ಗಂಡನ ಮೇಲೊಂದು ಕಣ್ಣಿಡಿ, ಪತ್ನಿಯ ಫೋನ್ ಟ್ರ್ಯಾಕ್ ಮಾಡುವುದು ಹೇಗೆ ಎಂದೆಲ್ಲ ಗೂಗಲ್​ನಲ್ಲಿ ಸರ್ಚ್ ಮಾಡ್ತಿದ್ದೀರಾ?! ಕೂಡಲೇ ಟ್ರ್ಯಾಕ್​ ಯುವರ್ ವೈಫ್’ಸ್ ಫೋನ್, ಸ್ಪೈ ಆನ್ ಯುವರ್ ಹಸ್ಪೆಂಡ್​, ಹೌ ಟು ಕ್ಯಾಚ್​ ಚೀಟಿಂಗ್ ಸ್ಪೌಸ್​ ವಿತ್​ ದಿಸ್ ಸೆಲ್ ಫೋನ್​, ಟ್ರ್ಯಾಕ್ ಮೈ ವೈಫ್​’ಸ್ ಫೋನ್​, ವಾಂಟು ಟು ಸ್ಪೈ ಆನ್ ಯುವರ್ ವೈಫ್​? ಎಂಬಿತ್ಯಾದಿ ಸಾಲುಗಳುಳ್ಳ ಮಾಹಿತಿಗಳು ಗೂಗಲ್​ನಲ್ಲಿ ಕೂಡಲೇ ನಿಮ್ಮ ಎದುರು ಕಾಣಿಸಿಕೊಳ್ಳುವುದಲ್ಲವೆ! ಇಂತಹ ವಿಷಯಗಳನ್ನು ಸರ್ಚ್ ಮಾಡುವವರಿಗೊಂದು ಬ್ಯಾಡ್ ನ್ಯೂಸ್ ಇಲ್ಲಿದೆ!
ಟ್ರ್ಯಾಕ್​ ಯುವರ್ ವೈಫ್’ಸ್ ಫೋನ್, ಸ್ಪೈ ಆನ್ ಯುವರ್ ಹಸ್ಪೆಂಡ್​ ಎಂಬಿತ್ಯಾದಿ ಪದಗಳುಳ್ಳ ಜಾಹೀರಾತುಗಳನ್ನು ಗೂಗಲ್​ ನಿಷೇಧಿಸಿದೆ. ಹೊಸ ನಿಯಮ ಪ್ರಕಾರ, ಜನರ ಮೇಲೆ ಅವರ ಅರಿವಿಗೆ ಬಾರದಂತೆ ಗೂಢಚರ್ಯೆ ಮಾಡಲು ತಂತ್ರಾಂಶ ಅಥವಾ ಜಿಪಿಎಸ್​ ಟ್ರ್ಯಾಕರ್​ಗಳನ್ನು ಹೊಂದಿದ ಆಡಿಯೋ ರೆಕಾರ್ಡರ್​, ಕ್ಯಾಮೆರಾ, ಡ್ಯಾಷ್ ಕ್ಯಾಮೆರಾ ಮತ್ತಿತರ ಉಪಕರಣಗಳನ್ನು ಇಂತಹ ವಾಕ್ಯಗಳನ್ನು ಬಳಸಿ ಮಾರಾಟ ಮಾಡುವುದಕ್ಕೆ ಅವಕಾಶವಿಲ್ಲ. ಆದಾಗ್ಯೂ, ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ನಿಗಾಕ್ಕೆ ಬಳಸುವ ಸರ್ವೈಲೆನ್ಸ್ ಉತ್ಪನ್ನ ಮತ್ತು ಸೇವೆಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಗೂಗಲ್​ ಹೊಸ ನಿಯಮದ ವ್ಯಾಪ್ತಿಗೆ ಸೇರಿಸಿಲ್ಲ.
ಇದನ್ನೂ ಓದಿ:ಇನ್ನು ಮುಂದೆ ಶನಿವಾರ, ಭಾನುವಾರ ಎರಡೂ ದಿನ ಲಾಕ್‌ಡೌನ್: ಗೋವಿಂದ ಕಾರಜೋಳ
ಎನೇಬ್ಲಿಂಗ್ ಡಿಸ್​ಹೋನೆಸ್ಟ್​ ಬಿಹೇವಿಯರ್ಎಂಬ ಶೀರ್ಷಿಕೆಯ ಹೊಸ ಪಾಲಿಸಿ ಆಗಸ್ಟ್​ 11ರಿಂದ ಚಾಲ್ತಿಗೆ ಬರಲಿದೆ. 2018ರಿಂದ ಇಲ್ಲಿವರೆಗೆ ನಡೆಸಿದ ಅಧ್ಯಯನ ಮತ್ತು ಸಂಶೋಧನೆಯ ಫಲಿತಾಂಶದ ಪರಿಣಾಮ ಗೂಗಲ್​ ಆಡ್ಸ್​ನ ನಿಯಮ ಪರಿಷ್ಕರಣೆ ಎಂದು ಕಂಪನಿ ಹೇಳಿಕೊಂಡಿದೆ. (ಏಜೆನ್ಸೀಸ್​)
ವಿಚಿತ್ರ ಕಳ್ಳನಿಗೆ ಐಷಾರಾಮಿ ಕಾರು ಕೀಗಳದ್ದೇ ವ್ಯಾಮೋಹ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:8 − one =
Remember me
