ಬೆಂಗಳೂರು:ಅಲ್ಪಾಬೆಟ್ ಮತ್ತು ಗೂಗಲ್​ ಸಿಇಒ ಸುಂದರ್​ ಪಿಚೈ ಅವರು ಇಂದು ಭಾರತದ ಡಿಜಿಟಲ್​ ಆರ್ಥಿಕತೆ ಉತ್ತೇಜನಕ್ಕಾಗಿ 10 ಬಿಲಿಯನ್​ ಡಾಲರ್​ (ಸುಮಾರು 75,000 ಕೋಟಿ ರೂ.)ನಿಧಿಯನ್ನು ಘೋಷಿಸಿದ್ದಾರೆ.
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗೂಗಲ್​ ಸಿಇಒ ಸುಂದರ್​ ಪಿಚೈ ಅವರೊಂದಿಗೆ ಸಂವಾದ ನಡೆಸಿದ್ದರು. ಕರೊನಾ ಸಂದರ್ಭದಲ್ಲಿ ಗೂಗಲ್​​ನಿಂದ ನಡೆಸಿದ ಹೊಸ ಕಾರ್ಯಕ್ರಮಗಳು, ಡಾಟಾ ಸೆಕ್ಯೂರಿಟಿ, ಸೈಬರ್​ ಸುರಕ್ಷತೆ ಬಗ್ಗೆ ಚರ್ಚೆ ನಡೆಸಿದ್ದರು. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದರು. ಅದಾದ ಕೆಲವೇ ಹೊತ್ತಲ್ಲಿ ಸುಂದರ್​ ಪಿಚೈ ಈ ಘೋಷಣೆ ಮಾಡಿದ್ದಾರೆ.
ಮುಂದಿನ 5-7 ವರ್ಷಗಳಲ್ಲಿ ನಾವು ಭಾರತದ ಡಿಜಿಟಲ್​ ಆರ್ಥಿಕತೆಯಲ್ಲಿ 75 ಸಾವಿರ ಕೋಟಿ ರೂ.ಹೂಡಿಕೆ ಮಾಡುತ್ತೇವೆ. ಈ ವಿಚಾರ ತಿಳಿಸಲು ತುಂಬ ಸಂತೋಷವಾಗುತ್ತಿದೆ. ಶೇರು ಹೂಡಿಕೆ, ಪಾಲುದಾರಿಕೆ, ಕಾರ್ಯಚಟುವಟಿಕೆ, ಮೂಲಸೌಕರ್ಯ ಮತ್ತು ಪರಿಸರ ವ್ಯವಸ್ಥೆಯನ್ನು ಇದು ಒಳಗೊಂಡಿದೆ. ಭಾತದ ಭವಿಷ್ಯ ಮತ್ತು ಡಿಜಿಟಲ್​ ಆರ್ಥಿಕತೆಯ ಮೇಲೆ ನಂಬಿಕೆಯಿಟ್ಟು ಹಣ ಹೂಡಿಕೆ ಮಾಡುತ್ತಿದ್ದೇವೆ ಎಂದು ಸುಂದರ್​ ಪಿಚೈ ತಿಳಿಸಿದ್ದಾರೆ.
ಡಿಜಿಟಲ್​ ಇಂಡಿಯಾದ ಪರಿಕಲ್ಪನೆಯನ್ನು ಪ್ರಸ್ತುತ ಪಡಿಸಿದ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ಈ ಕಲ್ಪನೆಯಿಂದಾಗಿ ಭಾರತದ ಶತಕೋಟಿ ಜನರು ಆನ್​ಲೈನ್​ ಬಳಕೆದಾರರು ಆಗಿದ್ದಾರೆ. ಕಡಿಮೆ ಬೆಲೆಯ ಸ್ಮಾರ್ಟ್​ಫೋನ್​ಗಳು, ಕೈಗೆಟಕುವ ದರದ ಡೇಟಾ ಸೌಲಭ್ಯ, ವಿಶ್ವದರ್ಜೆಯ ಟೆಲಿಕಾಂ ವ್ಯವಸ್ಥೆಗಳು ಹೊಸ ಅವಕಾಶಗಳಿಗೆ ದಾರಿ ಮಾಡಿಕೊಟ್ಟಿವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
Today at#GoogleForIndiawe announced a new $10B digitization fund to help accelerate India’s digital economy. We’re proud to support PM@narendramodi’s vision for Digital India – many thanks to Minister@rsprasad& Minister@DrRPNishankfor joining us.https://t.co/H0EUFYSD1q
— Sundar Pichai (@sundarpichai)July 13, 2020

This morning, had an extremely fruitful interaction with@sundarpichai. We spoke on a wide range of subjects, particularly leveraging the power of technology to transform the lives of India’s farmers, youngsters and entrepreneurs.pic.twitter.com/IS9W24zZxs
— Narendra Modi (@narendramodi)July 13, 2020

ಸಿಎಂ ಅಶೋಕ್​ ಗೆಹ್ಲೋಟ್​ ಎದುರು ಮೂರು ಬೇಡಿಕೆ ಇಟ್ಟ ಸಚಿನ್​ ಪೈಲಟ್​; ಷರತ್ತಿಗೆ ಒಪ್ಪಿದರೆ ವಾಪಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 10 =
Remember me
