಮತ್ತು ಮನೆಯ ಮಾಲೀಕರು ಒಂದು ಕ್ಷಣ ಅಚ್ಚರಿಗೀಡಾದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಖದೀಮ ಪತ್ರದಲ್ಲಿ ಹೇಳಿರುವಂತೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನೋ ಇಲ್ಲವೋ ಎಂಬುದನ್ನು ಸ್ವಲ್ಪ ಸಮಯ ಕಾದು ನೋಡಬೇಕಿದೆ.(ಏಜೆನ್ಸೀಸ್​)
ನೀವಿದನ್ನು ಗಮನಿಸಿದ್ರಾ? ವಿಶ್ವಕಪ್​ ಗೆದ್ದ ಹಾರ್ದಿಕ್​ ಪಾಂಡ್ಯಗೆ ಈ ಸ್ಥಿತಿ ಬರಬಾರದಿತ್ತು! ಫ್ಯಾನ್ಸ್​ ಬೇಸರ

ನಿಮಗಾದ ನೋವಿಗೆ ಕ್ಷಮೆಯಾಚಿಸುತ್ತೇನೆ: ಯುವ ಪತ್ನಿ ಶ್ರೀದೇವಿ ಭೈರಪ್ಪ ಭಾವುಕ, ಏನಾಯ್ತು ಡಿವೋರ್ಸ್​ ಕೇಸ್​?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × five =
Remember me
