ನವದೆಹಲಿ:ರಿಲಯನ್ಸ್​ ಇಂಡಸ್ಟ್ರೀಸ್​ನ ಜಿಯೋ ಫ್ಲಾಟ್​ಫಾರಂನಲ್ಲಿ ಗೂಗಲ್​ನ ಮಾತೃಸಂಸ್ಥೆ ಆಲ್ಫಬೆಟ್​ 33,838.15 ಕೋಟಿ ರೂ. ಹೂಡಿಕೆ ಮಾಡಿದೆ. ಇದಕ್ಕಾಗಿ ಅದು ಜಿಯೋ ಪ್ಲಾಟ್​ಫಾರಂನ ಶೇ.7.7 ಷೇರುಗಳನ್ನು ಖರೀದಿಸಿದೆ.
ರಿಲಯನ್ಸ್​ ಇಂಡಸ್ಟ್ರೀಸ್​ನ ಮುಖ್ಯಸ್ಥ ಮುಖೇಶ್​ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಗೂಗಲ್​ನ ಮಾತೃ ಸಂಸ್ಥೆ ಆಲ್ಫಬೆಟ್​ನ ಸಂಸ್ಥಾಪಕರನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದ ಬೆನ್ನಲ್ಲೇ ಈ ಹೂಡಿಕೆ ಬಂದಿರುವುದು ವಿಶೇಷವಾಗಿದೆ.
ಇದನ್ನೂ ಓದಿ:ಶ್ರೀಮಂತಿಕೆಯಲ್ಲಿ ಗೂಗಲ್​ ಸಂಸ್ಥಾಪಕರನ್ನೇ ಹಿಂದಿಕ್ಕಿದ ಮುಖೇಶ್​ ಅಂಬಾನಿ
ಗೂಗಲ್​ನ ಈ ಹೂಡಿಕೆಯೊಂದಿಗೆ ಜಿಯೋ ಫ್ಲಾಟ್​ಫಾರಂನಲ್ಲಿ ವಿವಿಧ ವಿದೇಶಿ ಹೂಡಿಕೆದಾರರಿಂದ ಒಟ್ಟಾರೆ 1,52,046.10 ಕೋಟಿ ರೂ. ಹೂಡಿಕೆ ಬಂದಂತಾಗಿದೆ. ವೆಬ್​ಕಾಸ್ಟ್​ ಮೂಲಕ ಬುಧವಾರ ನಡೆದ ರಿಲಯನ್ಸ್​ ಇಂಡಸ್ಟ್ರೀಸ್​ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಸ್ಥೆಯ ಸಿಎಂಡಿ ಮುಖೇಶ್​ ಅಂಬಾನಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ರಿಲಯನ್ಸ್​ನ ಡಿಜಿಟಲ್​ ವಿಭಾಗವಾಗಿರುವ ಜಿಯೋ ಫ್ಲಾಟ್​ಫಾರಂನಲ್ಲಿ ಸಂಗೀತ ಮತ್ತು ಸಿನಿಮಾ ಆ್ಯಪ್​ಗಳು ಇವೆ. ಜಿಯೋ ಇನ್ಫೋಕಾಂ ಎಂಬ ಟೆಲಿಕಾಂ ಕಂಪನಿ ಇದರ ಮುಖ್ಯ ಘಟಕವಾಗಿದೆ. ಇಲ್ಲಿ ಒಟ್ಟು 387 ದಶಲಕ್ಷ ಬಳಕೆದಾರರು ನೋಂದಣಿ ಹೊಂದಿದ್ದಾರೆ ಎನ್ನಲಾಗಿದೆ.
ಮಾನವರ ಮೇಲಿನ ಮೊದಲ ಹಂತದ ಪರೀಕ್ಷೆಯಲ್ಲಿ ಮಾಡೆರ್ನಾದ ಕೋವಿಡ್​-19 ಚುಚ್ಚುಮದ್ದು ಪಾಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
