ಭೋಪಾಲ್​:16 ಕೋಚುಗಳ ಗೂಡ್ಸ್​ ರೈಲೊಂದು ಮಧ್ಯಪ್ರದೇಶದ ಅನುಪ್ಪುರ್​ ಬಳಿ ಹಳಿತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ಕಲ್ಲಿದ್ದಲು ತುಂಬಿದ್ದ ಟ್ರೈನ್​ ಛತ್ತೀಸ್​ಗಢದ ಕೊರ್ಬಾದಿಂದ ಬರುತ್ತಿತ್ತು.
ಪ್ರಾಥಮಿಕ ವರದಿಯ ಪ್ರಕಾರ ಅಲಾನ್​ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೇ ಮೇಲಿನ ಹಳಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಅದರಿಂದ ರೈಲು ಹಳಿತಪ್ಪಿದ ಅದರ ಅನೇಕ ಕೋಚ್​​ಗಳು ನದಿಗೆ ಉರುಳಿವೆ. ಈ ಬಗ್ಗೆ ಅಧಿಕಾರಿಗಳೂ ಕೂಡ ಮಾಹಿತಿ ನೀಡಿದ್ದಾರೆ.
ಈವರೆಗೂ ಯಾವುದೇ ಹಾನಿಯ ಕುರಿತು ವರದಿ ಆಗಿಲ್ಲ ಮತ್ತು ರಕ್ಷಣಾ ಕಾರ್ಯ ಸ್ಥಳದಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನೇಕ ಕೋಚ್​ಗಳು ನದಿಗೆ ಉರುಳಿವೆ. ಇನ್ನು ಅನೇಕ ಕೋಚ್​ಗಳು ಅಂಟಿಕೊಂಂತೆ ಹಾಗೆಯೇ ನೇತಾಡುತ್ತಿವೆ. ಘಟನೆಯಿಂದ ಟನ್​ಗಟ್ಟಲೇ ಕಲ್ಲಿದ್ದಲು ನದಿಗೆ ಸುರಿದು ನಾಶವಾಗಿದೆ.
ಅಂದಹಾಗೆ ಗೂಡ್ಸ್​ ಟ್ರೈನ್​ ಮಧ್ಯಪ್ರದೇಶದ ಕಾಟ್ನಿ ಪ್ರದೇಶಕ್ಕೆ ತೆರಳುತ್ತಿತ್ತು.(ಏಜೆನ್ಸೀಸ್​)
‘ನನ್ನ-ಸುಮಲತಾರ ಅಶ್ಲೀಲ ವಿಡಿಯೋ ಮಾಡಲು ಹೊರಟಿದ್ರು ಕುಮಾರಸ್ವಾಮಿ, ಅಂಥ ಕೊಳಕು ಮನಸು ಅವರದ್ದು’

ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

ಪ್ರಿಯಕರನ ಮನೆಯಲ್ಲಿ ಯುವತಿ ಶವ ಪತ್ತೆ! ಮೃತಳ ಪೋಷಕರಿಂದ ನಡೆದೇ ಹೋಯ್ತು ಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − two =
Remember me
